
ಬೆಂಗಳೂರು, 28 ಆಗಸ್ಟ್ (ಹಿ.ಸ.):
ಆ್ಯಂಕರ್:
ಸಾಮಾಜಿಕ ಸಾಮರಸ್ಯದ ಪ್ರತಿಪಾದಕರಾಗಿದ್ದ ಧಾರ್ಮಿಕ ಸಂತ ಶ್ರೀ ನಾರಾಯಣಗುರು ಅವರ ಜನ್ಮ ಜಯಂತಿಯ ಅಂಗವಾಗಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಗೌರವ ನಮನ ಸಲ್ಲಿಸಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಮೌಢ್ಯ, ಅಸ್ಪೃಶ್ಯತೆ, ಕಂದಾಚಾರ ಹಾಗೂ ತಾರತಮ್ಯ ವ್ಯವಸ್ಥೆಯ ಪರಿವರ್ತನೆಗಾಗಿ ಸಮಾಜದಲ್ಲಿ ಧರ್ಮದ ಮೂಲಕವೇ ಜಾಗೃತಿ ಮೂಡಿಸಿದ ನಾರಾಯಣಗುರು ಅವರ ಸೇವೆಯನ್ನು ಸ್ಮರಿಸಿದ್ದಾರೆ.
ಶೈಕ್ಷಣಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ನಾರಾಯಣಗುರು ಅವರ ಕ್ರಾಂತಿಕಾರಿ ಚಿಂತನೆಗಳು ಸಮಾಜವನ್ನು ಪ್ರಗತಿಯತ್ತ ಮುನ್ನಡೆಸಿವೆ. ಅವರ ಬದುಕಿನ ಮೌಲ್ಯಗಳು ಸದಾ ನಮಗೆ ಆದರ್ಶವಾಗಲಿ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.