ಜಾಗತಿಕ ಮಾರುಕಟ್ಟೆಯಿಂದ ಮಿಶ್ರ ಸೂಚನೆ
ನವದೆಹಲಿ, 07 ಜುಲೈ (ಹಿ.ಸ.): ಆ್ಯಂಕರ್:ಜಾಗತಿಕ ಷೇರು ಮಾರುಕಟ್ಟೆಯಿಂದ ಮಿಶ್ರ ಸೂಚನೆಗಳು ದೊರೆತಿವೆ. ಅಮೆರಿಕದ ಷೇರುಪೇಟೆಗಳು ಕಳೆದ ವಹಿವಾಟಿನಲ್ಲಿ ಏರಿಕೆಯಿಂದ ಮುಕ್ತಾಯಗೊಂಡಿದ್ದರೆ, ಯುರೋಪಿನ ಮಾರುಕಟ್ಟೆಗಳು ಮಿಶ್ರ ಫಲಿತಾಂಶ ದಾಖಲಿಸಿವೆ. ಆದರೆ ಏಷ್ಯಾದ ಬಹುತೇಕ ಷೇರುಪೇಟೆಗಳಲ್ಲಿ ಇಂದು ಮಾರಾಟದ ಒತ್
Global market


ನವದೆಹಲಿ, 07 ಜುಲೈ (ಹಿ.ಸ.):

ಆ್ಯಂಕರ್:ಜಾಗತಿಕ ಷೇರು ಮಾರುಕಟ್ಟೆಯಿಂದ ಮಿಶ್ರ ಸೂಚನೆಗಳು ದೊರೆತಿವೆ. ಅಮೆರಿಕದ ಷೇರುಪೇಟೆಗಳು ಕಳೆದ ವಹಿವಾಟಿನಲ್ಲಿ ಏರಿಕೆಯಿಂದ ಮುಕ್ತಾಯಗೊಂಡಿದ್ದರೆ, ಯುರೋಪಿನ ಮಾರುಕಟ್ಟೆಗಳು ಮಿಶ್ರ ಫಲಿತಾಂಶ ದಾಖಲಿಸಿವೆ. ಆದರೆ ಏಷ್ಯಾದ ಬಹುತೇಕ ಷೇರುಪೇಟೆಗಳಲ್ಲಿ ಇಂದು ಮಾರಾಟದ ಒತ್ತಡ ಕಂಡುಬಂದಿದೆ.

ಅಮೆರಿಕದ ಡೌ ಜೋನ್ಸ್, ಎಸ್‌ ಅಂಡ್‌ ಪಿ 500 ಹಾಗೂ ನ್ಯಾಸ್ಡಾಕ್ ಸೂಚ್ಯಂಕಗಳು ಏರಿಕೆಯಿಂದ ವಹಿವಾಟು ಅಂತ್ಯಗೊಳಿಸಿವೆ. ಡೌ ಜೋನ್ಸ್ ಫ್ಯೂಚರ್ಸ್‌ ಕೂಡ ಸ್ವಲ್ಪ ಏರಿಕೆಯಲ್ಲಿ ವಹಿವಾಟು ನಡೆಸುತ್ತಿದೆ.

ಯುರೋಪಿನ ಮಾರುಕಟ್ಟೆಗಳಲ್ಲಿ ಎಫ್‌ಟಿಎಸ್‌ಇ ಮತ್ತು ಸಿಎಸಿ ಸೂಚ್ಯಂಕಗಳು ಇಳಿಕೆಯಾಗಿದ್ದರೆ, ಡಿಎಎಕ್ಸ್ ಸೂಚ್ಯಂಕ ಮಾತ್ರ ಏರಿಕೆಯೊಂದಿಗೆ ಮುಕ್ತಾಯಗೊಂಡಿದೆ.

ಏಷ್ಯಾದ ಮಾರುಕಟ್ಟೆಗಳಲ್ಲಿ ಒಂಬತ್ತು ಪ್ರಮುಖ ಸೂಚ್ಯಂಕಗಳಲ್ಲಿ ಏಳು ಇಳಿಕೆಯಾಗಿದ್ದು, ಎರಡು ಮಾತ್ರ ಏರಿಕೆಯಲ್ಲಿ ವಹಿವಾಟು ನಡೆಸುತ್ತಿವೆ. ಹ್ಯಾಂಗ್‌ಸೆಂಗ್, ನಿಕ್ಕೈ, ಶಾಂಘೈ, ತೈವಾನ್ ಹಾಗೂ ಸೆಟ್‌ ಕಾಂಪೊಸಿಟ್ ಸೂಚ್ಯಂಕಗಳು ನಷ್ಟದಲ್ಲಿದ್ದು, ಸ್ಟ್ರೇಟ್ಸ್‌ ಟೈಮ್ಸ್‌ ಮತ್ತು ಜಕಾರ್ತಾ ಕಾಂಪೊಸಿಟ್‌ ಸೂಚ್ಯಂಕಗಳು ಲಾಭ ದಾಖಲಿಸಿವೆ. ಗಿಫ್ಟ್ ನಿಫ್ಟಿ ಕೂಡ ಅಲ್ಪ ಇಳಿಕೆಯಲ್ಲಿ ವಹಿವಾಟು ನಡೆಸುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande