ಅಮಲಾಪುರದಲ್ಲಿ ಕರಡಿ ದಾಳಿ, ರೈತನ ತಲೆಗೆ ತೀವ್ರ ಪೆಟ್ಟು
ಕೂಡ್ಲಿಗಿ, 26 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿದ ಘಟನೆ ತಾಲ್ಲೂಕಿನ ಅಮಲಾಪುರ ಗ್ರಾಮದ ಬಳಿ ಶನಿವಾರ ಬೆಳಗ್ಗೆ ನಡೆದಿದೆ. ಗಾಯಗೊಂಡ ಕೃಷಿಕರು ಅಮಲಾಪುರ ಗ್ರಾಮದ ನಿವಾಸಿ ಬಸವರಾಜ್. ಬಸವರಾಜ್ ಅವರು ಕೆಲಸಕ್ಕೆಂದು ಶನಿವಾರ ಬೆಳಗ್ಗೆ ಹೊಲಕ್
ಅಮಲಾಪುರದಲ್ಲಿ ಕರಡಿ ದಾಳಿ, ರೈತನ ತಲೆಗೆ ತೀವ್ರ ಪೆಟ್ಟು


ಅಮಲಾಪುರದಲ್ಲಿ ಕರಡಿ ದಾಳಿ, ರೈತನ ತಲೆಗೆ ತೀವ್ರ ಪೆಟ್ಟು


ಕೂಡ್ಲಿಗಿ, 26 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿದ ಘಟನೆ ತಾಲ್ಲೂಕಿನ ಅಮಲಾಪುರ ಗ್ರಾಮದ ಬಳಿ ಶನಿವಾರ ಬೆಳಗ್ಗೆ ನಡೆದಿದೆ.

ಗಾಯಗೊಂಡ ಕೃಷಿಕರು ಅಮಲಾಪುರ ಗ್ರಾಮದ ನಿವಾಸಿ ಬಸವರಾಜ್.

ಬಸವರಾಜ್ ಅವರು ಕೆಲಸಕ್ಕೆಂದು ಶನಿವಾರ ಬೆಳಗ್ಗೆ ಹೊಲಕ್ಕೆ ಹೋಗಿದ್ದಾರೆ. ಆಗ, ಕರಡಿಯು

ಏಕಾಏಕಿ ಇವರ ಮೇಲೆ ದಾಳಿ ಮಾಡಿ ತಲೆ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಪರಿಚಿ

ತೀವ್ರ ಗಾಯಗೊಳಿಸಿದೆ. ಆದರೆ, ಇವರ ತಲೆಗೆ ತೀವ್ರವಾದ ಗಾಯಗಳಾಗಿವೆ.

ಸ್ಥಳೀಯರು ಗಾಯಾಳು ಬಸವರಾಜ್ ಅವರನ್ನು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ತಕ್ಷಣ ಕರೆದುಕೊಂಡು ಬಂದು, ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಬಿಮ್ಸಗೆ ಕಳಿಸಲಾಗಿದೆ.

ಕೂಡ್ಲಿಗಿ ವಲಯ ಅರಣ್ಯ ಅಧಕಾರಿ ಸಂದೀಪ್ ನಾಯಕ ಅವರು, `ರೈತ ಬಸವರಾಜ್ ಅವರ ಮೇಲೆ ಶನಿವಾರ ಬೆಳಗ್ಗೆ ಕರಡಿ ದಾಳಿ ಮಾಡಿದೆ. ದಾಳಿಯಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳ್ಳಾರಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ' ಎಂದು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande