ನೇಪಾಳ ಪ್ರವಾಹದಲ್ಲಿ ಸಿಲುಕಿದ್ದ ಮಹಾರಾಷ್ಟ್ರದ 100 ಯಾತ್ರಿಕರ ರಕ್ಷಣೆ
ಪಾಟ್ನಾ, 29 ಆಗಸ್ಟ್ (ಹಿ.ಸ.): ಆ್ಯಂಕರ್: ನೇಪಾಳದಲ್ಲಿ ಉಂಟಾದ ಪ್ರವಾಹದಿಂದ ಕಠ್ಮಂಡುವಿನಲ್ಲಿ ಸಿಲುಕಿದ್ದ ಮಹಾರಾಷ್ಟ್ರದ ಸುಮಾರು 100 ಮಂದಿ ಯಾತ್ರಿಕರನ್ನು ಬಿಹಾರ ಸರ್ಕಾರದ ನೆರವಿನಿಂದ ಸುರಕ್ಷಿತವಾಗಿ ರಕ್ಷಿಸಿ ಸ್ವರಾಜ್ಯಕ್ಕೆ ರೈಲಿನಲ್ಲಿ ಕಳುಹಿಸಿಕೊಡಲಾಗಿದೆ. ಮಹಾರಾಷ್ಟ್ರ ಸರ್ಕಾರದ ಮನವಿಯ ಮೇರೆ
नेपाल से रेस्कयू कर पटना लाये गए महाराष्ट्र के तीर्थ यात्रियों को पटना से विशेष एसी कोच से रवाना करते रेलवे कर्मचारी


महाराष्ट्र के तीर्थयात्रियों का जत्था पटना जंक्शन पर रेलवे कोच में जाते हुए


ಪಾಟ್ನಾ, 29 ಆಗಸ್ಟ್ (ಹಿ.ಸ.):

ಆ್ಯಂಕರ್:

ನೇಪಾಳದಲ್ಲಿ ಉಂಟಾದ ಪ್ರವಾಹದಿಂದ ಕಠ್ಮಂಡುವಿನಲ್ಲಿ ಸಿಲುಕಿದ್ದ ಮಹಾರಾಷ್ಟ್ರದ ಸುಮಾರು 100 ಮಂದಿ ಯಾತ್ರಿಕರನ್ನು ಬಿಹಾರ ಸರ್ಕಾರದ ನೆರವಿನಿಂದ ಸುರಕ್ಷಿತವಾಗಿ ರಕ್ಷಿಸಿ ಸ್ವರಾಜ್ಯಕ್ಕೆ ರೈಲಿನಲ್ಲಿ ಕಳುಹಿಸಿಕೊಡಲಾಗಿದೆ.

ಮಹಾರಾಷ್ಟ್ರ ಸರ್ಕಾರದ ಮನವಿಯ ಮೇರೆಗೆ ಬಿಹಾರ ಮುಖ್ಯಮಂತ್ರಿ ಅವರ ಸೂಚನೆಯಂತೆ ಸೀತಾಮಢಿ ಜಿಲ್ಲಾಡಳಿತ ಆಗಸ್ಟ್ 28ರಂದು ತ್ವರಿತ ಕ್ರಮ ಕೈಗೊಂಡಿತು. ನೇಪಾಳ ಗಡಿಯಿಂದ ಯಾತ್ರಿಕರನ್ನು ಸುರಕ್ಷಿತವಾಗಿ ಕರೆದೊಯ್ದು ಸೀತಾಮಢಿಗೆ ತಂದು, ಊಟ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಯಿತು.

ಬಳಿಕ ಆಗಸ್ಟ್ 29ರಂದು ಮುಂಜಾನೆ ಸುಮಾರು 2.30ಕ್ಕೆ ಅವರನ್ನು ಸೀತಾಮಢಿಯಿಂದ ಪಾಟ್ನಾಕ್ಕೆ ಕರೆತರಲಾಯಿತು. ಪಾಟ್ನಾದ ಓಪಿ ಸಾಹ ಸಮುದಾಯ ಭವನದಲ್ಲಿ ವಾಸ್ತವ್ಯ, ಊಟ ಹಾಗೂ ವೈದ್ಯಕೀಯ ತಪಾಸಣೆಯ ವ್ಯವಸ್ಥೆ ಮಾಡಲಾಗಿತ್ತು.

ಯಾತ್ರಿಕರ ಸುರಕ್ಷಿತ ಸ್ವರಾಜ್ಯ ವಾಪಸಿಗಾಗಿ ಬಿಹಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ರೈಲ್ವೆ ಮಂಡಳಿ ಅಧ್ಯಕ್ಷರೊಂದಿಗೆ ಸಮನ್ವಯ ನಡೆಸಿದರು. ಇದರ ಫಲವಾಗಿ ಪಾಟ್ನಾ-ಪೂರ್ಣಾ ಎಕ್ಸ್‌ಪ್ರೆಸ್‌ಗೆ ಎರಡು ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಯಿತು. ಆಗಸ್ಟ್ 29ರಂದು ಬೆಳಿಗ್ಗೆ 7.30ಕ್ಕೆ ಯಾತ್ರಿಕರನ್ನು ವಿಶೇಷ ವ್ಯವಸ್ಥೆಯಡಿ ಮಹಾರಾಷ್ಟ್ರಕ್ಕೆ ರೈಲಿನಲ್ಲಿ ಕಳುಹಿಸಲಾಯಿತು.

ಸುರಕ್ಷಿತವಾಗಿ ಮನೆಗೆ ಮರಳಲು ನೆರವು ನೀಡಿದ ಬಿಹಾರ ಸರ್ಕಾರ ಹಾಗೂ ಸೀತಾಮಢಿ ಮತ್ತು ಪಾಟ್ನಾ ಜಿಲ್ಲಾಡಳಿತಕ್ಕೆ ಯಾತ್ರಿಕರು ಕೃತಜ್ಞತೆ ಸಲ್ಲಿಸಿದರು. ಪ್ರವಾಹದ ನಡುವೆಯೂ ತ್ವರಿತವಾಗಿ ಕೈಗೊಂಡ ಪರಿಹಾರ ಕಾರ್ಯ ಹಾಗೂ ಅಧಿಕಾರಿಗಳ ಮಾನವೀಯ ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

-------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande