ಪ್ರಜಾಸೇವಾ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರ ಗೈರು: ಸರ್ಕಾರದ ವಿರುದ್ಧ ಆರ್.ಅಶೋಕ ವಾಗ್ದಾಳಿ
ಬೆಂಗಳೂರು, 20 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್: ಬಾಗಿಲಿಗೆ ಬಂತು ಸರ್ಕಾರ ಎಂಬುದು ಕೇವಲ ಪೋಸ್ಟರ್‌ಗಳಿಗೆ ಸೀಮಿತವಾಗಿದೆಯೇ ಎಂದು ಪ್ರಶ್ನಿಸಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ, ‘ಪ್ರಜಾಸೇವಾ’ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರೇ ಗೈರಾಗಿರುವುದನ್ನು ಟೀಕಿಸಿದ್ದಾರೆ. ಈ ಕುರಿತು ‘ಎಕ್ಸ್’ನಲ್ಲಿ ಹೇಳ
ಅಶೋಕ ಸಂಗ್ರಹ ಚಿತ್ರ


ಬೆಂಗಳೂರು, 20 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:

ಬಾಗಿಲಿಗೆ ಬಂತು ಸರ್ಕಾರ ಎಂಬುದು ಕೇವಲ ಪೋಸ್ಟರ್‌ಗಳಿಗೆ ಸೀಮಿತವಾಗಿದೆಯೇ ಎಂದು ಪ್ರಶ್ನಿಸಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ, ‘ಪ್ರಜಾಸೇವಾ’ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರೇ ಗೈರಾಗಿರುವುದನ್ನು ಟೀಕಿಸಿದ್ದಾರೆ.

ಈ ಕುರಿತು ‘ಎಕ್ಸ್’ನಲ್ಲಿ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪೊಳ್ಳು ಘೋಷಣೆಗಳೆಲ್ಲ ಸುಳ್ಳು ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ ಎಂದು ಪ್ರಶ್ನಿಸಿದ್ದಾರೆ.

‘ಪ್ರಜಾಸೇವಾ’ ಕಾರ್ಯಕ್ರಮದಲ್ಲಿ ಸ್ವತಃ ಉಸ್ತುವಾರಿ ಸಚಿವರೇ ಗೈರಾಗಿದ್ದಾರೆ. ಶಾಸಕರಿಗೂ ಕಾಳಜಿಯಿಲ್ಲ, ಅಧಿಕಾರಿಗಳಿಗೂ ಜವಾಬ್ದಾರಿಯಿಲ್ಲ ಎಂದು ಅಶೋಕ ಆರೋಪಿಸಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ಕೆಲಸ ಆಗಬೇಕಾದರೆ ಲಂಚ ಕೊಡಬೇಕು ಎಂದು ಸ್ವತಃ ಸರ್ಕಾರದ ಸಚಿವರೇ ಹೇಳುವ ಮೂಲಕ ಭ್ರಷ್ಟಾಚಾರಕ್ಕೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಮತ್ತೊಂದೆಡೆ, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಆಯೋಜಿಸಿದ ಸಭೆಗಳಲ್ಲೇ ಸಚಿವರು ಭಾಗವಹಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.

ಜನರ ದೂರು-ದುಮ್ಮಾನಗಳನ್ನು ಆಲಿಸದ ಈ ಸರ್ಕಾರಕ್ಕೆ ‘ಪ್ರಜಾಸೇವೆ’ ಎಂದು ಹೇಳಿಕೊಳ್ಳಲು ನಾಚಿಕೆಯಾಗಬೇಕು ಎಂದು ಅಶೋಕ ವಾಗ್ದಾಳಿ ನಡೆಸಿದ್ದಾರೆ.

ಜನರ ಕಣ್ಣಿಗೆ ಮಣ್ಣೆರಚುವ ಇಂತಹ ಗಿಮಿಕ್‌ಗಳನ್ನು ಬಿಟ್ಟು, ಮೊದಲು ಆಡಳಿತದಲ್ಲಿ ಪಾರದರ್ಶಕತೆ ತರಬೇಕು. ಜನಸಾಮಾನ್ಯರ ಆಕ್ರೋಶದ ಬಿಸಿ ಶೀಘ್ರದಲ್ಲೇ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟಲಿದೆ ಎಂದು ಅವರು ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande