
ಕೋಲಾರ, 19 ಸೆಪ್ಟೆಂಬರ್ (ಹಿ.ಸ)
ಆ್ಯಂಕರ್ : ವಿಶೇಷಚೇತನ ಮಕ್ಕಳ ಸೇವೆ ಮಾಡುವುದು ಸಮಾಜದ ಪ್ರತಿಯೊಬ್ಬರ ನೈತಿಕ ಜವಾಬ್ದಾರಿಯಾಗಿದೆ. ದಾನಿಗಳ ನೆರವಿನಿಂದ ಇಂತಹ ಸತ್ಕಾರ್ಯಗಳು ನಿರಂತರವಾಗಿ ಮುಂದುವರಿಯಬೇಕು ಎಂದು ಬೆಂಗಳೂರಿನ ವಾಸವಿ ಅನ್ನದಾನ ಸೇವಾ ಟ್ರಸ್ಟ್ ಅಧ್ಯಕ್ಷ ಪತ್ತಿ ಸೀತಾರಾಮಯ್ಯ ತಿಳಿಸಿದರು.
ವಾಸವಿ ಅನ್ನದಾನ ಸೇವಾ ಟ್ರಸ್ಟ್ ವತಿಯಿಂದ ದಾನಿಗಳ ಸಹಕಾರದೊಂದಿಗೆ ಮುಳಬಾಗಿಲು ರಸ್ತೆಯ ದೇವರಾಯಸಮುದ್ರದಲ್ಲಿರುವ ಆಶಾಕಿರಣ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ೫೨ ಸ್ಟೀಲ್ ಮಂಚಗಳನ್ನು ಹಾಗೂ ಪರಿಸರ ರಕ್ಷಣೆಗಾಗಿ ಗಿಡಗಳನ್ನು ವಿತರಿಸಲಾಯಿತು.
ಟ್ರಸ್ಟ್ ಅಧ್ಯಕ್ಷರಾದ ಡಾ. ಬಿ.ಎಸ್. ಗೋವಿಂದರಾಜು, ವಾಸವಿ ಅನ್ನದಾನ ಸೇವಾ ಟ್ರಸ್ಟ್ ಸಮಾಜಮುಖಿ ಕಾರ್ಯಗಳಲ್ಲಿ ಸದಾ ಮುಂದಿದ್ದು, ಬಡವರು ಹಾಗೂ ವಿಶೇಷ ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಮಕ್ಕಳ ಸೌಕರ್ಯಕ್ಕಾಗಿ ಮಂಚಗಳನ್ನು ಮತ್ತು ಪರಿಸರ ಜಾಗೃತಿಗಾಗಿ ಗಿಡಗಳನ್ನು ನೀಡಲಾಗಿದೆ ಎಂದರು.
ರೋಟರಿ ಅಧ್ಯಕ್ಷರಾದ ಆರ್.ಟಿ.ಎನ್. ಪ್ರಭಾಕರನ್ ಮಾತನಾಡಿ, ಸಂಘ-ಸAಸ್ಥೆಗಳು ಮತ್ತು ದಾನಿಗಳು ಕೈಜೋಡಿಸಿದರೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯ. ಆಶಾಕಿರಣ ಶಾಲೆಯ ಮಕ್ಕಳ ಅನುಕೂಲಕ್ಕಾಗಿ ಟ್ರಸ್ಟ್ ನಡೆಸಿರುವ ಈ ಸೇವಾ ಕಾರ್ಯ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಆರ್.ಟಿ.ಎನ್. ಆನಂದರೆಡ್ಡಿ, ಸ್ವರ್ಣ ಭೂಮಿ ಫೌಂಡೇಷನ್ ಅಧ್ಯಕ್ಷ ಹಾಗೂ ರೋಟರಿ ಝೋನ್ ರಾಜ್ಯಪಾಲ ಆರ್.ಟಿ.ಎನ್. ಶಿವಕುಮಾರ್, ಬೆಂಗಳೂರು ಅನ್ನದಾನ ಟ್ರಸ್ಟ್ ಖಜಾಂಚಿ ವಿಶ್ವನಾಥ ಗುಪ್ತ, ಉಪಾಧ್ಯಕ್ಷ ಎ.ಎಸ್. ರಾಮಲಿಂಗ ಗುಪ್ತ, ಶಾಲೆಯ ಮೇಘರಾಜು, ಸುಪ್ರೀಂ ವಿಕಲ ಚೇತನ ಸಂಸ್ಥೆಯ ಅಧ್ಯಕÀ ಸುಪ್ರೀಂ, ಕಾರ್ಯದರ್ಶಿ ದೇವತಾ ನಾಗರಾಜು, ಖಜಾಂಚಿ ಎಂ.ಆರ್. ಶ್ರೀನಿವಾಸ ಮೂರ್ತಿ, ಪಿ.ಎಸ್.ಎಲ್. ಶ್ರೀನಿವಾಸ ಬಾಬು ಸೇರಿದಂತೆ ಎಲ್ಲಾ ದಾನಿಗಳು ಹಾಗೂ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಾಸವಿ ಅನ್ನದಾನ ಸೇವಾ ಟ್ರಸ್ಟ್ನ ಸಂಚಾಲಕರಾದ ಎಂ.ಎಸ್. ಶ್ರೀಕಾಂತ್ ನೆರವೇರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್