ಅಕ್ಟೋಬರ್ ನಿಂದ 70 ಸಾವಿರ ಗ್ರಾಮೀಣ ಯುವಕರಿಗೆ ಕೌಶಲ ತರಬೇತಿ
ನವದೆಹಲಿ, 25 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ದೀನದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ–2.0 ಅಡಿಯಲ್ಲಿ ದೇಶದ 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಕ್ಟೋಬರ್ 2026ರಿಂದ ಸುಮಾರು 70 ಸಾವಿರ ಗ್ರಾಮೀಣ ಯುವಕರಿಗೆ ಕೌಶಲ್ಯ ತರಬೇತಿ ಆರಂಭವಾಗಲಿದೆ. ಇದಕ್ಕಾಗಿ 2,015 ತರಬೇತಿ ತಂಡಗಳ
ಅಕ್ಟೋಬರ್ ನಿಂದ 70 ಸಾವಿರ ಗ್ರಾಮೀಣ ಯುವಕರಿಗೆ ಕೌಶಲ ತರಬೇತಿ


ನವದೆಹಲಿ, 25 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ದೀನದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ–2.0 ಅಡಿಯಲ್ಲಿ ದೇಶದ 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಕ್ಟೋಬರ್ 2026ರಿಂದ ಸುಮಾರು 70 ಸಾವಿರ ಗ್ರಾಮೀಣ ಯುವಕರಿಗೆ ಕೌಶಲ್ಯ ತರಬೇತಿ ಆರಂಭವಾಗಲಿದೆ. ಇದಕ್ಕಾಗಿ 2,015 ತರಬೇತಿ ತಂಡಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ.

ಕೇಂದ್ರ ಸರ್ಕಾರವು ನಿಗದಿತ ಅವಧಿಯಲ್ಲಿ ತರಬೇತಿ ತಂಡಗಳನ್ನು ಆರಂಭಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಗುರಿ ಹಂಚಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಸೂಚಿಸಿದೆ.

ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಕಾರ, ದೀನದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ–2.0 ಅಂತರ್ಜಾಲ ತಾಣದ ಮೂಲಕ 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಯೋಜನೆ ಅನುಷ್ಠಾನ ಸಂಸ್ಥೆಗಳಿಗೆ 1,200ಕ್ಕೂ ಅಧಿಕ ಯೋಜನೆಗಳ ಅಡಿಯಲ್ಲಿ 5.6 ಲಕ್ಷ ತರಬೇತಿ ಗುರಿಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಉಳಿದ ರಾಜ್ಯಗಳಲ್ಲಿಯೂ ಗುರಿ ಹಂಚಿಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.

ಬಡ ಗ್ರಾಮೀಣ ಯುವಕರಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ಒದಗಿಸುವ ಕೇಂದ್ರ ಪ್ರಾಯೋಜಿತ ಯೋಜನೆಯೇ ದೀನದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ. ಯೋಜನೆಯಡಿ ತರಬೇತಿ ಅವಧಿ ಮೂರರಿಂದ 12 ತಿಂಗಳವರೆಗೆ ಇರಲಿದೆ. 2026–28ರ ಎರಡು ವರ್ಷಗಳ ಅವಧಿಗೆ ಎಲ್ಲ 31 ಪಾಲುದಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 9 ಲಕ್ಷಕ್ಕೂ ಅಧಿಕ ತರಬೇತಿ ಗುರಿಗಳನ್ನು ಹಂಚಿಕೆ ಮಾಡಲಾಗಿದೆ.

ಯೋಜನೆಯಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಗ್ರಾಮೀಣ ಯುವಕರನ್ನು ಗುರುತಿಸಿ, ಅವರ ಬೇಡಿಕೆಗೆ ಅನುಗುಣವಾಗಿ ಸಾರ್ವಜನಿಕ–ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡಬೇಕಿದೆ. ತರಬೇತಿ ಪಠ್ಯಕ್ರಮಗಳು ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿಗೆ ಅನುಗುಣವಾಗಿರಲಿದ್ದು, ಫಲಾನುಭವಿಗಳನ್ನು ಸುಸ್ಥಿರ ಉದ್ಯೋಗಕ್ಕೆ ಸಿದ್ಧಗೊಳಿಸುವ ಉದ್ದೇಶ ಹೊಂದಿವೆ.

ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಇದು ಮಹತ್ವದ ಹಂತವಾಗಿದ್ದು, ಯೋಜನೆ ಅನುಷ್ಠಾನ ಸಂಸ್ಥೆಗಳಿಗೆ ಗುರಿ ಹಂಚಿಕೆ ಮಾಡಿ ನಿಗದಿತ ಅವಧಿಯಂತೆ ತರಬೇತಿ ತಂಡಗಳನ್ನು ಆರಂಭಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಚಿವಾಲಯ ಸೂಚಿಸಿದೆ. ಅಕ್ಟೋಬರ್ 31, 2026ರೊಳಗೆ ಯೋಜನೆ ಅನುಷ್ಠಾನ ಸಂಸ್ಥೆಗಳಿಗೆ ಗುರಿ ಹಂಚಿಕೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.

ತರಬೇತಿ ತಂಡಗಳ ಆರಂಭದ ಪ್ರಕ್ರಿಯೆಗೆ ವೇಗ ನೀಡಲು ಗ್ರಾಮೀಣಾಭಿವೃದ್ಧಿ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಂತ ಹಂತವಾಗಿ ಪರಿಶೀಲನಾ ಸಭೆಗಳನ್ನೂ ನಡೆಸುತ್ತಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande