ಅರಾಭಿಕೊತ್ತನೂರು ವಿವಿಧೋದ್ದೇಶ ಸಹಕಾರ ಸಂಘದ ಮೊದಲ ಸರ್ವಸದಸ್ಯರ ಸಭೆ
ಅರಾಭಿಕೊತ್ತನೂರು ವಿವಿಧೋದ್ದೇಶ ಸಹಕಾರ ಸಂಘದ ಮೊದಲ ಸರ್ವಸದಸ್ಯರ ಸಭೆ
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ ಮೊದಲ ಸರ್ವಸದಸ್ಯರ ಸಭೆ ನಡೆಯಿತು.


ಕೋಲಾರ, 18 ಸೆಪ್ಟೆಂಬರ್ (ಹಿ.ಸ)

ಆ್ಯಂಕರ್ : ಅಡ್ಡಿ ಅತಂಕ,ವಿರೋಧಗಳನ್ನು ಮೆಟ್ಟಿನಿಂತು ತಲೆಯೆತ್ತಿರುವ ಅರಾಭಿಕೊತ್ತನೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ ಮೊದಲ ವರ್ಷದಲ್ಲೇ ೧೨ ಲಕ್ಷ ರೂ ಸಾಲ ವಿತರಿಸಿ ರೈತಸ್ನೇಹಿಯಾಗಿ ಗುರುತಿಸಿಕೊಂಡಿದೆ ಎಂದು ಸಂಘದ ನಿರ್ದೇಶಕ ಚೆಲುವನಹಳ್ಳಿ ಡಿ.ನಾಗರಾಜಪ್ಪ ಹರ್ಷ ವ್ಯಕ್ತಪಡಿಸಿದರು.

ಅರಾಭಿಕೊತ್ತನೂರು ಗ್ರಾಮದ ಸೋಮೇಶ್ವರಸ್ವಾಮಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಅರಾಭಿಕೊತ್ತನೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ೨೦೨೫-೨೬ನೇ ಸಾಲಿನ ಸೊಸೈಟಿಯ ಪ್ರಥಮ ಸರ್ವಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಅಧ್ಯಕ್ಷರಾಗಿರುವ ನಂಜುAಡಗೌಡರ ಸಂಕಲ್ಪ, ಸಹಕಾರ ಸಂಘ ಕಟ್ಟಿಯೇ ತೀರುವ ಅಚಲ ವಿಶ್ವಾಸ,ದೃಢವಾದ ನಂಬಿಕೆಯಿ0ದ ಇಂದು ಸಹಕಾರ ಸಂಘ ಆರಂಭವಾಗಿ ಯಶಸ್ವಿ ಒಂದು ವರ್ಷ ಪೂರೈಸಿದೆ, ಜತೆಗೆ ಮೊದಲ ವರ್ಷವೇ ರೈತರಿಗೆ ನೆರವಾಗುವ ಮೂಲಕ ನಂಬಿಕೆ ಬಲಗೊಳಿಸಿದೆ. ಇದೀಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ನಡೆದಿದ್ದು, ಅಧ್ಯಕ್ಷರೂ ಆಗಿರುವ ಶಾಸಕರು ಸಹಕಾರ ಸಂಘಕ್ಕೆ ಸಾಲ ಒದಗಿಸುವ ಭರವಸೆ ನೀಡಿದ್ದಾರೆ, ಈ ನಿಟ್ಟಿನಲ್ಲಿ ರೈತರಿಗೆ ಸಾಲ ನೀಡುವ ಬದ್ದತೆಯಿಂದ ಕೆಲಸ ಮಾಡುತ್ತಿದ್ದು, ಸಾಲ ಪಡೆದವರೂ ಸಹಾ ಅಷ್ಟೇ ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಬೇಕು ಎಂದು ಹೇಳಿದರು.

ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರೂ ಆದ ಎ.ಎಸ್.ನಂಜು0ಡೇಗೌಡ ಮಾತನಾಡಿ, ೨೦೨೦ರಿಂದ ನಡೆಸಿದ ಪ್ರಯತ್ನ, ಎದುರಾದ ಅಡ್ಡಿ,ಅಡೆತಡೆಗಳ ಕುರಿತು ತಿಳಿಸಿ, ಸಂಘ ಸ್ಥಾಪಿಸಲೇಬೇಕು ಎಂಬ ನಮ್ಮ ಸಂಕಲ್ಪ ಈಡೇರಿದೆ, ೨೦೧೭ ರಲ್ಲಿ ಸರ್ಕಾರದ ಪ್ರತಿ ಗ್ರಾ.ಪಂ.ಗೊಂದು ಸಹಕಾರ ಸಂಘವೆAಬ ಸುತ್ತೋಲೆ ಹಿಡಿದು ಓಡಾಡಿ, ಒತ್ತಡ ಹಾಕಿದ್ದರ ಫಲದಿಂದ ಇಂದು ಅರಾಭಿಕೊತ್ತನೂರಿನಲ್ಲಿ ಸಹಕಾರ ಸಂಘ ರಚನೆಯಾಗಲು ಸಾಧ್ಯವಾಯಿತು.

ಮುಂದಿನ ಡಿಸೆಂಬರ್ ಒಳಗಾಗಿ ೨೦ ಲಕ್ಷ ರೂ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದ ಅವರು, ಮುಂಗಾರಿಗೆ ಮುನ್ನವೇ ಸೊಸೈಟಿ ಆಶ್ರಯದಲ್ಲಿ ರಸಗೊಬ್ಬರಗಳ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿ, ನಮ್ಮ ರೈತಪರ,ರೈತಸ್ನೇಹಿ ಸಹಕಾರ ಸಂಘವಾಗಿದ್ದು, ಕಟ್ಟಕಡೆಯ ವ್ಯಕ್ತಿಗೂ ಸದಸ್ಯತ್ವ ನೀಡುವ ಗುರಿ ಹೊಂದಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ೧೩ ಹಳ್ಳಿಗಳ ಹಿರಿಯ ಸಹಕಾರಿಗಳ ಜೊತೆ ಮತ್ತು ಕೋಮಲ್ ನಿರ್ದೇಶಕರಾದ ಚೆಲುವನಹಳ್ಳಿ ಡಿ.ನಾಗರಾಜಪ್ಪ ರವರ ಸಹಕಾರದಿಂದ ಒಟ್ಟು ೪೫೬ ಸದಸ್ಯರಿಂದ ೫೨೪೯೮೦-೦೦ ರೂಗಳ ಷೇರು ಬಂಡವಾಳದಿAದ ಸಂಘ ರಚನೆಯಾಗಿದೆ ಎಂದರು.

ಕೋಲಾರ ಗ್ರಾಮಾಂತರ ಸಹಕಾರ ಸಂಘದ ಅಧ್ಯಕ್ಷ ದಿಂಬ ನಾಗರಾಜಪ್ಪ ಮಾತನಾಡಿ, ಈ ಸಂಘ ರಚನೆಯ ಮೂಲಕ ನಮ್ಮ ಸಂಘದಿ0ದ ಹಲವು ಹಳ್ಳಿಗಳು ಇತ್ತ ಸೇರಿವೆ ಎಂಬ ನೋವು ಇದ್ದರೂ, ಒಂದು ರೈತಪರ ಸಹಕಾರ ಸಂಘ ರಚನೆಯಾಗಿರುವ ಸಂತಸವಿದೆ, ಸಾಲ ಪಡೆದವರು ಸಾಲ ಮರುಪಾವತಿಯ ಮೂಲಕ ಸಂಘವನ್ನು ಗಟ್ಟಿಗೊಳಿಸಿ. ಸಹಕಾರ ಸಹಾಯಕ ನಿಬಂಧಕರ ಕಚೇರಿಯ ಅಧಿಕಾರಿ ಗೀತಾ, ನೂತನ ಸಂಘ ರಚನೆಗೆ ಹಾಲಿ ಅಧ್ಯಕ್ಷ ನಂಜು0ಡಗೌಡರು ನಡೆಸಿದ ಪ್ರಯತ್ನ ಇಲಾಖೆಯೊಂದಿಗೆ ನಡೆಸಿದ ಪತ್ರವ್ಯವಹಾರದ ಕುರಿತು ತಿಳಿಸಿ, ಸಂಘ ಈ ಭಾಗದ ರೈತರ ಆರ್ಥಿಕ ಪರಿಸ್ಥಿತಿ ಬಲಗೊಳ್ಳಲು ಕಾರಣವಾಗಲಿ ಎಂದು ಶುಭ ಕೋರಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ತಿಮ್ಮೇಗೌಡ ಆಯವ್ಯಯ ಹಾಗೂ ಮುಂದಿನ ವರ್ಷದ ಅಂದಾಜುಪಟ್ಟಿ ಮಂಡಿಸಿ, ಸಂಘದಿAದ ಈವರೆಗೂ ನೀಡಿರುವ ಸಾಲ ಸೌಲಭ್ಯ ಹಾಗೂ ಈ ವರ್ಷ ೧೩೮೬೦ ರೂ ನಿವ್ವಳ ಲಾಭದೊಂದಿಗೆ ಮೊದಲ ವರ್ಷ ಆರಂಭಗೊAಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಲಾಭದಾಯಕವಾಗಿ ಸಂಘವನ್ನು ಮುನ್ನಡೆಸುವುದಾಗಿ ತಿಳಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ದೇವಿಕಾ, ನಿರ್ದೇಶಕರಾದ ಜಿ.ತಿಮ್ಮಯ್ಯ, ಎಂ.ನಾಗೇಶ್, ಎಂ.ಭುವನೇಶ್, ಎನ್.ದೇವರಾಜ್, ಎನ್.ಕೃಷ್ಣಪ್ಪ, ಎಂ.ಸುಬ್ರಮಣಿ, ಸಿ.ವಿ.ಕೃಷ್ಣಪ್ಪ, ಎಸ್.ರಮೇಶ್, ವೆಂಕಟಮ್ಮ,ಗ್ರಾ.ಪA ಮಾಜಿ ಉಪಾಧ್ಯಕ್ಷ ನಾಗೇಶ್, ಮುಖಂಡರಾದ ಚೆಲುವನಹಳ್ಳಿ ನಾಗರಾಜ್, ಮಡೇರಹಳ್ಳಿ ರಾಮಕೃಷ್ಣಪ್ಪ,ಬೈರೇಗೌಡ, ನಾರಾಯಣಪ್ಪ, ಮಹೇಂದ್ರ, ವಿಶ್ವನಾಥಗೌಡ, ಜಯರಾಮೇಗೌಡ, ಡ್ರೆವರ್ ರಾಮಪ್ಪ,ಲೆಕ್ಕ ಸಹಾಯಕಿ ಸೌಭಾಗ್ಯ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande