
ಬೆಂಗಳೂರು, 02 ಸೆಪ್ಟೆಂಬರ್(ಹಿ.ಸ.)
ಆ್ಯಂಕರ್:
ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಸ್ವಚ್ಛತೆ ಹಾಗೂ ನಿರ್ವಹಣಾ ವೆಚ್ಚವನ್ನು ಸಮರ್ಥವಾಗಿ ಸರಿದೂಗಿಸುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಹೊಸ ಸ್ಮಾರ್ಟ್ ಪಾರ್ಕಿಂಗ್ ಮತ್ತು ಪ್ರವೇಶ ಶುಲ್ಕ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ. ನಗರದ ಅತ್ಯಂತ ಜನದಟ್ಟಣೆಯ ಮತ್ತು ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಈ ಮಾರುಕಟ್ಟೆಯಲ್ಲಿ ಇನ್ನು ಮುಂದೆ ವಾಹನ ಸವಾರರು ಹಾಗೂ ಸರಕು ಸಾಗಣೆದಾರರು ಕಡ್ಡಾಯವಾಗಿ ಹೊಸ ನಿಯಮಗಳನ್ನು ಪಾಲಿಸಬೇಕಿದೆ.
ಮಾರುಕಟ್ಟೆ ಆವರಣಕ್ಕೆ ದಿನನಿತ್ಯ ಸಾವಿರಾರು ಟನ್ ಸರಕುಗಳು ಆಮದಾಗುತ್ತಿದ್ದು, ಪ್ರವೇಶಿಸುವ ವಸ್ತುಗಳ ಆಧಾರದ ಮೇಲೆ ನಿಗದಿತ ಸುಂಕವನ್ನು ವಸೂಲಿ ಮಾಡಲಾಗುತ್ತದೆ.
ಹೊಸ ಪ್ರವೇಶ ಶುಲ್ಕದ ವಿವರಗಳು ಈ ಕೆಳಗಿನಂತಿವೆ:ಪ್ರವೇಶ ಶುಲ್ಕ ಮತ್ತು ಸುಂಕದ ವಿವರಗಳುಹಣ್ಣು, ಹೂ, ತರಕಾರಿ ಮತ್ತು ಸೊಪ್ಪು: ಎಲ್ಲಾ ರೀತಿಯ ಹಣ್ಣುಗಳು, ಹೂಗಳು, ತರಕಾರಿಗಳು ಹಾಗೂ ಸೊಪ್ಪಿಗೆ ಪ್ರತಿ ಚೀಲಕ್ಕೆ 5 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಧಾನ್ಯ ಹಾಗೂ ಇತರೆ ಕೃಷಿ ಉತ್ಪನ್ನಗಳು: ಕಡಲೆಕಾಯಿ/ಶೇಂಗಾ, ಹತ್ತಿ, ಸಿಹಿ ಜೋಳ, ಹಾಗೂ ಶುಂಠಿ-ಅರಿಶಿನದ ಪ್ರತಿ ಚೀಲಕ್ಕೆ 5 ರೂ. ವಿಧಿಸಲಾಗುತ್ತದೆ.ದಿನಸಿ ಮತ್ತು ತರಕಾರಿ ಸರಕುಗಳು: ಈರುಳ್ಳಿ, ಆಲೂಗಡ್ಡೆ, ತೆಂಗಿನಕಾಯಿ ಹಾಗೂ ಬೆಳ್ಳುಳ್ಳಿಯ ಪ್ರತಿ ಚೀಲಕ್ಕೆ 5 ರೂ. ಶುಲ್ಕ ಇರುತ್ತದೆ.
ನಿರ್ದಿಷ್ಟ ವಸ್ತುಗಳು: ಎರಡು ಬಾಳೆಕಂಬಗಳಿಗೆ 5 ರೂ. ಹಾಗೂ ಬಿದಿರಿನ ಒಂದು ಬಂಡಲ್ಗೆ 5 ರೂ. ಶುಲ್ಕ ಪಾವತಿಸಬೇಕು.ಮಾಂಸಾಹಾರ ಹಾಗೂ ಮೊಟ್ಟೆ: ಮೊಟ್ಟೆ (1 ರಿಂದ 10 ಟ್ರೇ), ಮೀನು/ಸೀ ಫುಡ್ (1 ಟ್ರೇ), ಮತ್ತು ಕೋಳಿ ಹಾಗೂ ಇತರೆ ಮಾಂಸದ (1 ಟ್ರೇ) ಸಾಗಣೆಗೆ ಪ್ರತಿ ಯೂನಿಟ್ಗೆ 10 ರೂ. ಸುಂಕ ವಿಧಿಸಲಾಗುತ್ತದೆ.
ಮಾರುಕಟ್ಟೆಯ ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ ಮತ್ತು ಪ್ರತಿದಿನದ ಸ್ವಚ್ಛತಾ ಕಾರ್ಯಗಳಿಗೆ ಹೆಚ್ಚಿನ ಅನುಮೋದನೆಯ ಅವಶ್ಯಕತೆಯಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹೊಸ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಬಿಎ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಕ್ರಮದಿಂದ ಮಾರುಕಟ್ಟೆಯ ನಿರ್ವಹಣಾ ಗುಣಮಟ್ಟ ಸುಧಾರಿಸಲಿದೆ ಎಂದು ನಿರೀಕ್ಷಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R