ಭಾರತ-ಅಮೆರಿಕ ಸೇನಾ ಸಮರಾಭ್ಯಾಸ ಆರಂಭ
ಬಿಕಾನೇರ್, 16 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್: ಭಾರತ–ಅಮೆರಿಕ ಜಂಟಿ ಸೇನಾ ‘ಯುದ್ಧ ಅಭ್ಯಾಸ’ದ 22ನೇ ಆವೃತ್ತಿಗೆ ಬುಧವಾರ ಚಾಲನೆ ನೀಡಲಾಯಿತು. ಉತ್ತರಾಖಂಡದ ಔಲಿ ವಿದೇಶಿ ತರಬೇತಿ ಕೇಂದ್ರ ಹಾಗೂ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಏಕಕಾಲದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಔಲಿಯಲ್ಲಿ ಭಾರತೀ
भारत-अमेरिका की सैन्य ताकत का संगम, ‘युद्ध अभ्यास 2026’ का आगाज


ಬಿಕಾನೇರ್, 16 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:

ಭಾರತ–ಅಮೆರಿಕ ಜಂಟಿ ಸೇನಾ ‘ಯುದ್ಧ ಅಭ್ಯಾಸ’ದ 22ನೇ ಆವೃತ್ತಿಗೆ ಬುಧವಾರ ಚಾಲನೆ ನೀಡಲಾಯಿತು. ಉತ್ತರಾಖಂಡದ ಔಲಿ ವಿದೇಶಿ ತರಬೇತಿ ಕೇಂದ್ರ ಹಾಗೂ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಏಕಕಾಲದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು.

ಔಲಿಯಲ್ಲಿ ಭಾರತೀಯ ಸೇನೆಯ 14ನೇ ಪದಾತಿ ದಳದ ವಿಭಾಗದ ಪ್ರಧಾನ ಅಧಿಕಾರಿ ಮೇಜರ್ ಜನರಲ್ ಅಮರೇಶ್ ಗುಂಜನ್ ಹಾಗೂ ಅಮೆರಿಕ ಸೇನೆಯ 11ನೇ ಏರ್‌ಬೋರ್ನ್ ವಿಭಾಗದ 1ನೇ ಪದಾತಿ ದಳ ಯುದ್ಧ ತಂಡದ ಕಮಾಂಡರ್ ಕರ್ನಲ್ ಬೆಂಜಮಿನ್ ಜಾಕ್‌ಮನ್ ಅವರು ಉಭಯ ದೇಶಗಳ ತಲಾ 600 ಯೋಧರನ್ನು ಒಳಗೊಂಡ ಪಡೆಗಳನ್ನು ಉದ್ದೇಶಿಸಿ ಮಾತನಾಡಿದರು.

ಪರ್ವತ ಹಾಗೂ ಅರೆಪರ್ವತ ಪ್ರದೇಶಗಳಲ್ಲಿ ಸಮಗ್ರ ಯುದ್ಧ ಗುಂಪುಗಳ ಬಳಕೆಗೆ ಸಂಬಂಧಿಸಿದಂತೆ ಎರಡೂ ಸೇನೆಗಳ ಜಂಟಿ ಕಾರ್ಯಾಚರಣಾ ಸಾಮರ್ಥ್ಯವನ್ನು ಹೆಚ್ಚಿಸುವುದು ಅಭ್ಯಾಸದ ಪ್ರಮುಖ ಉದ್ದೇಶವಾಗಿದೆ. ಪದಾತಿ ದಳ ಆಧಾರಿತ ಕಾರ್ಯಾಚರಣೆಗಳಿಗೆ ವಿಶೇಷ ಒತ್ತು ನೀಡಲಾಗುತ್ತಿದ್ದು, ಪರಸ್ಪರ ಕಾರ್ಯನಿರ್ವಹಣಾ ಸಾಮರ್ಥ್ಯ ಬಲಪಡಿಸುವುದು, ಉತ್ತಮ ಕಾರ್ಯಾಚರಣಾ ವಿಧಾನಗಳ ವಿನಿಮಯ ಹಾಗೂ ಜಂಟಿ ಯೋಜನೆ ಮತ್ತು ಅನುಷ್ಠಾನವನ್ನು ಸುಧಾರಿಸುವತ್ತ ಗಮನ ಹರಿಸಲಾಗುತ್ತಿದೆ.

ಅಭ್ಯಾಸದಲ್ಲಿ ತಂತ್ರಜ್ಞಾನ ಬಳಕೆಗೆ ಪ್ರಮುಖ ಆದ್ಯತೆ ನೀಡಲಾಗುತ್ತಿದೆ. ಕಣ್ಗಾವಲು ಮತ್ತು ವಿಚಕ್ಷಣ ಕಾರ್ಯಗಳಿಗೆ ಮಾನವರಹಿತ ವೈಮಾನಿಕ ಸಾಧನಗಳು ಹಾಗೂ ಸ್ವಾಯತ್ತ ವ್ಯವಸ್ಥೆಗಳ ಬಳಕೆಯ ತರಬೇತಿ ನಡೆಯಲಿದೆ. ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಆಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳ ಪ್ರದರ್ಶನವೂ ನಡೆಯಲಿದೆ.

ಉಭಯ ಸೇನೆಗಳ ವಿಷಯ ತಜ್ಞರು ಉದಯೋನ್ಮುಖ ತಂತ್ರಜ್ಞಾನಗಳು ಹಾಗೂ ಬಹುಕ್ಷೇತ್ರೀಯ ಯುದ್ಧದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ವಿಚಾರ ವಿನಿಮಯ ನಡೆಸಲಿದ್ದಾರೆ. ವಿವಿಧ ಭೂಪ್ರದೇಶಗಳು ಮತ್ತು ಕಾರ್ಯಾಚರಣಾ ಪರಿಸರಗಳಲ್ಲಿ ಸಮನ್ವಯದೊಂದಿಗೆ ಸೇನಾ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಹೆಚ್ಚಿಸಲು ಈ ಅಭ್ಯಾಸ ಸಹಕಾರಿಯಾಗಲಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande