ಸಂವತ್ಸರಿ ಸಂದರ್ಭದಲ್ಲಿ ಪ್ರೀತಿ, ಸೌಹಾರ್ದ, ಸದ್ಭಾವದ ಕಾರ್ಯಗಳಿಗೆ ಪ್ರಧಾನಿ ಮೋದಿ ಕರೆ
ನವದೆಹಲಿ, 15 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಜೈನ ಧರ್ಮದ ಪವಿತ್ರ ಸಂವತ್ಸರಿ ಹಬ್ಬದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದು, ಪ್ರೀತಿ, ಸೌಹಾರ್ದ, ಕರುಣೆ ಹಾಗೂ ಸದ್ಭಾವವನ್ನು ಜೀವನದ ಆಧಾರವಾಗಿಸಿಕೊಳ್ಳುವಂತೆ ಕರೆ ನೀಡಿದ್ದಾರೆ. ಪ್ರಧಾನಮಂತ್ರಿ ಅವರು
प्रतीकात्मक


ನವದೆಹಲಿ, 15 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಜೈನ ಧರ್ಮದ ಪವಿತ್ರ ಸಂವತ್ಸರಿ ಹಬ್ಬದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದು, ಪ್ರೀತಿ, ಸೌಹಾರ್ದ, ಕರುಣೆ ಹಾಗೂ ಸದ್ಭಾವವನ್ನು ಜೀವನದ ಆಧಾರವಾಗಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.

ಪ್ರಧಾನಮಂತ್ರಿ ಅವರು ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಸಂಸ್ಕೃತದ ಶ್ಲೋಕವೊಂದನ್ನು ಹಂಚಿಕೊಂಡು, ಹೃದಯದಲ್ಲಿ ಪ್ರೀತಿ, ಸೌಹಾರ್ದ ಹಾಗೂ ಸದ್ಭಾವವನ್ನು ಬೆಳೆಸುವಂತಹ ಕಾರ್ಯಗಳನ್ನು ಮನುಷ್ಯರು ಮಾಡಬೇಕು ಎಂದು ಸಂದೇಶ ನೀಡಿದ್ದಾರೆ.

ಮನುಷ್ಯರು ಪರಸ್ಪರರ ಬಗ್ಗೆ ಹಸು ತನ್ನ ನವಜಾತ ಕರುವಿನ ಮೇಲೆ ಹೊಂದಿರುವ ಪ್ರೀತಿ ಹಾಗೂ ಆತ್ಮೀಯತೆಯ ರೀತಿಯಲ್ಲಿ ಸ್ನೇಹಭಾವ ಹೊಂದಿರಬೇಕು ಎಂದು ಶ್ಲೋಕದ ಭಾವಾರ್ಥವನ್ನು ವಿವರಿಸಿದ್ದಾರೆ.

ಸಂವತ್ಸರಿ ಹಬ್ಬದ ಸಂದರ್ಭದಲ್ಲಿ ದೇಶದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ ಪ್ರಧಾನಿ ಮೋದಿ, ಕ್ಷಮೆ ಹಾಗೂ ಕರುಣೆ ಪ್ರತಿಯೊಂದು ಸಂಬಂಧವನ್ನೂ ಮತ್ತಷ್ಟು ಬಲಪಡಿಸುತ್ತವೆ ಎಂದು ಹೇಳಿದ್ದಾರೆ. ಈ ಪವಿತ್ರ ಸಂದರ್ಭವು ವಿನಮ್ರತೆಯಿಂದ ಬದುಕಲು ಮಾರ್ಗದರ್ಶನ ನೀಡಲಿ. ದಯೆ ಮತ್ತು ಸದ್ಭಾವನೆ ಪ್ರತಿಯೊಂದು ಕಾರ್ಯಕ್ಕೂ ಆಧಾರವಾಗಲಿ ಎಂದು ಆಶಿಸಿದ್ದಾರೆ.

ತಮ್ಮ ಸಂದೇಶದ ಕೊನೆಯಲ್ಲಿ ಜೈನ ಪರಂಪರೆಯ ಪ್ರಸಿದ್ಧ ಕ್ಷಮಾಯಾಚನಾ ವಾಕ್ಯವಾದ ‘ಮಿಚ್ಛಾಮಿ ದುಕ್ಕಡಂ’ ಎಂದು ಪ್ರಧಾನಿ ಉಲ್ಲೇಖಿಸಿದ್ದಾರೆ.

ಸಂವತ್ಸರಿ ಜೈನ ಧರ್ಮದ ಪ್ರಮುಖ ಪವಿತ್ರ ಹಬ್ಬವಾಗಿದ್ದು, ಕ್ಷಮೆ, ಆತ್ಮಶುದ್ಧಿ ಹಾಗೂ ಪ್ರಾಯಶ್ಚಿತ್ತಕ್ಕೆ ವಿಶೇಷ ಮಹತ್ವ ಹೊಂದಿದೆ. ಪರಿಸ್ಯುಷಣ ಮಹಾಪರ್ವದ ಕೊನೆಯ ದಿನವಾಗಿ ಸಂವತ್ಸರಿಯನ್ನು ಆಚರಿಸಲಾಗುತ್ತದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande