
ನವದೆಹಲಿ, 05 ಜುಲೈ (ಹಿ.ಸ.):
ಆ್ಯಂಕರ್:
ಪಾಕಿಸ್ತಾನ ಕ್ರಿಕೆಟ್ ಮಂಡಳಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗಳಿಗಾಗಿ ಪಾಕಿಸ್ತಾನ ತಂಡವನ್ನು ಪ್ರಕಟಿಸಿದ್ದು, ಹಿರಿಯ ಬ್ಯಾಟರ್ ಬಾಬರ್ ಅಜಂ ಅವರಿಗೆ ಮತ್ತೆ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿದೆ. ಈ ಮೂಲಕ ಅವರು ಶಾನ್ ಮಸೂದ್ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಪಾಕಿಸ್ತಾನ ತಂಡವು ಜುಲೈ 25ರಿಂದ ಆಗಸ್ಟ್ 6ರವರೆಗೆ ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದ್ದು, ನಂತರ ಆಗಸ್ಟ್ 19ರಿಂದ ಸೆಪ್ಟೆಂಬರ್ 13ರವರೆಗೆ ಇಂಗ್ಲೆಂಡ್ ಪ್ರವಾಸದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯಲಿದೆ.
ಈ ಬಾರಿ ತಂಡದಲ್ಲಿ ನಾಲ್ವರು ಹೊಸ ಆಟಗಾರರಿಗೆ ಅವಕಾಶ ನೀಡಲಾಗಿದೆ. ಎಡಗೈ ಸ್ಪಿನ್ನರ್ ಅಲಿ ಉಸ್ಮಾನ್, ಬ್ಯಾಟರ್ ಮೊಹಮ್ಮದ್ ಅವೈಸ್ ಜಫರ್, ವೇಗದ ಬೌಲರ್ ಉಬೈದ್ ಶಾ ಹಾಗೂ ವಿಕೆಟ್ ಕೀಪರ್-ಬ್ಯಾಟರ್ ಮೊಹಮ್ಮದ್ ಘಾಜಿ ಘೋರಿ ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಇಂಗ್ಲೆಂಡ್ ಪ್ರವಾಸದ ತಂಡದಲ್ಲಿ ಸೌದ್ ಶಕೀಲ್ ಅವರಿಗೂ ಸ್ಥಾನ ನೀಡಲಾಗಿದ್ದು, ಅವರ ಆಯ್ಕೆ ದೈಹಿಕ ಕ್ಷಮತೆ ಪರೀಕ್ಷೆಯ ಫಲಿತಾಂಶದ ಮೇಲೆ ಅವಲಂಬಿತವಾಗಿರಲಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಪಾಕಿಸ್ತಾನ ತಂಡ
ಬಾಬರ್ ಅಜಂ (ನಾಯಕ), ಆಮಿರ್ ಜಮಾಲ್, ಅಬ್ದುಲ್ಲಾ ಫಝಲ್, ಅಲಿ ಉಸ್ಮಾನ್, ಅಜಾನ್ ಅವೈಸ್, ಇಮಾಮ್ ಉಲ್ ಹಕ್, ಖುರ್ರಂ ಶಹಜಾದ್, ಮೊಹಮ್ಮದ್ ಅಬ್ಬಾಸ್, ಮೊಹಮ್ಮದ್ ಅಲಿ, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಅವೈಸ್ ಜಫರ್, ಮೊಹಮ್ಮದ್ ಘಾಜಿ ಘೋರಿ, ಸಾಜಿದ್ ಖಾನ್, ಸಲ್ಮಾನ್ ಅಲಿ ಆಗಾ, ಶಾನ್ ಮಸೂದ್ ಹಾಗೂ ಉಬೈದ್ ಶಾ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಪಾಕಿಸ್ತಾನ ತಂಡ
ಬಾಬರ್ ಅಜಂ (ನಾಯಕ), ಆಮಿರ್ ಜಮಾಲ್, ಅಬ್ದುಲ್ಲಾ ಫಝಲ್, ಅಲಿ ಉಸ್ಮಾನ್, ಅಜಾನ್ ಅವೈಸ್, ಇಮಾಮ್ ಉಲ್ ಹಕ್, ಖುರ್ರಂ ಶಹಜಾದ್, ಮೊಹಮ್ಮದ್ ಅಬ್ಬಾಸ್, ಮೊಹಮ್ಮದ್ ಅಲಿ, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಅವೈಸ್ ಜಫರ್, ಮೊಹಮ್ಮದ್ ಘಾಜಿ ಘೋರಿ, ಸಾಜಿದ್ ಖಾನ್, ಸಲ್ಮಾನ್ ಅಲಿ ಆಗಾ, ಸೌದ್ ಶಕೀಲ್ (ದೈಹಿಕ ಕ್ಷಮತೆ ಆಧಾರಿತ), ಶಾನ್ ಮಸೂದ್ ಹಾಗೂ ಉಬೈದ್ ಶಾ.
ಸರಣಿ ವೇಳಾಪಟ್ಟಿ
ವೆಸ್ಟ್ ಇಂಡೀಸ್ ವಿರುದ್ಧ
ಮೊದಲ ಟೆಸ್ಟ್: ಜುಲೈ 25ರಿಂದ 29ರವರೆಗೆ – ತರೌಬಾ
ಎರಡನೇ ಟೆಸ್ಟ್: ಆಗಸ್ಟ್ 2ರಿಂದ 6ರವರೆಗೆ – ಪೋರ್ಟ್ ಆಫ್ ಸ್ಪೇನ್
ಇಂಗ್ಲೆಂಡ್ ವಿರುದ್ಧ
ಮೊದಲ ಟೆಸ್ಟ್: ಆಗಸ್ಟ್ 19ರಿಂದ 23ರವರೆಗೆ – ಲೀಡ್ಸ್
ಎರಡನೇ ಟೆಸ್ಟ್: ಆಗಸ್ಟ್ 27ರಿಂದ 31ರವರೆಗೆ – ಲಂಡನ್‌ನ ಲಾರ್ಡ್ಸ್ ಮೈದಾನ
ಮೂರನೇ ಟೆಸ್ಟ್: ಸೆಪ್ಟೆಂಬರ್ 9ರಿಂದ 13ರವರೆಗೆ – ಬರ್ಮಿಂಗ್‌ಹ್ಯಾಮ್
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.