
ಕೋಲಾರ, ಆಗಸ್ಟ್ ೩೧ (ಹಿ.ಸ)
ಆಂಕರ್ : ಈದ್ ಮಿಲಾದ್ ಹಬ್ಬದ ನಂತರ ಫುಟ್ಬಾಲ್ ಟೂರ್ನಿಮೆಂಟ್ನಲ್ಲಿ ಕೆಜಿಎಫ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿ ಕಪ್ ಮುಡಿಗೇರಿಸಿಕೊಂಡಿತು. ಕೆಕೆ ಸ್ಪೋರ್ಟಿಂಗ್ ಫುಟ್ಬಾಲ್ ಕ್ಲಬ್, ಕೋಲಾರ ವತಿಯಿಂದ ನಗರದ ಅಲ್ ಅಮೀನ್ ಗ್ರೌಂಡ್ನಲ್ಲಿ ಈದ್ ಮಿಲಾದ್ ಕಪ್ ಸೀಸನ್–೨ ಫುಟ್ಬಾಲ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಟೂರ್ನಮೆಂಟ್ನಲ್ಲಿ ಒಟ್ಟು ೧೪ ತಂಡಗಳು ಭಾಗವಹಿಸಿದ್ದವು.
ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ವೈ.ಡಬ್ಲೂ.ಎಫ್.ಸಿ., ಕೆಜಿಎಫ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು. ಬ್ರದರ್ಸ್ ಫುಟ್ಬಾಲ್ ಕ್ಲಬ್, ಬೆಂಗಳೂರು ತಂಡವು ರನ್ನರ್ಅಪ್ ಸ್ಥಾನ ಪಡೆದುಕೊಂಡಿತು.
ಟೂರ್ನಮೆAಟ್ ಆಯೋಜಕರಾದ ಕೆಕೆ ಸ್ಪೋರ್ಟಿಂಗ್ ಫುಟ್ಬಾಲ್ ಕ್ಲಬ್ನ ಮುಸ್ತಫಾ ಪಾಷಾ ಎಸ್.ವೈ. ಮಾತನಾಡಿ ಇಂದಿನ ದಿನಗಳಲ್ಲಿ ಯುವಕರು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಯುವಕರು ಮಾದಕ ವಸ್ತುಗಳಿಂದ ದೂರವಿದ್ದು ಕ್ರೀಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು. ಯುವಕರನ್ನು ಕ್ರೀಡೆಯತ್ತ ಆಕರ್ಷಿಸುವ ಹಾಗೂ ಪ್ರೋತ್ಸಾಹಿಸುವ ಉದ್ದೇಶದಿಂದ ಕೆಕೆ ಸ್ಪೋರ್ಟಿಂಗ್ ವತಿಯಿಂದ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಕೆಕೆ ಸ್ಪೋರ್ಟಿಂಗ್ನ ಹಿರಿಯ ಫುಟ್ಬಾಲ್ ಆಟಗಾರ ತಜಮ್ಮುಲ್ ಮಾತನಾಡಿ, ಟೂರ್ನಮೆಂಟ್ನಲ್ಲಿ ಭಾಗವಹಿಸಿದ ಎಲ್ಲಾ ತಂಡಗಳು ಸ್ನೇಹ, ಸೌಹಾರ್ದತೆ ಮತ್ತು ಒಗ್ಗಟ್ಟಿನಿಂದ ಆಟವಾಡಿದ್ದು ಸಂತಸ ತಂದಿದೆ. ಕ್ರೀಡೆಯ ಮೂಲಕ ಯುವಕರಲ್ಲಿ ಶಿಸ್ತು ಮತ್ತು ಏಕತೆಯ ಮನೋಭಾವ ಬೆಳೆಸಬಹುದು ಎಂದರು.
ಕೆಕೆ ಸ್ಪೋರ್ಟಿಂಗ್ ಸದಸ್ಯ ಓವೈಝ್ ಮಾತನಾಡಿ, ಟೂರ್ನಮೆಂಟ್ನಲ್ಲಿ ಭಾಗವಹಿಸಿದ ಎಲ್ಲಾ ತಂಡಗಳು ಹಾಗೂ ಯುವಕರನ್ನು ಅಭಿನಂದಿಸಿ, ಮುಂದಿನ ದಿನಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಹೇಳಿದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕೆಕೆ ಸ್ಪೋರ್ಟಿಂಗ್ ಸದಸ್ಯರಾದ ಇಸ್ಮಾಯಿಲ್, ಜಿಯಾ, ಓವೈಝ್, ಹಸೀಬ್, ಸಬೀರ್ ಎನ್., ಸಬೀರ್, ಸೋನಿ, ತನ್ವೀರ್, ಮತೀನ್, ತೌಸಿಫ್, ಫರ್ಹಾನ್, ರಿಯಾನ್, ಮುಜ್ಜು ಹಾಗೂ ಜುನೈದ್ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್