
ಬೆಂಗಳೂರು, 12 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಮಂಥನ ಜಯನಗರದ ವತಿಯಿಂದ ‘ಹಿಂದುತ್ವ, ಭಾರತ, ಸ್ವತ್ವ’ ಎಂಬ ಮೂರು ಕೃತಿಗಳ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮ ನಗರದ ರಾಷ್ಟ್ರೋತ್ಥಾನ ಶಾರೀರಿಕ ಕೇಂದ್ರದಲ್ಲಿ ನಡೆಯಿತು.
ಚಿಂತಕ ಹಾಗೂ ಲೇಖಕ ರೋಹಿತ್ ಚಕ್ರತೀರ್ಥ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಹಾಗೂ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಅವರು ಮೂರು ಕೃತಿಗಳನ್ನು ಬಿಡುಗಡೆ ಮಾಡಿದರು.
ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ರೋಹಿತ್ ಚಕ್ರತೀರ್ಥ, ನಾ. ತಿಪ್ಪೇಸ್ವಾಮಿ ಹಾಗೂ ರಾಜೇಶ್ ಪದ್ಮಾರ್ ಅವರು ಭಾಗವಹಿಸಿ ಕೃತಿಗಳ ಆಶಯ ಹಾಗೂ ವಿಷಯಗಳ ಕುರಿತು ವಿಚಾರ ವಿನಿಮಯ ನಡೆಸಿದರು.
‘ಹಿಂದುತ್ವ, ಭಾರತ, ಸ್ವತ್ವ’ ಮೂರು ಕೃತಿಗಳನ್ನು ವಿಶ್ವ ಸಂವಾದ ಕೇಂದ್ರ ಪ್ರಕಟಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.