


ಬಳ್ಳಾರಿ, 02 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಸುಸಂಸ್ಕøತ ಭಾರತ ದೇಶದಲ್ಲಿ ಮಹಿಳೆಯರ ಪಾತ್ರ ಮುತ್ತು ರತ್ನಗಳಂತೆ ಬಹು ಮುಖ್ಯವಾಗಿದೆ ಎಂದು ಪದ್ಮಶ್ರೀ ಪುರಸ್ಕøತರಾದ ಡಾ. ಮಂಜಮ್ಮ ಜೋಗತಿ ಅವರು ತಿಳಿಸಿದ್ದಾರೆ.
ರಾಘವ ಕಲಾಮಂದಿರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಮ್ಮಿಕೊಂಡಿದ್ದ `ತಾರುಣ್ಯ ಸಿಂಧು ಯುವತಿ ಸಮ್ಮೇಳನ'ವನ್ನು ಉದ್ಘಾಟಿಸಿದ ಅವರು, ವಿದ್ಯಾರ್ಥಿನಿಯರು ಮೊಬೈಲ್ ಬಳಕೆಯಿಂದ ದೂರ ಇರಬೇಕು. ಮೊಬೈಲ್ ಅನ್ನು ಸದ್ಬಳಕೆ ಮಾಡಿಕೊಳ್ಳಬೇಕು, ದುರುಪಯೋಗ ಮಾಡಿಕೊಳ್ಳಬಾರದು.
ಮೊಬೈಲ್ ಬದಲಾಗಿ ಪುಸ್ತಕವನ್ನು ಓದಲು ಹೆಚ್ಚು ಸಮಯ ಮತ್ತು ಗಮನವನ್ನು ನೀಡಬೇಕು ಎಂದರು.
ಸಮಾಜದಲ್ಲಿ ಯಾರೂ ಯಾರನ್ನೂ ಗುರುತಿಸುವುದಿಲ್ಲ, ನಮ್ಮ ಸಾಧನೆ ಮಾತ್ರ ನಮ್ಮನ್ನು ಗುರುತಿಸಲು ಸಾಧ್ಯ. ಕಾರಣ ನಾವುಗಳು ಸಾಧನೆ ಮಾಡುವಲ್ಲಿ ಹೆಚ್ಚಿನ ಗಮನ ನೀಡಬೇಕು. ಎಬಿವಿಪಿಯು ವಿದ್ಯಾರ್ಥಿಗಳಿಗೆ ಒಳ್ಳೆಯದನ್ನೇ ಮಾಡುತ್ತಿದೆ. ಒಳ್ಳೆಯ ವಿಚಾರಗಳನ್ನು ಬಿತ್ತುತ್ತಿದೆ ಎಂದರು.
ಅತಿಥಿಗಳಾಗಿದ್ದ ಡಾ. ಭವ್ಯಶ್ರೀ ಶೇಖರ ಅವರು, ಇಂದಿನ ಯುವಜನತೆ ಆಧುನಿಕ ತಂತ್ರಜ್ಞಾನಗಳನ್ನು ವಿಧ್ಯಾಭ್ಯಾಸಕ್ಕೆ - ಕಲಿಕೆಗೆ ಬಳಸಿಕೊಳ್ಳಬೇಕು. ವಿದ್ಯಾರ್ಥಿನಿಯರು ಯಾವುದೇ ಸಾಧನೆಯನ್ನಾದರೂ ಮಾಡಬಲ್ಲರು. ಸಾಧನೆ ಮಾಡುವವರಿಗೆ ಸಾಕಷ್ಟು ಅವಕಾಶಗಳಿವೆ ಎಂದರು.
ಎಬಿವಿಪಿಯ ರಾಜ್ಯ ಸಹ ಕಾರ್ಯದರ್ಶಿ ಸುಮಂಗಲಾ, ವಿದ್ಯಾರ್ಥಿನಿ ಪ್ರಮುಖ ಸಂಜನಾ ಪಾಟೀಲ, ವಿಭಾಗ ಸಂಚಾಲಕ ದಿಲೀಪಕುಮಾರ, ಲೀಲಾವತಿ, ಸಚಿನ ಕುಳಗೇರಿ, ಸಂದೀಪ ಅರಳಗುಂಡಿ, ಇತರರು ಉಪಸ್ತಿತರಿದ್ದರು.
ಬೃಹತ್ ಶೋಭಾಯಾತ್ರೆ.
ಎಚ್ಆರ್ಜಿ ವೃತ್ತದಿಂದ ರಾಯಲ್ ಸರ್ಕಲ್ ಮೂಲಕ ರಾಘವ ಕಲಾ ಮಂದಿರದವರೆಗೆ ನೂರಾರು ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಲಾ ತಂಡಗಳ ಜೊತೆಗೆ ಭಾರತ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆಗಳನ್ನು ಕೂಗುತ್ತಾ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್