ಬಳ್ಳಾರಿ: ಅದ್ಧೂರಿಯಾಗಿ ನಡೆದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತೋತ್ಸವ
ಬಳ್ಳಾರಿ, 15 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ನಗರ ಮತ್ತು ಗ್ರಾಮಾಂತರ ಸರ್ವ ಸದ್ಭಕ್ತರ ಆಶ್ರಯದಲ್ಲಿ 7ನೇ ವರ್ಷದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತೋತ್ಸವ ಕಾರ್ಯಕ್ರಮವು ಮಂಗಳವಾರದಂದು ನಗರದಲ್ಲಿ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ಕೌಲ್ಬಜಾರ್ನ ಶಾಸ್ತಿನಗರದ ಬಸವ ಭವನದ ಪಕ್ಕದಲ್ಲಿರುವ ಶ್ರೀ ಅ
ಬಳ್ಳಾರಿ: ಅದ್ಧೂರಿಯಾಗಿ ನಡೆದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತೋತ್ಸವ


ಬಳ್ಳಾರಿ: ಅದ್ಧೂರಿಯಾಗಿ ನಡೆದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತೋತ್ಸವ


ಬಳ್ಳಾರಿ: ಅದ್ಧೂರಿಯಾಗಿ ನಡೆದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತೋತ್ಸವ


ಬಳ್ಳಾರಿ: ಅದ್ಧೂರಿಯಾಗಿ ನಡೆದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತೋತ್ಸವ


ಬಳ್ಳಾರಿ, 15 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್: ನಗರ ಮತ್ತು ಗ್ರಾಮಾಂತರ ಸರ್ವ ಸದ್ಭಕ್ತರ ಆಶ್ರಯದಲ್ಲಿ 7ನೇ ವರ್ಷದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತೋತ್ಸವ ಕಾರ್ಯಕ್ರಮವು ಮಂಗಳವಾರದಂದು ನಗರದಲ್ಲಿ ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಗೆ ಕೌಲ್ಬಜಾರ್ನ ಶಾಸ್ತಿನಗರದ ಬಸವ ಭವನದ ಪಕ್ಕದಲ್ಲಿರುವ ಶ್ರೀ ಅನಾದಿಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ವೀರಭದ್ರೇಶ್ವರ ಶಿಲಾಮೂರ್ತಿಗೆ ವಿಶೇಷ ರುದ್ರಾಭಿಷೇಕ ಹಾಗೂ ಪೂಜಾ ಕಾರ್ಯಕ್ರಮಗಳು ನೆರವೇರಿದವು.

ವೀರಗಾಸೆ, ಜಾನಪದ ಕಲಾತಂಡಗಳ ಭವ್ಯ ಮೆರವಣಿಗೆ:

ಕನಕದುರ್ಗಮ್ಮ ದೇವಸ್ಥಾನದ ಆವರಣದಿಂದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಭಾವಚಿತ್ರದ ಅದ್ಧೂರಿ ಮೆರವಣಿಗೆ ಆರಂಭವಾಗಿ, 501 ಮುತ್ತೈದೆಯರ ಕಳಸ, ಐದು ಮಹಿಳೆಯರ ಗಂಗೆ ಕೊಡ ಹಾಗೂ ವೀರಗಾಸೆ, ಸಮೂಹ ನಂದಿಕೋಲು, ಡೊಳ್ಳುಕುಣಿತ ಮುಂತಾದ ಜಾನಪದ ಕಲಾ ತಂಡಗಳೊಂದಿಗೆ ಪಾರ್ವತಿನಗರ ಮುಖ್ಯರಸ್ತೆ, ಎಸ್.ಪಿ. ಸರ್ಕಲ್, ಶಾಸ್ತಿನಗರ ಒಂದನೇ ರಸ್ತೆ ಮಾರ್ಗವಾಗಿ ಶ್ರೀ ಅನಾದಿಲಿಂಗೇಶ್ವರ ದೇವಸ್ಥಾನದ ವೀರಭದ್ರೇಶ್ವರ ಸನ್ನಿಧಾನಕ್ಕೆ ಮೆರವಣಿಗೆ ತಲುಪಿ ಸಂಪನ್ನಗೊಂಡಿತು.

ಉಡಿ ತುಂಬುವ ಕಾರ್ಯಕ್ರಮ ಮತ್ತು ಆಶೀರ್ವಚನ:

ಮೆರವಣಿಗೆಯ ಬಳಿಕ 501 ಮುತ್ತೈದೆಯರಿಗೆ ಹಸಿರು ಸೀರೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ನಡೆಯಿತು, ನಂತರ ಪೂಜ್ಯರಿಂದ ಆಶೀರ್ವಚನ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಜರುಗಿತು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಹರಪನಹಳ್ಳಿ ಪಂಚವಣ್ಣಿಗೆ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕಮ್ಮರಚೇಡು-ಬಳ್ಳಾರಿಯ ಶ್ರೀ ಕಲ್ಯಾಣ ಮಹಾಸ್ವಾಮಿಗಳು ಹಾಗೂ ಜಂಗಮರಹೊಸಹಳ್ಳಿಯ ಶ್ರೀ ಷ.ಬ್ರ. ಅಜಾತ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಹಾಗೂ ಭಕ್ತರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಸಮಿತಿ ಸದಸ್ಯರು, ಇನ್ನಿತರರು ಇದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande