ಲಕ್ಷ್ಮೇಶ್ವರ ಪಟ್ಟಣದ ರೌಡಿ ಶೀಟರ್ ಕೊಲೆ ಪ್ರಕರಣ: ಮೂವರ ಬಂಧನ
ಗದಗ, 24 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್:- ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ತಟ್ಟಿ ಪ್ಲಾಟ್ನಲ್ಲಿ ರೌಡಿ ಶೀಟರ್ ಇರ್ಫಾನ್ ತಹಶೀಲ್ದಾರ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಲಕ್ಷ್ಮೇಶ್ವರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಯ
ಫೋಟೋ


ಗದಗ, 24 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:- ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ತಟ್ಟಿ ಪ್ಲಾಟ್ನಲ್ಲಿ ರೌಡಿ ಶೀಟರ್ ಇರ್ಫಾನ್ ತಹಶೀಲ್ದಾರ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಲಕ್ಷ್ಮೇಶ್ವರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಯಾಜ್ ಮುಲ್ಲಾ, ಮಹಮ್ಮದ್ ವಾಸೀಮ್ ಮುಲ್ಲಾ ಹಾಗೂ ಮಹಮ್ಮದ್ ಜಬೀವುಲ್ಲಾ ಬಂಧಿತ ಆರೋಪಿಗಳು. ನಿನ್ನೆ ನಡೆದ ಈ ಹತ್ಯೆ ಪ್ರಕರಣ ಲಕ್ಷ್ಮೇಶ್ವರ ಪಟ್ಟಣದಲ್ಲಿ ಆತಂಕಕ್ಕೆ ಕಾರಣವಾಗಿತ್ತು.

₹30 ಸಾವಿರ ಹಣದ ವಿಚಾರ:

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ₹30 ಸಾವಿರ ಹಣದ ವ್ಯವಹಾರವೇ ಹತ್ಯೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಕೊಲೆಯಾದ ಇರ್ಫಾನ್ ಆರೋಪಿಗಳಿಗೆ ₹30 ಸಾವಿರ ಹಣ ನೀಡಿದ್ದ ಎನ್ನಲಾಗಿದ್ದು, ಈ ಹಣಕ್ಕೆ ಸಂಬಂಧಿಸಿದಂತೆ ಬಡ್ಡಿ ನೀಡುವಂತೆ ಇರ್ಫಾನ್ ಆರೋಪಿಗಳನ್ನು ಕೇಳಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಗಲಾಟೆ ಉಂಟಾಗಿ, ಆರೋಪಿಗಳು ಚಾಕು, ಕೊಡಲಿ ಸೇರಿದಂತೆ ಮಾರಕಾಸ್ತ್ರಗಳಿಂದ ಇರ್ಫಾನ್ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಮಾರಕಾಸ್ತ್ರಗಳಿಂದ ನಿರಂತರವಾಗಿ ದಾಳಿ ನಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಇರ್ಫಾನ್ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಳೆಯ ದ್ವೇಷದ ಆಯಾಮದಲ್ಲೂ ತನಿಖೆ:

ಇನ್ನು ಕೊಲೆಯಾದ ಇರ್ಫಾನ್ ತಹಶೀಲ್ದಾರ್ ಹಾಗೂ ಆಡೂರು ಕುಟುಂಬದ ನಡುವೆ ಹಳೆಯ ದ್ವೇಷವಿತ್ತು ಎನ್ನಲಾಗುತ್ತಿದೆ. ಬಂಧಿತ ಆರೋಪಿ ಮಹಮ್ಮದ್ ವಾಸೀಮ್ ಮುಲ್ಲಾಗೆ ಆಡೂರು ಕುಟುಂಬದೊಂದಿಗೆ ನಂಟಿತ್ತು ಎಂಬ ಮಾಹಿತಿಯೂ ಪೊಲೀಸರ ತನಿಖೆಯಲ್ಲಿ ಬಂದಿದೆ.

ಹೀಗಾಗಿ ಈ ಹತ್ಯೆಯ ಹಿಂದೆ ಹಳೆಯ ದ್ವೇಷದ ಪಾತ್ರವಿದೆಯೇ, ಆಡೂರು ಕುಟುಂಬದವರು ಹತ್ಯೆಗೆ ಸುಪಾರಿ ನೀಡಿದ್ದಾರೆಯೇ ಎಂಬ ಅನುಮಾನಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಎಸ್ಪಿ ಮಿಥುನ್ ಎಚ್.ಎನ್. ಹೇಳಿಕೆ:

ಗದಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್. ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. ಹಣದ ವ್ಯವಹಾರ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಆಡೂರು ಕುಟುಂಬದವರ ಮೇಲೂ ಅನುಮಾನವಿದ್ದು, ಈ ಕುರಿತು ತನಿಖೆ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಂಧಿತ ಆರೋಪಿಗಳ ವಿಚಾರಣೆ ಮುಂದುವರಿದಿದೆ. ಹತ್ಯೆಯ ನಿಖರ ಕಾರಣ ಹಾಗೂ ಪ್ರಕರಣದ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದನ್ನು ಪೊಲೀಸರು ತನಿಖೆ ಮೂಲಕ ಪತ್ತೆಹಚ್ಚುತ್ತಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande