
ನವದೆಹಲಿ, 08 ಜುಲೈ (ಹಿ.ಸ.):
ಆ್ಯಂಕರ್:ಪಶ್ಚಿಮ ಏಷ್ಯಾದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಾಗಿರುವುದು ಹಾಗೂ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವ ಪರಿಣಾಮ ದೇಶೀಯ ಷೇರು ಮಾರುಕಟ್ಟೆ ಬುಧವಾರ ಆರಂಭಿಕ ವಹಿವಾಟಿನಲ್ಲಿ ಒತ್ತಡಕ್ಕೆ ಒಳಗಾಯಿತು. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ಆರಂಭದಲ್ಲೇ ಕುಸಿತದೊಂದಿಗೆ ವಹಿವಾಟು ಆರಂಭಿಸಿವೆ.
ಬೆಳಿಗ್ಗೆ 10 ಗಂಟೆಯ ವೇಳೆಗೆ ಸೆನ್ಸೆಕ್ಸ್ 479 ಅಂಕಗಳಷ್ಟು (0.61%) ಇಳಿದು 77,701.57 ಅಂಕಗಳಿಗೆ ತಲುಪಿದರೆ, ನಿಫ್ಟಿ 150.90 ಅಂಕಗಳಷ್ಟು (0.62%) ಕುಸಿದು 24,247.80 ಅಂಕಗಳಲ್ಲಿ ವಹಿವಾಟು ನಡೆಸಿತು.
ವಹಿವಾಟಿನ ವೇಳೆ ವಿಪ್ರೋ, ಡಾ. ರೆಡ್ಡೀಸ್ ಲ್ಯಾಬೊರೇಟರೀಸ್, ಸನ್ ಫಾರ್ಮಾಸ್ಯುಟಿಕಲ್ಸ್, ಸಿಪ್ಲಾ ಹಾಗೂ ಕೋಲ್ ಇಂಡಿಯಾ ಷೇರುಗಳು ಏರಿಕೆ ಕಂಡರೆ, ಜಿಯೋ ಫೈನಾನ್ಷಿಯಲ್, ಶ್ರೀರಾಮ್ ಫೈನಾನ್ಸ್, ಏಷಿಯನ್ ಪೇಂಟ್ಸ್, ಇಂಟರ್ಗ್ಲೋಬ್ ಏವಿಯೇಷನ್ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಹೆಚ್ಚಿನ ಕುಸಿತ ದಾಖಲಿಸಿದವು.
ಒಟ್ಟು 2,671 ಷೇರುಗಳಲ್ಲಿ ವಹಿವಾಟು ನಡೆದಿದ್ದು, 924 ಷೇರುಗಳು ಏರಿಕೆ ಕಂಡರೆ 1,747 ಷೇರುಗಳು ನಷ್ಟದಲ್ಲಿದ್ದವು. ಸೆನ್ಸೆಕ್ಸ್ನ 30 ಷೇರುಗಳಲ್ಲಿ 7 ಏರಿಕೆ ಹಾಗೂ 23 ಇಳಿಕೆಯಲ್ಲಿ ವಹಿವಾಟು ನಡೆಸಿದರೆ, ನಿಫ್ಟಿಯ 50 ಷೇರುಗಳಲ್ಲಿ 16 ಏರಿಕೆ ಮತ್ತು 34 ಷೇರುಗಳು ಕುಸಿತ ಕಂಡಿವೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.