
ನವದೆಹಲಿ, 05 ಆಗಸ್ಟ್ (ಹಿ.ಸ.):
ಆ್ಯಂಕರ್:
ಆಧ್ಯಾತ್ಮಿಕ ಬೆಳವಣಿಗೆ ವ್ಯಕ್ತಿಯೊಳಗೆ ಸೇವೆ, ಸಮರ್ಪಣೆ ಮತ್ತು ರಾಷ್ಟ್ರ ನಿರ್ಮಾಣದ ಭಾವನೆಯನ್ನು ಬೆಳೆಸುತ್ತದೆ. ಇದೇ ಪ್ರೇರಣೆಯಿಂದ ಇಂದು ಭಾರತದ ಯುವಶಕ್ತಿ ಪ್ರತಿಯೊಂದು ಕ್ಷೇತ್ರದಲ್ಲೂ ದೇಶವನ್ನು ಮುನ್ನಡೆಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಸ್ವಂತ ಅಭಿವೃದ್ಧಿ ಮತ್ತು ಪರೋಪಕಾರ ಎರಡೂ ಜೀವನದ ನೀತಿಯ ಮೂಲತತ್ವಗಳಾಗಿವೆ ಎಂದು ಹೇಳಿದ್ದಾರೆ. ಈ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡವರೇ ನಿಜವಾದ ಜ್ಞಾನ, ಕೀರ್ತಿ ಹಾಗೂ ಶ್ರೇಷ್ಠತೆಯನ್ನು ಸಾಧಿಸುತ್ತಾರೆ ಎಂಬ ಸಂದೇಶ ಸಾರುವ ಸಂಸ್ಕೃತ ಶ್ಲೋಕವನ್ನೂ ಅವರು ಹಂಚಿಕೊಂಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.