ನಾರಾಯಣ ಗುರು ಜಯಂತಿ: ಡಿಕೆ ಶಿವಕುಮಾರ್ ನಮನ
ಬೆಂಗಳೂರು, 28 ಆಗಸ್ಟ್ (ಹಿ.ಸ.): ಆ್ಯಂಕರ್:ಜಾತಿ ತಾರತಮ್ಯ, ಅಂಧಶ್ರದ್ಧೆ ಮತ್ತು ಸಾಮಾಜಿಕ ಅಸಮಾನತೆಯ ಕತ್ತಲೆಯನ್ನು ಹೋಗಲಾಡಿಸಿ, ಮಾನವಕುಲಕ್ಕೆ ಪ್ರೀತಿ ಹಾಗೂ ಜ್ಞಾನದ ಬೆಳಕು ತೋರಿದ ಮಹಾನ್ ದಾರ್ಶನಿಕ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಮನ ಸಲ್ಲಿಸಿದ್
ಸಿಎಂ ಎಕ್ಸನಲ್ಲಿ ಹಂಚಿಕೊಂಡಿರುವ ಪೋಟೋ


ಬೆಂಗಳೂರು, 28 ಆಗಸ್ಟ್ (ಹಿ.ಸ.):

ಆ್ಯಂಕರ್:ಜಾತಿ ತಾರತಮ್ಯ, ಅಂಧಶ್ರದ್ಧೆ ಮತ್ತು ಸಾಮಾಜಿಕ ಅಸಮಾನತೆಯ ಕತ್ತಲೆಯನ್ನು ಹೋಗಲಾಡಿಸಿ, ಮಾನವಕುಲಕ್ಕೆ ಪ್ರೀತಿ ಹಾಗೂ ಜ್ಞಾನದ ಬೆಳಕು ತೋರಿದ ಮಹಾನ್ ದಾರ್ಶನಿಕ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಮನ ಸಲ್ಲಿಸಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಆಧ್ಯಾತ್ಮಿಕ ಶಕ್ತಿ, ಪ್ರೀತಿ ಹಾಗೂ ಸುಧಾರಣಾವಾದಿ ಚಿಂತನೆಗಳ ಮೂಲಕ ಸಮಾಜದ ತಳಸಮುದಾಯಗಳಿಗೆ ಆತ್ಮಗೌರವ ಮತ್ತು ಸಮಾನತೆಯನ್ನು ತಂದುಕೊಟ್ಟ ಕೀರ್ತಿ ನಾರಾಯಣ ಗುರುಗಳಿಗೆ ಸಲ್ಲುತ್ತದೆ ಎಂದು ತಿಳಿಸಿದ್ದಾರೆ.

“ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಶಾಲಿಗಳಾಗಿ” ಎಂಬ ನಾರಾಯಣ ಗುರುಗಳ ಕರೆ ಇಂದಿಗೂ ಪ್ರಸ್ತುತವಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande