ಚಿನ್ನ ಬೆಳ್ಳಿ ಬೆಲೆಯಲ್ಲಿ ಅಲ್ಪ ಇಳಿಕೆ
ನವದೆಹಲಿ, 05 ಜುಲೈ (ಹಿ.ಸ.): ಆ್ಯಂಕರ್: ದೇಶೀಯ ಚಿನಿವಾರ ಮಾರುಕಟ್ಟೆಯಲ್ಲಿ ಭಾನುವಾರ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಸ್ವಲ್ಪ ಇಳಿಕೆ ದಾಖಲಾಗಿದೆ. ಚೆನ್ನೈ ಹೊರತುಪಡಿಸಿ ದೇಶದ ಬಹುತೇಕ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹260 ರಿಂದ ₹280ರವರೆಗೆ ಇಳಿಕೆಯಾಗಿದೆ.
ಸಾಂಕೇತಿಕ


ನವದೆಹಲಿ, 05 ಜುಲೈ (ಹಿ.ಸ.):

ಆ್ಯಂಕರ್:

ದೇಶೀಯ ಚಿನಿವಾರ ಮಾರುಕಟ್ಟೆಯಲ್ಲಿ ಭಾನುವಾರ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಸ್ವಲ್ಪ ಇಳಿಕೆ ದಾಖಲಾಗಿದೆ. ಚೆನ್ನೈ ಹೊರತುಪಡಿಸಿ ದೇಶದ ಬಹುತೇಕ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹260 ರಿಂದ ₹280ರವರೆಗೆ ಇಳಿಕೆಯಾಗಿದೆ. ಚೆನ್ನೈನಲ್ಲಿ ಮಾತ್ರ ₹100–₹110ರಷ್ಟು ಇಳಿಕೆ ಕಂಡುಬಂದಿದೆ. ಬೆಳ್ಳಿಯ ದರದಲ್ಲೂ ಪ್ರತಿ ಕೆ.ಜಿಗೆ ₹100ರಷ್ಟು ಅಲ್ಪ ಕುಸಿತ ದಾಖಲಾಗಿದೆ.

ದರ ಇಳಿಕೆಯ ಬಳಿಕ ದೇಶದ ಬಹುತೇಕ ನಗರಗಳಲ್ಲಿ 24 ಕ್ಯಾರೆಟ್ ಚಿನ್ನ ₹1,46,730 ರಿಂದ ₹1,49,460 ಪ್ರತಿ 10 ಗ್ರಾಂ ದರದಲ್ಲಿ ವಹಿವಾಟಾಗುತ್ತಿದೆ. 22 ಕ್ಯಾರೆಟ್ ಚಿನ್ನ ₹1,34,500 ರಿಂದ ₹1,37,000 ಪ್ರತಿ 10 ಗ್ರಾಂ ದರದಲ್ಲಿದೆ. ದೆಹಲಿ ಮಾರುಕಟ್ಟೆಯಲ್ಲಿ ಬೆಳ್ಳಿ ಪ್ರತಿ ಕೆ.ಜಿಗೆ ₹2,50,000 ದರದಲ್ಲಿ ಮಾರಾಟವಾಗುತ್ತಿದೆ.

ಆದರೆ, ಇಂದಿನ ಇಳಿಕೆಯ ನಡುವೆಯೂ ವಾರದ ಲೆಕ್ಕದಲ್ಲಿ ಚಿನ್ನ ಮತ್ತು ಬೆಳ್ಳಿ ಎರಡೂ ಬೆಲೆ ಏರಿಕೆ ದಾಖಲಿಸಿವೆ. ಕಳೆದ ವಾರ 24 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ ₹2,780 ಏರಿಕೆಯಾದರೆ, 22 ಕ್ಯಾರೆಟ್ ಚಿನ್ನ ₹2,550 ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಬೆಳ್ಳಿ ದರವೂ ಪ್ರತಿ ಕೆ.ಜಿಗೆ ₹10,000 ಏರಿಕೆ ಕಂಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande