ಜಾನಪದ ಹಾಡಿಗೆ ರ್ಯಾಪ್ ಟಚ್: ಸಿಟಿ ಲೈಟ್ಸ್ ಚಿತ್ರದ ಕೆಂಡದೋಕುಳಿ ಗಂಡನಾ ಹಾಡು ಬಿಡುಗಡೆ
ಬೆಂಗಳೂರು, 07 ಆಗಸ್ಟ್ (ಹಿ.ಸ.): ಆ್ಯಂಕರ್:ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ನಿರ್ದೇಶನದ ಮೂರನೇ ಸಿನಿಮಾ ‘ಸಿಟಿ ಲೈಟ್ಸ್’ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದ ಮೂರನೇ ಹಾಡು ‘ಕೆಂಡದೋಕುಳಿ ಗಂಡನಾ’ ಬಿಡುಗಡೆಯಾಗಿದೆ. ಜಾನಪದ ಶೈಲಿಗೆ ರ್ಯಾಪ್ ಸ್ಪರ್ಶ ನೀಡಿರುವ ಈ ಹಾಡು ಸಂಗೀತಪ್ರಿಯರ ಗಮನ ಸೆಳೆಯುತ್ತಿ
ಹಾಡು ಬಿಡುಗಡೆ ಸಮಾರಂಭದಲ್ಲಿ ಚಿತ್ರ ತಂಡ


ಬೆಂಗಳೂರು, 07 ಆಗಸ್ಟ್ (ಹಿ.ಸ.):

ಆ್ಯಂಕರ್:ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ನಿರ್ದೇಶನದ ಮೂರನೇ ಸಿನಿಮಾ ‘ಸಿಟಿ ಲೈಟ್ಸ್’ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದ ಮೂರನೇ ಹಾಡು ‘ಕೆಂಡದೋಕುಳಿ ಗಂಡನಾ’ ಬಿಡುಗಡೆಯಾಗಿದೆ. ಜಾನಪದ ಶೈಲಿಗೆ ರ್ಯಾಪ್ ಸ್ಪರ್ಶ ನೀಡಿರುವ ಈ ಹಾಡು ಸಂಗೀತಪ್ರಿಯರ ಗಮನ ಸೆಳೆಯುತ್ತಿದೆ.

ಮಾದಪ್ಪನ ಜಾನಪದ ಸಾಲುಗಳನ್ನು ಆಧುನಿಕ ಸಂಗೀತದೊಂದಿಗೆ ಸಂಯೋಜಿಸಿರುವ ಈ ಹಾಡಿಗೆ ಜಾನಪದ ಕಲಾವಿದ ಕಂಸಾಳೆ ಧನುಷ್ ಧ್ವನಿಯಾಗಿದ್ದರೆ, ರ್ಯಾಪ್ ಭಾಗವನ್ನು ಅಮೋಘ್ ಬಾಲಾಜಿ ಹಾಡಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ.

ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದು, ದುನಿಯಾ ವಿಜಯ್ ಅವರ ಪುತ್ರಿ ಮೊನಿಷಾ ವಿಜಯ್ ಕುಮಾರ್ ಇದೇ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿನಯ್ ರಾಜ್‌ಕುಮಾರ್, ನಗರಕ್ಕೆ ಬರುವ ಇಬ್ಬರು ಮುಗ್ಧ ವ್ಯಕ್ತಿಗಳ ಬದುಕಿನಲ್ಲಿ ನಡೆಯುವ ಅನಿರೀಕ್ಷಿತ ತಿರುವುಗಳೇ ಚಿತ್ರದ ಕಥಾವಸ್ತು ಎಂದು ತಿಳಿಸಿದರು. ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನ ಹಾಡಿನ ಚಿತ್ರೀಕರಣ ಮಾಡುವ ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ ಎಂದರು.

ಮೊನಿಷಾ ವಿಜಯ್ ಕುಮಾರ್, ಲಂಡನ್‌ನಲ್ಲಿ ನಟನಾ ತರಬೇತಿ ಪಡೆದು ಈ ಪಾತ್ರಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದಾಗಿ ಹೇಳಿದರು.

ನಿರ್ದೇಶಕ ದುನಿಯಾ ವಿಜಯ್, ಡಾ. ರಾಜ್‌ಕುಮಾರ್ ಅವರ ಮೊಮ್ಮಗ ವಿನಯ್ ರಾಜ್‌ಕುಮಾರ್ ಅವರಿಗೆ ಆಕ್ಷನ್-ಕಟ್ ಹೇಳುವ ಅವಕಾಶ ಸಿಕ್ಕಿರುವುದು ತಮ್ಮ ಜೀವನದ ಹೆಮ್ಮೆಯ ಕ್ಷಣ ಎಂದು ಹೇಳಿದರು.

ಈ ಚಿತ್ರದಲ್ಲಿ ‘ಸಲಗ’ ಹಾಗೂ ‘ಭೀಮ’ ಚಿತ್ರದ ಯಶಸ್ವಿ ತಂಡವಾದ ದುನಿಯಾ ವಿಜಯ್, ಸಂಗೀತ ನಿರ್ದೇಶಕ ಚರಣ್ ರಾಜ್ ಮತ್ತು ಸಂಭಾಷಣೆಗಾರ ಮಾಸ್ತಿ ಮತ್ತೆ ಒಂದಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ‘ಕಂದಮ್ಮ’ ಹಾಗೂ ‘ಬಾವ ಬಾವ’ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಜಯ್ ಕುಮಾರ್ ಮತ್ತು ವಿಕ್ರಮ್ ಆರ್ಯ ನಿರ್ಮಿಸಿರುವ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande