ನುಲಿಯ ಚಂದಯ್ಯನವರ ಕಾಯಕದ ಆದರ್ಶಗಳು ಸಮಾಜಕ್ಕೆ ದಾರಿದೀಪ: ಐ.ಜಿ. ಸನದಿ
ಧಾರವಾಡ, 28 ಆಗಸ್ಟ್ (ಹಿ.ಸ.): ಆ್ಯಂಕರ್: ಶಿವಶರಣ ನುಲಿಯ ಚಂದಯ್ಯನವರ ವಚನಗಳು ಕಾಯಕ, ಪರಿಶ್ರಮ, ಒಗ್ಗಟ್ಟು, ವಿದ್ಯೆ ಹಾಗೂ ಸ್ವಾಭಿಮಾನದ ಬದುಕಿನ ಮಹತ್ವವನ್ನು ಸಾರುತ್ತವೆ. ಅವರ ಆದರ್ಶಗಳನ್ನು ಇಂದಿನ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಸಂಸದ ಐ.ಜಿ. ಸನದಿ ಹೇಳಿದರು. ನಗರದ ಕರ್ನಾಟಕ ಕುಲಪು
ನುಲಿಯ ಚಂದ್ರಯ್ಯ ಜಯಂತಿ


ಧಾರವಾಡ, 28 ಆಗಸ್ಟ್ (ಹಿ.ಸ.):

ಆ್ಯಂಕರ್:

ಶಿವಶರಣ ನುಲಿಯ ಚಂದಯ್ಯನವರ ವಚನಗಳು ಕಾಯಕ, ಪರಿಶ್ರಮ, ಒಗ್ಗಟ್ಟು, ವಿದ್ಯೆ ಹಾಗೂ ಸ್ವಾಭಿಮಾನದ ಬದುಕಿನ ಮಹತ್ವವನ್ನು ಸಾರುತ್ತವೆ. ಅವರ ಆದರ್ಶಗಳನ್ನು ಇಂದಿನ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಸಂಸದ ಐ.ಜಿ. ಸನದಿ ಹೇಳಿದರು.

ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಂದು ಕಾಯಕಕ್ಕೂ ಸಮಾಜದಲ್ಲಿ ಮಹತ್ವವಿದ್ದು, ಯಾವುದೇ ಕೆಲಸವನ್ನು ಕೀಳಾಗಿ ಕಾಣದೆ ಕಾಯಕ ಮಾಡುವವರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಹಲವು ನೂಲುಗಳು ಒಂದಾಗಿ ಗಟ್ಟಿಯಾದ ಹಗ್ಗವಾಗುವಂತೆ ಸಮಾಜದ ಜನರು ಒಗ್ಗಟ್ಟಿನಿಂದ ಮುನ್ನಡೆದಾಗ ಸಮಾಜ ಬಲಿಷ್ಠವಾಗುತ್ತದೆ. “ಕಾಯಕವೇ ಕೈಲಾಸ” ಎಂಬ ಸಂದೇಶದಂತೆ ಪ್ರಾಮಾಣಿಕವಾಗಿ ದುಡಿಯಬೇಕು ಎಂದರು.

ವಿದ್ಯೆ ಮತ್ತು ಜ್ಞಾನದಿಂದ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದರ ಜೊತೆಗೆ ಪರಿಶ್ರಮ ಹಾಗೂ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು. ನುಲಿಯ ಚಂದಯ್ಯನವರ ವಚನಗಳಲ್ಲಿರುವ ವಿಚಾರಗಳನ್ನು ಮಕ್ಕಳಿಗೆ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು ಎಂದು ಹೇಳಿದರು.

ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ ಮಾತನಾಡಿ, ಕಾಯಕವನ್ನು ಜೀವನೋಪಾಯಕ್ಕೆ ಸೀಮಿತಗೊಳಿಸದೆ ಸಮಾಜ ಸೇವೆಯ ಮನೋಭಾವದಿಂದ ನಿರ್ವಹಿಸಬೇಕು. ಮಾನವೀಯತೆ, ಸಹಕಾರ ಮತ್ತು ಸಮಾನತೆಯ ಮೂಲಕ ಸಮಾಜ ಕಟ್ಟಬೇಕು ಎಂದರು.

ಮಹಾನಗರ ಪಾಲಿಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ ಹಳಿಯಾಳ ಮಾತನಾಡಿ, ಪ್ರಾಮಾಣಿಕ ಕಾಯಕಕ್ಕೆ ಗೌರವ ಮತ್ತು ಪ್ರತಿಫಲ ದೊರೆಯುತ್ತದೆ. ನುಲಿಯ ಚಂದಯ್ಯನವರ ಜೀವನ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ. ಸರೋಜಿನಿ ಹೊಸಕೇರಿ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಕಾಯಕಕ್ಕೆ ಸಂಬಂಧಿಸಿದ ಕಸಬರಗಿ ಕಟ್ಟುವ ಹಾಗೂ ನೂಲು ಹೊಸೆಯುವ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande