ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ಬೆಲೆ ಅಲ್ಪ ಇಳಿಕೆ
ನವದೆಹಲಿ, 10 ಆಗಸ್ಟ್ (ಹಿ.ಸ.): ಆ್ಯಂಕರ್:ದೇಶದ ಚಿನಿವಾರ ಮಾರುಕಟ್ಟೆಯಲ್ಲಿ ಸೋಮವಾರ ಆರಂಭಿಕ ವಹಿವಾಟಿನ ವೇಳೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ₹1,51,630ರಿಂದ ₹1,52,540ರವರೆಗೆ ಹಾಗೂ 22 ಕ್ಯಾರೆಟ್ ಚಿನ್ನ ₹1,38,9
प्रतीकात्मक


ನವದೆಹಲಿ, 10 ಆಗಸ್ಟ್ (ಹಿ.ಸ.):

ಆ್ಯಂಕರ್:ದೇಶದ ಚಿನಿವಾರ ಮಾರುಕಟ್ಟೆಯಲ್ಲಿ ಸೋಮವಾರ ಆರಂಭಿಕ ವಹಿವಾಟಿನ ವೇಳೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ₹1,51,630ರಿಂದ ₹1,52,540ರವರೆಗೆ ಹಾಗೂ 22 ಕ್ಯಾರೆಟ್ ಚಿನ್ನ ₹1,38,990ರಿಂದ ₹1,39,840ರವರೆಗೆ ಪ್ರತಿ 10 ಗ್ರಾಂಗೆ ವಹಿವಾಟಾಗಿದೆ.

ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನ ₹1,52,540 ಹಾಗೂ 22 ಕ್ಯಾರೆಟ್ ಚಿನ್ನ ₹1,39,840ಕ್ಕೆ ಮಾರಾಟವಾಗುತ್ತಿದೆ. ಮುಂಬೈ ಮತ್ತು ಕೋಲ್ಕತ್ತಾದಲ್ಲಿ 24 ಕ್ಯಾರೆಟ್ ಚಿನ್ನ ₹1,52,340 ಹಾಗೂ 22 ಕ್ಯಾರೆಟ್ ಚಿನ್ನ ₹1,39,640ರಷ್ಟಿದೆ.

ಅಹಮದಾಬಾದ್, ಭೋಪಾಲ್ ಮತ್ತು ಪಾಟ್ನಾದಲ್ಲಿ 24 ಕ್ಯಾರೆಟ್ ಚಿನ್ನ ₹1,52,440 ಹಾಗೂ 22 ಕ್ಯಾರೆಟ್ ಚಿನ್ನ ₹1,39,740ರಷ್ಟಿದೆ. ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನ ₹1,51,630 ಮತ್ತು 22 ಕ್ಯಾರೆಟ್ ಚಿನ್ನ ₹1,38,990ಕ್ಕೆ ವಹಿವಾಟಾಗಿದೆ. ಜೈಪುರ ಹಾಗೂ ಲಖನೌನಲ್ಲಿ ಕ್ರಮವಾಗಿ ₹1,52,540 ಮತ್ತು ₹1,39,840ರ ದರ ದಾಖಲಾಗಿದೆ.

ಕರ್ನಾಟಕ, ತೆಲಂಗಾಣ ಮತ್ತು ಒಡಿಶಾದಲ್ಲಿಯೂ ಚಿನ್ನದ ದರದಲ್ಲಿ ಸಾಂಕೇತಿಕ ಇಳಿಕೆ ಕಂಡುಬಂದಿದೆ. ಬೆಂಗಳೂರು, ಹೈದರಾಬಾದ್ ಹಾಗೂ ಭುವನೇಶ್ವರದಲ್ಲಿ 24 ಕ್ಯಾರೆಟ್ ಚಿನ್ನ ₹1,52,340 ಹಾಗೂ 22 ಕ್ಯಾರೆಟ್ ಚಿನ್ನ ₹1,39,640ರಷ್ಟಿದೆ.

ಇದೇ ವೇಳೆ ಬೆಳ್ಳಿ ಬೆಲೆಯಲ್ಲಿಯೂ ತುಸು ಇಳಿಕೆಯಾಗಿದ್ದು, ದೆಹಲಿ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹2,44,900ರಂತೆ ವಹಿವಾಟು ನಡೆಯುತ್ತಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande