ವಿದೇಶದಲ್ಲಿರುವ ಮತದಾರರಿಗೆ ಮತದಾನದ ಹಕ್ಕು: ಕಾನೂನು ರೂಪಿಸಲು ನೇಪಾಳ ಗೃಹ ಸಚಿವರ ಒತ್ತಾಯ
ಕಠ್ಮಂಡು, 22 ಆಗಸ್ಟ್ (ಹಿ.ಸ.): ಆ್ಯಂಕರ್:ವಿದೇಶದಲ್ಲಿ ವಾಸಿಸುತ್ತಿರುವ ಹಾಗೂ ತಮ್ಮ ಕ್ಷೇತ್ರದಿಂದ ಹೊರಗಿರುವ ನೇಪಾಳಿ ಮತದಾರರಿಗೆ ಮತದಾನದ ಹಕ್ಕು ಕಲ್ಪಿಸಲು ಅಗತ್ಯ ಕಾನೂನು ನಿಬಂಧನೆಗಳನ್ನು ಪ್ರಸ್ತಾವಿತ ಚುನಾವಣಾ ನಿರ್ವಹಣಾ ಮಸೂದೆಯಲ್ಲಿ ಸೇರಿಸುವಂತೆ ನೇಪಾಳದ ಗೃಹ ಸಚಿವ ಸುಧನ್ ಗುರುಂಗ್ ಒತ್ತಾಯಿಸ
नेपाल के गृहमंत्री सुदन गुरूंग


ಕಠ್ಮಂಡು, 22 ಆಗಸ್ಟ್ (ಹಿ.ಸ.):

ಆ್ಯಂಕರ್:ವಿದೇಶದಲ್ಲಿ ವಾಸಿಸುತ್ತಿರುವ ಹಾಗೂ ತಮ್ಮ ಕ್ಷೇತ್ರದಿಂದ ಹೊರಗಿರುವ ನೇಪಾಳಿ ಮತದಾರರಿಗೆ ಮತದಾನದ ಹಕ್ಕು ಕಲ್ಪಿಸಲು ಅಗತ್ಯ ಕಾನೂನು ನಿಬಂಧನೆಗಳನ್ನು ಪ್ರಸ್ತಾವಿತ ಚುನಾವಣಾ ನಿರ್ವಹಣಾ ಮಸೂದೆಯಲ್ಲಿ ಸೇರಿಸುವಂತೆ ನೇಪಾಳದ ಗೃಹ ಸಚಿವ ಸುಧನ್ ಗುರುಂಗ್ ಒತ್ತಾಯಿಸಿದ್ದಾರೆ.

ಚುನಾವಣಾ ಆಯೋಗದೊಂದಿಗೆ ನಡೆದ ಚುನಾವಣಾ ನಿರ್ವಹಣಾ ಮಸೂದೆ ಕರಡು ಹಾಗೂ ಚುನಾವಣಾ ಸುಧಾರಣೆ ಕುರಿತ ಸಭೆಯಲ್ಲಿ ಅವರು ಈ ಮನವಿ ಮಾಡಿದರು. ಮತದಾನ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಅಗತ್ಯ ತಾಂತ್ರಿಕ ಸಿದ್ಧತೆಗಳನ್ನು ಆರಂಭಿಸುವಂತೆ ಆಯೋಗಕ್ಕೆ ಸೂಚಿಸಿದರು.

ವಿದೇಶದಲ್ಲಿರುವ ನೇಪಾಳಿ ನಾಗರಿಕರಿಗೆ ಮತದಾನದ ಹಕ್ಕು ಖಚಿತಪಡಿಸಲು ಸರ್ಕಾರ ಬದ್ಧವಾಗಿದೆ. ಹಿಂದಿನ ಚುನಾವಣೆಯಲ್ಲಿಯೇ ಈ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನಿಸಲಾಗಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಹಿಂದಿನ ಚುನಾವಣೆಯಲ್ಲಿ ಎದುರಾದ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಗುರುಂಗ್ ಸೂಚಿಸಿದರು.

ಮುಖ್ಯ ಚುನಾವಣಾ ಆಯುಕ್ತ ಮಾನಬಹಾದುರ್ ಕಾರ್ಕಿ ಮಾತನಾಡಿ, ವಿದೇಶದಲ್ಲಿರುವ ಮತದಾರರಿಗೆ ಮತದಾನದ ಅವಕಾಶ ಕಲ್ಪಿಸಲು ಕಾನೂನು, ಸಾಂಸ್ಥಿಕ ಹಾಗೂ ತಾಂತ್ರಿಕ ಸಿದ್ಧತೆಗಳನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ತಿಳಿಸಿದರು.ಇದಕ್ಕಾಗಿ ಅಗತ್ಯ ಸಂಪನ್ಮೂಲ ಹಾಗೂ ಸಿಬ್ಬಂದಿಯನ್ನು ಸರ್ಕಾರ ಒದಗಿಸುವ ನಿರೀಕ್ಷೆಯಿದೆ ಎಂದರು.

ಚುನಾವಣೆಯ ಪಾರದರ್ಶಕತೆ, ಸ್ವಾತಂತ್ರ್ಯ ಮತ್ತು ನಿಷ್ಪಕ್ಷಪಾತತೆಯನ್ನು ಮತ್ತಷ್ಟು ಜೊತೆಗೆ ಮತದಾರರ ಆಶಯಕ್ಕೆ ಅನುಗುಣವಾಗಿ ಚುನಾವಣಾ ಪ್ರಕ್ರಿಯೆ ಹಾಗೂ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಆಯೋಗ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಾರ್ಕಿ ಹೇಳಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande