ವಿಶ್ವ ಪ್ರವಾಸೋದ್ಯಮ ದಿನ : ವನಭೋಜನ ಪ್ರವಾಸ
ಬಳ್ಳಾರಿ, 30 ಸೆಪ್ಟೆಂಬರ್ (ಹಿ.ಸ.) ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಅಕ್ಷರ ಗ್ಲೋಬಲ್ ಶಾಲೆ ಮತ್ತು ಕಾಲೇಜು ವತಿಯಿಂದ ‘AGS VANYA BANDHANA’ ಹೆಸರಿನಲ್ಲಿ ತಾಯಿ–ಮಕ್ಕಳಿಗಾಗಿ ಒಂದು ದಿನದ ವಿಶೇಷ ಅನುಭವಾತ್ಮಕ - ವನಭೋಜನ ಪ್ರವಾಸ - ವನ್ನು ಆಯೋಜಿಸಲಾಗಿತ್ತು. ನಗರದ ಸಿರುಗುಪ್ಪ ರಸ್ತೆ ವಕ್ರಾಣಿ
ವಿಶ್ವ ಪ್ರವಾಸೋದ್ಯಮ ದಿನ : ವನಭೋಜನ ಪ್ರವಾಸ


ಬಳ್ಳಾರಿ, 30 ಸೆಪ್ಟೆಂಬರ್ (ಹಿ.ಸ.)

ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಅಕ್ಷರ ಗ್ಲೋಬಲ್ ಶಾಲೆ ಮತ್ತು ಕಾಲೇಜು ವತಿಯಿಂದ ‘AGS VANYA BANDHANA’ ಹೆಸರಿನಲ್ಲಿ ತಾಯಿ–ಮಕ್ಕಳಿಗಾಗಿ ಒಂದು ದಿನದ ವಿಶೇಷ ಅನುಭವಾತ್ಮಕ - ವನಭೋಜನ ಪ್ರವಾಸ - ವನ್ನು ಆಯೋಜಿಸಲಾಗಿತ್ತು.

ನಗರದ ಸಿರುಗುಪ್ಪ ರಸ್ತೆ ವಕ್ರಾಣಿ ಕ್ಯಾಂಪ್ ಸಮೀಪದ ಅಕ್ಷರ ಧಾಮ ಕ್ಯಾಂಪಸ್ನಲ್ಲಿರುವ ಅಕ್ಷರ ಗ್ಲೋಬಲ್ ಶಾಲೆ ಮತ್ತು ಕಾಲೇಜಿನ ಅಧ್ಯಕ್ಷೆ ಡಾ. ಅನುರಾಧಾ ಎಸ್.ಜಿ. ಅವರ ನೇತೃತ್ವದಲ್ಲಿ ಪ್ರವಾಸ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ತಾಯಿ–ಮಕ್ಕಳು ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ನ ಹಂಪಿ ಝೂ ಮತ್ತು ಸಫಾರಿಗೆ ಭೇಟಿ ನೀಡಿದರು.

ಪ್ರವಾಸದ ವೇಳೆ ವನ್ಯಜೀವಿಗಳು, ಪ್ರಕೃತಿ, ಪರಿಸರ ಸಂರಕ್ಷಣೆ ಹಾಗೂ ಹಂಪಿಯ ಐತಿಹಾಸಿಕ ಪರಂಪರೆಯ ಕುರಿತು ತಾಯಿ–ಮಕ್ಕಳು ನೇರ ಅನುಭವದ ಮೂಲಕ ಮಾಹಿತಿ ಪಡೆದುಕೊಂಡರು.

ಅಕ್ಷರ ಗ್ಲೋಬಲ್ ಶಾಲೆ ಮತ್ತು ಕಾಲೇಜಿನ ಅಧ್ಯಕ್ಷೆ ಡಾ. ಅನುರಾಧಾ ಎಸ್.ಜಿ., ನಮ್ಮ ಶಾಲೆಯ ವತಿಯಿಂದ ಇದೇ ಮೊದಲ ಬಾರಿಗೆ ‘AGS VANYA BANDHANA’ ಎಂಬ ಒಂದು ದಿನದ ಪ್ರವಾಸವನ್ನು ಆಯೋಜಿಸಲಾಗಿದೆ. ಪ್ರವಾಸವನ್ನು ಕೇವಲ ಮನರಂಜನೆಗೆ ಸೀಮಿತಗೊಳಿಸದೆ, ಮಕ್ಕಳಲ್ಲಿ ಪರಿಸರ ಕಾಳಜಿ, ವನ್ಯಜೀವಿ ಸಂರಕ್ಷಣೆ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮದ ಕುರಿತು ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಜೊತೆಗೆ ತಾಯಿ–ಮಕ್ಕಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಾಗೂ ನೈಜ ಪರಿಸರದ ನಡುವೆ ಕಲಿಯುವ ಅವಕಾಶವನ್ನು ಕಲ್ಪಿಸಲಾಗಿದೆ” ಎಂದು ಹೇಳಿದರು.

ಅಕ್ಷರ ಗ್ಲೋಬಲ್ ಕಿಂಡರ್ಗಾರ್ಟನ್ ಶಾಲೆಯ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಉಪನ್ಯಾಸಕರು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಪ್ರವಾಸದ ಅನುಭವಗಳನ್ನು ಪರಸ್ಪರ ಹಂಚಿಕೊಂಡರು.

ಈ ಸಂದರ್ಭದಲ್ಲಿ ಅಕ್ಷರ ಗ್ಲೋಬಲ್ ಕಿಂಡರ್ಗಾರ್ಟನ್ ಶಾಲೆಯ ಪ್ರಾಂಶುಪಾಲರಾದ ಸವಿತಾ ಹಾಗೂ ಅಕ್ಷರ ಧಾಮ ಕ್ಯಾಂಪಸ್ನ ಅಕ್ಷರ ಗ್ಲೋಬಲ್ ಶಾಲೆಯ ಪ್ರಾಂಶುಪಾಲರಾದ ಡಾ. ಸುಹಾಸಿನಿ ಸೇರಿದಂತೆ ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande