
ನವದೆಹಲಿ, 24 ಆಗಸ್ಟ್ (ಹಿ.ಸ.):
ಆ್ಯಂಕರ್:ಮಾಜಿ ಕೇಂದ್ರ ಹಣಕಾಸು ಸಚಿವ ಹಾಗೂ ಖ್ಯಾತ ವಕೀಲ ಅರುಣ್ ಜೇಟ್ಲಿ ಅವರ ಪುಣ್ಯತಿಥಿ ಅಂಗವಾಗಿ ಬಿಜೆಪಿ ಕೇಂದ್ರ ಕಚೇರಿ ಉಸ್ತುವಾರಿ ತರುಣ್ ಚುಗ್ ಶ್ರದ್ಧಾಂಜಲಿ ಸಲ್ಲಿಸಿದರು.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಚುಗ್, ದೇಶದ ಖ್ಯಾತ ರಾಜಕಾರಣಿ, ದಕ್ಷ ಕಾರ್ಯತಂತ್ರಗಾರ, ಪ್ರಖರ ವಾಗ್ಮಿ, ಪ್ರಸಿದ್ಧ ವಕೀಲ ಹಾಗೂ ಮಾಜಿ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರಿಗೆ ಪುಣ್ಯತಿಥಿಯಂದು ಗೌರವಪೂರ್ವಕ ನಮನ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ದೇಶದ ಮೇಲಿನ ಜೇಟ್ಲಿ ಅವರ ಬದ್ಧತೆ, ಆದರ್ಶಗಳು ಹಾಗೂ ಚಿಂತನೆಗಳು ಸದಾ ಸ್ಫೂರ್ತಿ ನೀಡಲಿವೆ. ಅವರ ಅವಿಸ್ಮರಣೀಯ ನೆನಪುಗಳು ಸದಾ ಜನರೊಂದಿಗೆ ಉಳಿಯಲಿವೆ ಎಂದು ಚುಗ್ ಹೇಳಿದ್ದಾರೆ.
ಅರುಣ್ ಜೇಟ್ಲಿ ಭಾರತೀಯ ರಾಜಕೀಯದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು. ಕೇಂದ್ರ ಹಣಕಾಸು ಸಚಿವ ಸೇರಿದಂತೆ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಅವರು, ಪ್ರಭಾವಿ ನಾಯಕ, ವಿದ್ವಾಂಸ ಹಾಗೂ ಕಾನೂನು ಕ್ಷೇತ್ರದ ಗಣ್ಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಅವರು 2019ರ ಆಗಸ್ಟ್ 24ರಂದು ನಿಧನರಾಗಿದ್ದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.