
ನವದೆಹಲಿ, 30 ಆಗಸ್ಟ್ (ಹಿ.ಸ.):
ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪ್ರಸಾರವಾದ ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನದ ಮಾತು’ನ 137ನೇ ಸಂಚಿಕೆಯಲ್ಲಿ ಭಾರತದ ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಯಾವ ಪ್ರದೇಶದಲ್ಲಿ ಯಾರ ಆಡಳಿತವಿತ್ತು ಎಂಬುದನ್ನು ತಿಳಿದುಕೊಳ್ಳಲು ನೆರವಾಗುವ ಜಾಲತಾಣವೊಂದನ್ನು ಪರಿಚಯಿಸಿದರು.
ಭಾರತರಾಜ್ಯ ಡಾಟ್ ಕಾಮ್( bharatrajya.com ) ಜಾಲತಾಣದಲ್ಲಿ ವರ್ಷವನ್ನು ಆಯ್ಕೆ ಮಾಡುವ ಮೂಲಕ ನಿರ್ದಿಷ್ಟ ಕಾಲಘಟ್ಟದಲ್ಲಿ ಭಾರತದ ಯಾವ ಭಾಗದಲ್ಲಿ ಯಾರ ಆಡಳಿತವಿತ್ತು ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು ಎಂದು ಪ್ರಧಾನಿ ಮೋದಿ ಹೇಳಿದರು. ಜಾಲತಾಣವನ್ನು ಅತ್ಯಂತ ಸರಳವಾಗಿ ರೂಪಿಸಲಾಗಿದೆ ಎಂದರು.
ಕಾರ್ಯಕ್ರಮದ ಸಂದರ್ಭದಲ್ಲಿ ಜಾಲತಾಣದ ನಿರ್ಮಾತೃ ಕೃಷ್ಣ ಶೇಷಾದ್ರಿ ಅವರೊಂದಿಗೆ ಪ್ರಧಾನಿ ಮೋದಿ ದೂರವಾಣಿ ಮೂಲಕ ಸಂವಾದ ನಡೆಸಿದರು. ಈ ವೇಳೆ ಶೇಷಾದ್ರಿ ಮಾತನಾಡಿ, ಭಾರತೀಯ ಇತಿಹಾಸದಲ್ಲಿ ಕೆಲವೇ ಪ್ರಮುಖ ಆಡಳಿತಗಾರರ ಕುರಿತು ಹೆಚ್ಚು ಬೋಧಿಸಲಾಗುತ್ತದೆ. ಆದರೆ ಭಾರತದ ಇತಿಹಾಸವು ಅನೇಕ ನಾಯಕರು ಮತ್ತು ವೀರರಿಂದ ಸಮೃದ್ಧವಾಗಿದೆ ಎಂದು ತಿಳಿಸಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.