
ಬೆಂಗಳೂರು, 24 ಆಗಸ್ಟ್ (ಹಿ.ಸ.)
ಆ್ಯಂಕರ್:
ಅಮೆರಿಕದಲ್ಲಿ ಜರುಗಲಿರುವ 'ಅಕ್ಕ' ಸಿನಿಗನ್ನಡ ಚಲನಚಿತ್ರೋತ್ಸವ 2026ಕ್ಕೆ 'ಅಮರ ಪ್ರೇಮಿ ಅರುಣ್', 'ಏಳುಮಲೆ', 'ನಡುಬೆಟ್ಟು ಅಪ್ಪಣ್ಣ' ಸೇರಿದಂತೆ ಒಟ್ಟು 10 ಚಲನಚಿತ್ರಗಳ ಅಧಿಕೃತ ಆಯ್ಕೆಯನ್ನು ಸಮಿತಿಯು ಘೋಷಿಸಿದೆ.
ಅಕ್ಕ ವಿಶ್ವ ಕನ್ನಡ ಸಮ್ಮೇಳನದ ರಜತ ಮಹೋತ್ಸವದ ಅಂಗವಾಗಿ ಈ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದ್ದು, ಈ ಬಾರಿಯ ಉತ್ಸವದಲ್ಲಿ ಮೂರು ಅತ್ಯುನ್ನತ ಚಿತ್ರಗಳಿಗೆ ನಗದು ಬಹುಮಾನ ಹಾಗೂ ಕನ್ನಡ ಚಿತ್ರರಂಗದ ದಿಗ್ಗಜರ ಸ್ಮರಣಾರ್ಥ ಏಳು ವಿಶೇಷ ಪ್ರಶಸ್ತಿಗಳನ್ನು ಪರಿಚಯಿಸಲು ನಿರ್ಧರಿಸಲಾಗಿದೆ.
ಆಯ್ಕೆಯಾದ ಎಲ್ಲ 10 ಚಲನಚಿತ್ರಗಳು ಸೆಪ್ಟೆಂಬರ್ 4ರಿಂದ 6ರವರೆಗೆ ಅಮೆರಿಕದ ಫಿಲಿಡೆಲ್ಫಿಯಾದಲ್ಲಿ ಪ್ರದರ್ಶನಗೊಳ್ಳಲಿವೆ.ಸ್ಪರ್ಧೆಯ ವಿಜೇತರನ್ನು ಸೆಪ್ಟೆಂಬರ್ 27ರಂದು ಬೆಂಗಳೂರಿನಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಪ್ರಕಟಿಸಲಾಗುವುದು.ಅತ್ಯುತ್ತಮ ಮೂರು ಚಿತ್ರಗಳಿಗೆ ನಗದು ಬಹುಮಾನ ಹಾಗೂ ಇತರೆ ವಿಭಾಗಗಳ ವಿಜೇತರಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು.
ಆಯ್ಕೆಯಾದ 10 ಚಲನಚಿತ್ರಗಳು:ಅಮರ ಪ್ರೇಮಿ ಅರುಣ್ಏಳುಮಲೆನಡುಬೆಟ್ಟು ಅಪ್ಪಣ್ಣನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರುಪಿಡಾಯಿಬಿಳಿ ಚುಕ್ಕಿ ಹಳ್ಳಿ ಹಕ್ಕಿಮಹಿಮಾಶ್ರೀ ಜಗನ್ನಾಥನ ದಾಸರು - ಭಾಗ 2ಕ್ಷಮೆ ಇರಲಿ ತಂದೆ4 ಬೈ 4
ಚಿತ್ರರಂಗದ ದಿಗ್ಗಜರ ಹೆಸರಿನಲ್ಲಿ ಏಳು ವಿಶೇಷ ಪ್ರಶಸ್ತಿಗಳು:ಅತ್ಯುತ್ತಮ ನಟ: ಡಾ. ವಿಷ್ಣುವರ್ಧನ್ ಪ್ರಶಸ್ತಿಅತ್ಯುತ್ತಮ ನಟಿ: ಬಿ. ಸರೋಜಾದೇವಿ ಪ್ರಶಸ್ತಿಅತ್ಯುತ್ತಮ ಖಳನಟ: ತೂಗುದೀಪ ಶ್ರೀನಿವಾಸ್ ಪ್ರಶಸ್ತಿಅತ್ಯುತ್ತಮ ನಿರ್ದೇಶಕ: ಶಂಕರ ನಾಗ್ ಪ್ರಶಸ್ತಿಅತ್ಯುತ್ತಮ ಸಂಗೀತ ಸಂಯೋಜಕ: ರಾಜನ್–ನಾಗೇಂದ್ರ ಪ್ರಶಸ್ತಿಅತ್ಯುತ್ತಮ ಗಾಯಕ: ಬಿ.ಪಿ. ಶ್ರೀನಿವಾಸ್ ಪ್ರಶಸ್ತಿಅತ್ಯುತ್ತಮ ಗಾಯಕಿ: ಎಸ್. ಜಾನಕಿ ಪ್ರಶಸ್ತಿ
ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡ ಸಿನಿಮಾಗಳಿಗೆ ಪ್ರದರ್ಶನದ ಅವಕಾಶ ಕಲ್ಪಿಸುತ್ತಿರುವ ಈ ಮಹತ್ವದ ಉತ್ಸವಕ್ಕೆ ಆಯ್ಕೆಯಾದ ಎಲ್ಲಾ ಚಿತ್ರತಂಡಗಳಿಗೆ ಅಕ್ಕ ಸಿನಿಗನ್ನಡ ಚಲನಚಿತ್ರೋತ್ಸವ ಸಮಿತಿಯು ಅಭಿನಂದನೆ ಹಾಗೂ ಶುಭ ಹಾರೈಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R