
ನವದೆಹಲಿ, 27 ಆಗಸ್ಟ್ (ಹಿ.ಸ.):
ಆ್ಯಂಕರ್:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಬೆಳಗ್ಗೆ ತಮ್ಮ ‘ಎಕ್ಸ್’ ಖಾತೆಯಲ್ಲಿ ಋಗ್ವೇದದ ಮಹತ್ವದ ಶ್ಲೋಕವೊಂದನ್ನು ‘ಸುಭಾಷಿತದ’ ರೂಪದಲ್ಲಿ ಹಂಚಿಕೊಂಡು, ಪರಂಪರೆ ಹಾಗೂ ಜ್ಞಾನವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಂತೆ ಕರೆ ನೀಡಿದ್ದಾರೆ.
ಋಗ್ವೇದದ ದಶಮ ಮಂಡಲದ 53ನೇ ಸೂಕ್ತದ ಆರನೇ ಮಂತ್ರವಾಗಿರುವ ಈ ಶ್ಲೋಕದ ಅರ್ಥವನ್ನು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ವಿವರಿಸಿದ್ದಾರೆ. ಮನುಷ್ಯನು ತನ್ನ ಪರಂಪರೆ ಹಾಗೂ ಜ್ಞಾನವನ್ನು ಮುಂದುವರಿಸಿಕೊಂಡು, ಶ್ರೇಷ್ಠ ಕಾರ್ಯಗಳನ್ನು ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಬುದ್ಧಿಯಿಂದ ರೂಪುಗೊಂಡ ನ್ಯಾಯಯುತ ಹಾಗೂ ಪ್ರಕಾಶಮಾನ ಮಾರ್ಗವನ್ನು ಅನುಸರಿಸಬೇಕು. ಶ್ರೇಷ್ಠ ವ್ಯಕ್ತಿಗಳ ಸದಾಚಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಸದಾ ಚಿಂತನಶೀಲರಾಗಿರಬೇಕು. ಜೊತೆಗೆ ದೈವಿಕ ಗುಣಗಳಿಂದ ಕೂಡಿದ ಉತ್ತಮ ವ್ಯಕ್ತಿಗಳನ್ನು ರೂಪಿಸಬೇಕು ಎಂಬ ಸಂದೇಶವನ್ನು ಶ್ಲೋಕ ಸಾರುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.