
ನವದೆಹಲಿ, 17 ಆಗಸ್ಟ್ (ಹಿ.ಸ.):
ಆ್ಯಂಕರ್:
ಸಾಮೂಹಿಕ ಸಂಕಲ್ಪ ಮತ್ತು ಏಕತೆಯ ಶಕ್ತಿಯಿಂದಲೇ ದೇಶ ಮುನ್ನಡೆಯಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸೋಮವಾರ ಬೆಳಗ್ಗೆ ಎಕ್ಸ್‌ನಲ್ಲಿ ಸುಭಾಷಿತವೊಂದನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, “ಸಾಮೂಹಿಕ ಸಂಕಲ್ಪ ಮತ್ತು ಏಕತೆಯ ಶಕ್ತಿಯಿಂದಲೇ ದೇಶ ಮುಂದೆ ಸಾಗುತ್ತದೆ. ಇದೇ ಭಾವನೆ ಭಾರತದ ಪ್ರಗತಿ ಮತ್ತು ಸಮೃದ್ಧಿಗೆ ಬಲವಾದ ಅಡಿಪಾಯ” ಎಂದು ಹೇಳಿದ್ದಾರೆ.
ಋಗ್ವೇದದ 10ನೇ ಮಂಡಲ, 191ನೇ ಸೂಕ್ತದ ನಾಲ್ಕನೇ ಮಂತ್ರದಿಂದ ಈ ಶ್ಲೋಕವನ್ನು ಉಲ್ಲೇಖಿಸಲಾಗಿದೆ.
“ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ।
ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ॥”
ಎಲ್ಲರ ಸಂಕಲ್ಪವೂ ಒಂದಾಗಿರಬೇಕು, ಮನಸ್ಸುಗಳು ಏಕತೆಯ ಭಾವನೆಯಿಂದ ಬೆಸೆದುಕೊಂಡಿರಬೇಕು. ಪರಸ್ಪರ ಸಹಕಾರ ಮತ್ತು ಸಮಾನತೆಯೊಂದಿಗೆ ಸಮಾಜದ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸಬೇಕು ಎಂಬುದು ಇದರ ಅರ್ಥ ಎಂದು ಪ್ರಧಾನಿ ವಿವರಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.