ನಾಳೆ ಬೆಂಗಳೂರು ಜಲಮಂಡಳಿಯಿಂದ ನಾಳೆ ನೇರ ಫೋನ್-ಇನ್ ಕಾರ್ಯಕ್ರಮ
ಸಾರ್ವಜನಿಕರ ಕುಂದುಕೊರತೆಗಳ ಪರಿಹಾರಕ್ಕೆ ಅವಕಾಶ
ನಾಳೆ ಬೆಂಗಳೂರು ಜಲಮಂಡಳಿಯಿಂದ ನಾಳೆ ನೇರ ಫೋನ್-ಇನ್ ಕಾರ್ಯಕ್ರಮ


ಬೆಂಗಳೂರು, 27 ಆಗಸ್ಟ್ (ಹಿ.ಸ.):

ಆ್ಯಂಕರ್:

ನಾಗರಿಕರ ನೀರಿನ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿಯು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಜಲಮಂಡಳಿಯ ಅಧ್ಯಕ್ಷರಾದ ಡಾ. ಮಂಜುಳಾ ಎನ್. ಅವರ ನೇತೃತ್ವದಲ್ಲಿ ಆಗಸ್ಟ್ 28 ರಂದು ಶುಕ್ರವಾರದಂದು 'ನೇರ ಫೋನ್-ಇನ್' ಕಾರ್ಯಕ್ರಮವನ್ನು ಅಧಿಕೃತವಾಗಿ ಆಯೋಜಿಸಲಾಗಿದೆ.

ಬೆಳಿಗ್ಗೆ 09:30 ರಿಂದ 10:30 ರವರೆಗೆ ನಿಗದಿಯಾಗಿರುವ ಈ ಒಂದು ಗಂಟೆಯ ಅವಧಿಯಲ್ಲಿ, ಸಾರ್ವಜನಿಕರು ತಮ್ಮ ವಲಯ ಹಾಗೂ ಪ್ರದೇಶಗಳಲ್ಲಿ ಎದುರಾಗುತ್ತಿರುವ ವಿವಿಧ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ನೇರವಾಗಿ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ.

ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಅಥವಾ ಕೊರತೆ.

ಒಳಚರಂಡಿ ಕೊಳವೆಗಳು ಅಥವಾ ಇಳಿ ಗುಂಡಿಗಳಿಂದ ತ್ಯಾಜ್ಯ ನೀರು ಹೊರಬರುತ್ತಿರುವ ಸಮಸ್ಯೆ.

ಜಲಮಾಪನ (ವಾಟರ್ ಮೀಟರ್) ಹಾಗೂ ನೀರಿನ ಬಿಲ್ಲಿನ ದೋಷಗಳಿಗೆ ಸಂಬಂಧಿಸಿದ ತೊಂದರೆಗಳ ಕುರಿತು ದೂರು ನೀಡಬಹುದಾಗಿದೆ.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:

ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಹಂಚಿಕೊಳ್ಳಲು ಈ ಕೆಳಗಿನ ನಂಬರ್ ಗಳಿಗೆ ಕರೆ ಮಾಡಬಹುದು:

080-22945119

080-22229639

ಜಲಮಂಡಳಿಯಿಂದ ನೀರಿನ ಸಂಪರ್ಕ ಪಡೆದಿರುವ ಗ್ರಾಹಕರು ದೂರನ್ನು ದಾಖಲಿಸುವ ವೇಳೆ ತಮ್ಮ ಆರ್.ಆರ್. ಸಂಖ್ಯೆಯನ್ನು ಕಡ್ಡಾಯವಾಗಿ ತಿಳಿಸುವಂತೆ ಜಲಮಂಡಳಿ ಪ್ರಕಟಣೆಯಲ್ಲಿ ಮನವಿ ಮಾಡಿದೆ.

ಬೆಂಗಳೂರು ನಗರದ ಸಾರ್ವಜನಿಕರು ಈ ವಿಶೇಷ ನೇರ ಫೋನ್-ಇನ್ ಕಾರ್ಯಕ್ರಮದ ಸದುಪಯೋಗಪಡಿಸಿಕೊಂಡು, ತಮ್ಮ ನೀರಿನ ಬಿಕ್ಕಟ್ಟು ಹಾಗೂ ಒಳಚರಂಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಜಲಮಂಡಳಿ ಕೋರಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande