ಬಳ್ಳಾರಿಯಲ್ಲಿ ಮನೆಗಳ್ಳತನ: ಐವರು ಆರೋಪಿಗಳ ಬಂಧನ
ಬಳ್ಳಾರಿ, 25 ಆಗಸ್ಟ್ (ಹಿ.ಸ.) ಆ್ಯಂಕರ್ : ಬಳ್ಳಾರಿ ನಗರದ ವಿವಿಧೆಡೆ ನಡೆದ ಮನೆಗಳ್ಳತನ ಪ್ರಕರಣಗಳ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಂದ ಬೆಳ್ಳಿ, ಬಂಗಾರದ ಆಭರಣಗಳು ಮತ್ತು ನಗದು ಹಣವನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ನಾಲ್ವರು ಮನೆಗಳ್ಳತನ ಆರೋಪಿಗಳ ಬಂಧನ, ನ್ಯಾಯಾಂಗ ಬಂಧನಕ್ಕೆ


ನಾಲ್ವರು ಮನೆಗಳ್ಳತನ ಆರೋಪಿಗಳ ಬಂಧನ, ನ್ಯಾಯಾಂಗ ಬಂಧನಕ್ಕೆ


ನಾಲ್ವರು ಮನೆಗಳ್ಳತನ ಆರೋಪಿಗಳ ಬಂಧನ, ನ್ಯಾಯಾಂಗ ಬಂಧನಕ್ಕೆ


ನಾಲ್ವರು ಮನೆಗಳ್ಳತನ ಆರೋಪಿಗಳ ಬಂಧನ, ನ್ಯಾಯಾಂಗ ಬಂಧನಕ್ಕೆ


ನಾಲ್ವರು ಮನೆಗಳ್ಳತನ ಆರೋಪಿಗಳ ಬಂಧನ, ನ್ಯಾಯಾಂಗ ಬಂಧನಕ್ಕೆ


ನಾಲ್ವರು ಮನೆಗಳ್ಳತನ ಆರೋಪಿಗಳ ಬಂಧನ, ನ್ಯಾಯಾಂಗ ಬಂಧನಕ್ಕೆ


ನಾಲ್ವರು ಮನೆಗಳ್ಳತನ ಆರೋಪಿಗಳ ಬಂಧನ, ನ್ಯಾಯಾಂಗ ಬಂಧನಕ್ಕೆ


ನಾಲ್ವರು ಮನೆಗಳ್ಳತನ ಆರೋಪಿಗಳ ಬಂಧನ, ನ್ಯಾಯಾಂಗ ಬಂಧನಕ್ಕೆ


ಬಳ್ಳಾರಿ, 25 ಆಗಸ್ಟ್ (ಹಿ.ಸ.)

ಆ್ಯಂಕರ್ : ಬಳ್ಳಾರಿ ನಗರದ ವಿವಿಧೆಡೆ ನಡೆದ ಮನೆಗಳ್ಳತನ ಪ್ರಕರಣಗಳ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಂದ ಬೆಳ್ಳಿ, ಬಂಗಾರದ ಆಭರಣಗಳು ಮತ್ತು ನಗದು ಹಣವನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಸುಮನ್ ಡಿ. ಪೆನ್ನೇಕರ್ ಅವರು ಸುದ್ದಿಗಾರರಿಗೆ ಮಂಗಳವಾರ ಈ ಮಾಹಿತಿ ನೀಡಿದ್ದು, ಬಳ್ಳಾರಿಯ ಕರಿಮಾರೆಮ್ಮ ಕಾಲೊನಿ ನಿವಾಸಿ ಆಗಿರುವ ಹನುಮಂತಪ್ಪ (28)ನನ್ನು ಬಂಧಿಸಿರುವ ಪೊಲೀಸರು ಆರೋಪಿಯಿಂದ ರೂಪಾಯಿ 13,20,000 ಮೌಲ್ಯದ 110 ಗ್ರಾಂ ಬಂಗಾರದ ಆಭರಣಗಳು ಹಾಗೂ ರೂ 10,00,000/- ನಗದು ಹಣವನ್ನು ಜಪ್ತಿ ಮಾಡಿದ್ದಾರೆ.

ಆರೋಪಿಯು ಬಳ್ಳಾರಿ, ಮುಂಡರಗಿ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಪರಶುರಾಮ, ಚಳ್ಳಕೆರೆ, ದಾವಣಗೆರೆ ಜಿಲ್ಲೆಯ ಜಗಳೂರು, ಬೆಂಗಳೂರು ನಗರದ ಉಪ್ಪಾರಪೇಟೆ, ಸಿಟಿ ರೈಲ್ವೆ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಹಾಗೂ ನೆರೆಯ ಆಂಧ್ರಪ್ರದೇಶದ ಚಿತ್ತೂರು, ಟೂಟೌನ್ ಪೊಲೀಸ್ ಠಾಣೆಗಳಲ್ಲಿನ 40 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಆರೋಪಿಯು ಕ್ರಿಮಿನಲ್ ಹಿನ್ನೆಯನ್ನು ಹೊಂದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಎಪಿಎಂಸಿ ಪೊಲೀಸ್ ಠಾಣೆ

ಗೌಳೇರಹಟ್ಟಿಯ ಶ್ರೀಮತಿ ಲಿಂಗಮ್ಮ ಅವರ ಕೊರಳಲ್ಲಿದ್ದ 41 ಗ್ರಾಂ ಬಂಗಾರದ ಎರಡು ಎಳೆಯ ಸರವನ್ನು ಕಿತ್ತುಕೊಂಡು ಪರಾರಿ ಆಗಿದ್ದ ಮನ್ಸೂರ್ನನ್ನು ಹುಡುಕಾಡುತ್ತಿದ್ದಾಗ ಆರೋಪಿಯು ಹೊಸಪೇಟೆಯಲ್ಲಿ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಆರೋಪಿಯು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು, ತನ್ನ ಮಾವನಾದ ನಿಜಾಮನಿಗೆ, ಹೆಂಡತಿ ಸಬೀರಗೆ ಫೋನ್ ಮಾಡಿ, ತನ್ನ ಚಟಗಳಿಗೆ ಸಾಲ ಮಾಡಿದ್ದು ಸಾಲ ತೀರಿಸಲು ಆಗದೇ ಗೌಳೇರಹಟ್ಟಿಯಿಂದ ಒಬ್ಬ ಅಜ್ಜಿಯ ಕೊರಳಲ್ಲಿಂದ ಬಂಗಾರದ ಸರ ಕಿತ್ತುಕೊಂಡಿರುವೆ. ಸರಗಳ್ಳತನ ತನ್ನ ಮನಸ್ಸಿಗೆ ನೋವಾಗಿದೆ. ಆ ಸರವನ್ನು ಮರಳಿ ಅಜ್ಜಿಗೆ ವಾಪಸ್ ಕೊಡಿ ಎಂದು ಬಂಗಾರದ ಇಟ್ಟ ಸ್ಥಳವನ್ನು ಹೇಳಿ ಹೊಸಪೇಟೆಯಲ್ಲಿ ರೈಲ್ವೆ ಹಳಿಯ ಮೇಲೆ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನ ಕೊನೆಯ ಆಸೆಯಂತೆ, ಮನ್ಸೂರ್ನ ತಾಯಿಯು ಪೊಲೀಸ್ ಠಾಣೆಗೆ ಬಂಗಾರದ ಸರವನ್ನು ಹಿಂದಿರುಗಿಸಿದ್ದಾಳೆ.

ಮನೆಗಳ್ಳತನ

ಮನೆ ಕಳ್ಳತನ ಪ್ರಕರಣಗಳಲ್ಲಿ ಸಿಲುಕಿರುವ ಆರೋಪಿ ರೂಪನಗುಡಿ ರಸ್ತೆಯ ವರಬಪ್ಪ ಗುಡಿ ಸಮೀಪದ ನಿವಾಸಿ ಮೈಲಾರಿ @ ಮಾಯಾ ಬಾಯ್ (22)ಯನ್ನು ಬಂಧಿಸಿರುವ ಪೊಲೀಸರು ಆತನಿಂದ 17.74 ಗ್ರಾಂ ಬಂಗಾರದ ಆಭರಣ, ರೂ 26,000- ಮೌಲ್ಯದ 10 ತೊಲೆ ಬೆಳ್ಳಿ ಕಾಲ್ ಚೈನ ಹಾಗೂ ರೂ 1500 ಮೌಲ್ಯದ ಒಂದು ಮೊಬೈಲ್ ಅನ್ನು ಜಪ್ತಿ ಮಾಡಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪಿ. ಮನೋಹರನಾಯ್ಡು ಅವರು ಬುಡಾ ಕಾಂಪ್ಲೆಕ್ಸ್ ನ ಸಾರ್ವಜನಿಕ ಶೌಚಾಲಯದ ಹತ್ತಿರವಿರುವ ಕಟ್ಟೆ ಮೇಲೆ ಮಲಗಿದ್ದಾಗ ಅವರ ಹೋಂಡಾ ಆಕ್ಟೀವಾ ಮೋಟಾರ್ ಸೈಕಲ್, ಒಪ್ಪೋ ಎಫ್-31 5ಜಿ ಮೊಬೈಲ್ ಫೋನ್ ಅನ್ನು ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಆರೋಪಿಗಳಾದ ಕೌಲ್ಬಜಾರ್ ನಿವಾಸಿ ಗಾದಿಲಿಂಗಪ್ಪ @ ಡಾಲಿ 28 ವರ್ಷ, ಬಂಡಿಹಟ್ಟಿಯ ಬಿ. ವಿಜಯಕುಮಾರ್ @ ಜಿಗಳೆ (21), ಕೊಳಗಲ್ಲು ಗ್ರಾಮದ ಸುರೇಶ @ ಆರ್.ಎಕ್ಸ್. ಸೂರಿ (24)ಯನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತರಿಂದ ದ್ವಿಚಕ್ರ ವಾಹನ, ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande