
ಬೆಂಗಳೂರು, 24 ಆಗಸ್ಟ್ (ಹಿ.ಸ.):
ಆ್ಯಂಕರ್:
ನಗರದ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮೆಡಿಕಲ್ ಶಾಪ್ ಮಾಲೀಕ ಸುಹೇಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಡೆಪಾಳ್ಯ ರೌಡಿಶೀಟರ್ ಆದಿಲ್ ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.
ಕಳೆದ ಜನವರಿಯಲ್ಲಿ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಬ್ಬೀರ್ ಎಂಬಾತನ ಕೊಲೆ ನಡೆದಿತ್ತು. ಈ ಹತ್ಯೆಗೆ ಮೆಡಿಕಲ್ ಶಾಪ್ ಮಾಲೀಕ ಸುಹೇಲ್ ಹಣಕಾಸಿನ ನೆರವು ನೀಡಿದ್ದಲ್ಲದೆ, ಶಬ್ಬೀರ್ ಕೊಲೆಯಲ್ಲಿ ಸುಹೇಲ್ ಸಹೋದರರು ಕೂಡ ನೇರವಾಗಿ ಭಾಗಿಯಾಗಿದ್ದರು ಎನ್ನಲಾಗಿದೆ.ಈ ಹತ್ಯೆಯ ಹಗೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಶಬ್ಬೀರ್ನ ಆಪ್ತ ಸ್ನೇಹಿತ ಹಾಗೂ ರೌಡಿಶೀಟರ್ ಆದಿಲ್, ತನ್ನ ಸ್ನೇಹಿತನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿದ್ದನು.
ಸುಹೇಲ್ ಹಾಗೂ ಆತನ ಸ್ನೇಹಿತರ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಆದಿಲ್ನನ್ನು ಮುಗಿಸುವುದಾಗಿ ಸುಹೇಲ್ ತನ್ನ ಸ್ನೇಹಿತರ ಬಳಿ ಎಚ್ಚರಿಕೆ ನೀಡಿದ್ದನು. ಅವನು ನಮ್ಮನ್ನು ಹೊಡೆಯುವುದಕ್ಕೂ ಮುಂಚೆ ನಾನೇ ಅವನನ್ನು ಮುಗಿಸುತ್ತೇನೆ ಎಂದು ಸುಹೇಲ್ ಹೇಳಿಕೊಂಡಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಆದರೆ, ಆತ ಅಷ್ಟರೊಳಗೆ ರೌಡಿಶೀಟರ್ ಆದಿಲ್ ಮತ್ತುಗ್ಯಾಂಗ್ನಿಂದ ಬರ್ಬರ ಹತ್ಯೆಗೀಡಾಗಿದ್ದಾನೆ.
ಕೊಲೆ ಎಸಗಿದ ಬಳಿಕ ತಲೆಮರೆಸಿಕೊಳ್ಳಲು ಆರೋಪಿಗಳು ಮುಂಬೈಗೆ ಪರಾರಿಯಾಗಲು ಮಾಸ್ಟರ್ ಪ್ಲಾನ್ (ಸ್ಕೇಚ್) ಹಾಕಿದ್ದರು. ಆದರೆ, ಅದಕ್ಕೂ ಮುನ್ನವೇ ಚುರುಕಿನ ಕಾರ್ಯಾಚರಣೆ ನಡೆಸಿದ ಮಡಿವಾಳ ಪೊಲೀಸರು ಆರೂ ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಕುರಿತು ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R