ಆ.28ರಂದು ಹುಬ್ಬಳ್ಳಿಯಲ್ಲಿ ಆರ್.ಎಸ್.ಎಸ್. ವತಿಯಿಂದ ರಕ್ಷಾ ಬಂಧನ ಉತ್ಸವ
ಹುಬ್ಬಳ್ಳಿ, 26 ಆಗಸ್ಟ್ (ಹಿ.ಸ.): ಆ್ಯಂಕರ್:ರಾಷ್ಟ್ರೀಯ ಸ್ವಯಂಸೇವಕ ಸಂಘದ ಹುಬ್ಬಳ್ಳಿ ಮಹಾನಗರದ ವತಿಯಿಂದ ಪರಸ್ಪರ ಸಹೋದರತ್ವ, ಸೌಹಾರ್ದತೆ ಹಾಗೂ ಸಾಮಾಜಿಕ ಸಾಮರಸ್ಯದ ಭಾವ ಬೆಳೆಸುವ ಉದ್ದೇಶದಿಂದ ‘ರಕ್ಷಾ ಬಂಧನ ಉತ್ಸವ’ವನ್ನು ಆ.28ರಂದು ಆಯೋಜಿಸಲಾಗಿದೆ. ನಗರದ ವಾಸವಿ ಮಹಲ್‌ನಲ್ಲಿ ಶುಕ್ರವಾರ ಬೆಳಗ್ಗೆ
ಆಮಂತ್ರಣ ಪತ್ರಿಕೆ


ಹುಬ್ಬಳ್ಳಿ, 26 ಆಗಸ್ಟ್ (ಹಿ.ಸ.):

ಆ್ಯಂಕರ್:ರಾಷ್ಟ್ರೀಯ ಸ್ವಯಂಸೇವಕ ಸಂಘದ ಹುಬ್ಬಳ್ಳಿ ಮಹಾನಗರದ ವತಿಯಿಂದ ಪರಸ್ಪರ ಸಹೋದರತ್ವ, ಸೌಹಾರ್ದತೆ ಹಾಗೂ ಸಾಮಾಜಿಕ ಸಾಮರಸ್ಯದ ಭಾವ ಬೆಳೆಸುವ ಉದ್ದೇಶದಿಂದ ‘ರಕ್ಷಾ ಬಂಧನ ಉತ್ಸವ’ವನ್ನು ಆ.28ರಂದು ಆಯೋಜಿಸಲಾಗಿದೆ.

ನಗರದ ವಾಸವಿ ಮಹಲ್‌ನಲ್ಲಿ ಶುಕ್ರವಾರ ಬೆಳಗ್ಗೆ 7.30ಕ್ಕೆ ಉತ್ಸವ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮನೋಹರ ಬಾಕಳೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪ್ರಮುಖ ವಕ್ತಾರರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹಬೌದ್ಧಿಕ ಪ್ರಮುಖರಾದ ಪ್ರೊ. ರಾಜಶೇಖರ ಹೆಗಡೆ ಪಾಲ್ಗೊಳ್ಳಲಿದ್ದಾರೆ.

ಮುಖ್ಯ ವಕ್ತಾರರಾಗಿ ರಾಮಚಂದ್ರ ಎಡಕೆ ಭಾಗವಹಿಸಲಿದ್ದು, ಹುಬ್ಬಳ್ಳಿ ಮಹಾನಗರ ಸಂಘಚಾಲಕ ಶಿವಾನಂದ ಆವಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ಸಮಾಜದಲ್ಲಿ ಸಹೋದರತ್ವ, ಪರಸ್ಪರ ವಿಶ್ವಾಸ ಹಾಗೂ ಸಾಮರಸ್ಯದ ಭಾವನೆ ಬಲಪಡಿಸುವ ಉದ್ದೇಶದಿಂದ ಆಯೋಜಿಸಿರುವ ಉತ್ಸವದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘದ ವತಿಯಿಂದ ಮನವಿ ಮಾಡಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande