ಮೂಗ ಮತ್ತು ಕಿವುಡ ಬಾಲಕ ಕಾಣೆ: ಪತ್ತೆಗೆ ಮನವಿ
ಬಳ್ಳಾರಿ, 15 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ನಗರದ ಸರ್ಕಾರಿ ಬಾಲಕರ ಬಾಲ ಮಂದಿರದ 12 ವರ್ಷದ ಅಪ್ರಾಪ್ತ ಬಾಲಕನಾದ ಮೂಗ ಮತ್ತು ಕಿವುಡ ಬಾಲಕ ಸೆ.10 ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಬಾಲಮಂದಿರದಿಂದ ಕಾಣೆಯಾಗಿರುವ ಕುರಿತು ನಗರದ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗ
ಮೂಗ ಮತ್ತು ಕಿವುಡ ಬಾಲಕ ಕಾಣೆ: ಪತ್ತೆಗೆ ಮನವಿ


ಬಳ್ಳಾರಿ, 15 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್: ನಗರದ ಸರ್ಕಾರಿ ಬಾಲಕರ ಬಾಲ ಮಂದಿರದ 12 ವರ್ಷದ ಅಪ್ರಾಪ್ತ ಬಾಲಕನಾದ ಮೂಗ ಮತ್ತು ಕಿವುಡ ಬಾಲಕ ಸೆ.10 ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಬಾಲಮಂದಿರದಿಂದ ಕಾಣೆಯಾಗಿರುವ ಕುರಿತು ನಗರದ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.

ಬಾಲಕನ ಚಹರೆ ಗುರುತು:

ಅಂದಾಜು 4.5 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ತೆಳ್ಳನೆಯ ಮೈ ಕಟ್ಟು ಹೊಂದಿದ್ದು, ಕಾಣೆಯಾದ ಸಂರ್ದಭದಲ್ಲಿ ಬಿಳಿ ಬಣ್ಣದ ಚೆಕ್ಸ್ ಅರ್ಧ ತೋಳಿನ ಅಂಗಿ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಬಾಲಕ ಮೂಗ ಮತ್ತು ಕಿವುಡನಾಗಿರುತ್ತಾನೆ.

ಬಾಲಕನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಕೌಲ್ ಬಜಾರ್ ಪೊಲೀಸ್ ಠಾಣೆಯ ದೂ.08392-240731, 244145 ಅಥವಾ ಪಿಎಸ್ಐ ಮೊ.9480803084, ಪಿಐ ಮೊ.9480803047, ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande