ಭೋಪಾಲ್ನಲ್ಲಿ ಇಂದಿನಿಂದ ಬ್ರಿಕ್ಸ್ ಸಂಸ್ಕೃತಿ ಸಚಿವರ ಸಮ್ಮೇಳನ
ಭೋಪಾಲ್, 05 ಆಗಸ್ಟ್ 5 (ಹಿ.ಸ.): ಆ್ಯಂಕರ್:ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಇಂದಿನಿಂದ ನಾಲ್ಕು ದಿನಗಳ ಬ್ರಿಕ್ಸ್ ಸಂಸ್ಕೃತಿ ಸಮ್ಮೇಳನ-2026 ಆರಂಭವಾಗಿದ್ದು, ಆಗಸ್ಟ್ 8ರವರೆಗೆ ನಡೆಯಲಿದೆ. ಬ್ರಿಕ್ಸ್ ಸದಸ್ಯ ಹಾಗೂ ಪಾಲುದಾರ 10 ದೇಶಗಳ ಸಂಸ್ಕೃತಿ ಸಚಿವರು, ಹಿರಿಯ ಅಧಿಕಾರಿಗಳು ಮತ್ತು 100ಕ್ಕೂ
भोपाल के मिंटो हाल में लगा ब्रिक्स सम्मेलन का पोस्टर


ಭೋಪಾಲ್, 05 ಆಗಸ್ಟ್ 5 (ಹಿ.ಸ.):

ಆ್ಯಂಕರ್:ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಇಂದಿನಿಂದ ನಾಲ್ಕು ದಿನಗಳ ಬ್ರಿಕ್ಸ್ ಸಂಸ್ಕೃತಿ ಸಮ್ಮೇಳನ-2026 ಆರಂಭವಾಗಿದ್ದು, ಆಗಸ್ಟ್ 8ರವರೆಗೆ ನಡೆಯಲಿದೆ. ಬ್ರಿಕ್ಸ್ ಸದಸ್ಯ ಹಾಗೂ ಪಾಲುದಾರ 10 ದೇಶಗಳ ಸಂಸ್ಕೃತಿ ಸಚಿವರು, ಹಿರಿಯ ಅಧಿಕಾರಿಗಳು ಮತ್ತು 100ಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.

ಸಮ್ಮೇಳನದಲ್ಲಿ ಸಾಂಸ್ಕೃತಿಕ ಸಹಕಾರ, ಪರಂಪರೆ ಸಂರಕ್ಷಣೆ, ಸಾಂಸ್ಕೃತಿಕ ವಿನಿಮಯ, ಸೃಜನಾತ್ಮಕ ಕೈಗಾರಿಕೆಗಳು ಹಾಗೂ ಜನ-ಜನರ ನಡುವಿನ ಸಂಪರ್ಕ ವೃದ್ಧಿ ಕುರಿತ ಮಹತ್ವದ ಚರ್ಚೆಗಳು ನಡೆಯಲಿವೆ. ಆಗಸ್ಟ್ 5 ಮತ್ತು 6ರಂದು ಅಧಿಕಾರಿಗಳ ಮಟ್ಟದ ಸಭೆಗಳು, 7 ಮತ್ತು 8ರಂದು ಸಚಿವರ ಮಟ್ಟದ ಸಭೆಗಳು ನಡೆಯಲಿದ್ದು, ಬ್ರಿಕ್ಸ್ ಸಂಸ್ಕೃತಿ ಸಚಿವರ ಘೋಷಣಾಪತ್ರಕ್ಕೆ ಅಂತಿಮ ರೂಪ ನೀಡಲಾಗುತ್ತದೆ.

ಪ್ರತಿನಿಧಿಗಳು ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ, ಸಾಂಚಿ ಸ್ತೂಪ, ಭೀಂಬೆಟ್ಕಾ ಶಿಲಾಶ್ರಯ ಸೇರಿದಂತೆ ಪ್ರಮುಖ ಸಾಂಸ್ಕೃತಿಕ ತಾಣಗಳಿಗೆ ಭೇಟಿ ನೀಡಲಿದ್ದಾರೆ. ಜೊತೆಗೆ ಬ್ರಿಕ್ಸ್ ಸಾಂಸ್ಕೃತಿಕ ಮಹೋತ್ಸವದಲ್ಲಿ ವಿವಿಧ ದೇಶಗಳ ಸಂಗೀತ, ನೃತ್ಯ ಮತ್ತು ಜನಪದ ಕಲಾ ಪ್ರದರ್ಶನಗಳು ನಡೆಯಲಿವೆ.

ಮಧ್ಯಪ್ರದೇಶದ ಸಾಂಸ್ಕೃತಿಕ ವೈಭವವನ್ನು ಪರಿಚಯಿಸುವ ವಿಶೇಷ ನೃತ್ಯ ರೂಪಕ ಅಮೃತಸ್ಯ ಮಧ್ಯ ಪ್ರದೇಶ ಪ್ರಮುಖ ಆಕರ್ಷಣೆಯಾಗಿದ್ದು, ರಾಜ್ಯದ ಐತಿಹಾಸಿಕ, ಧಾರ್ಮಿಕ ಹಾಗೂ ಜನಪದ ಪರಂಪರೆಯನ್ನು ಅನಾವರಣಗೊಳಿಸಲಿದೆ. ಪ್ರತಿನಿಧಿಗಳಿಗೆ ಮಧ್ಯಪ್ರದೇಶದ ಸಾಂಪ್ರದಾಯಿಕ ಆಹಾರಗಳ ಜೊತೆಗೆ ಸ್ಥಳೀಯ ಪರಂಪರೆ ಮತ್ತು ಪ್ರವಾಸಿ ತಾಣಗಳ ಅನುಭವಕ್ಕೂ ವಿಶೇಷ ವ್ಯವಸ್ಥೆ ಮಾಡಲಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande