ಚಿನ್ನ-ಬೆಳ್ಳಿ ದರ ಏರಿಕೆ
ನವದೆಹಲಿ, 03 ಜುಲೈ (ಹಿ.ಸ.): ಆ್ಯಂಕರ್: ದೇಶೀಯ ಚಿನಿವಾರ ಮಾರುಕಟ್ಟೆಯಲ್ಲಿ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ. ಆರಂಭಿಕ ವಹಿವಾಟಿನಲ್ಲೇ ಚಿನ್ನದ ಬೆಲೆ ದೇಶದ ಬಹುತೇಕ ನಗರಗಳಲ್ಲಿ ಪ್ರತಿ 10 ಗ್ರಾಂಗೆ ₹2,770 ರಿಂದ ₹3,020ರವರೆಗೆ ಏರಿಕೆಯಾಗಿದೆ. ಚೆನ್ನೈನಲ್ಲಿ
Gold silver


ನವದೆಹಲಿ, 03 ಜುಲೈ (ಹಿ.ಸ.):

ಆ್ಯಂಕರ್:

ದೇಶೀಯ ಚಿನಿವಾರ ಮಾರುಕಟ್ಟೆಯಲ್ಲಿ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ. ಆರಂಭಿಕ ವಹಿವಾಟಿನಲ್ಲೇ ಚಿನ್ನದ ಬೆಲೆ ದೇಶದ ಬಹುತೇಕ ನಗರಗಳಲ್ಲಿ ಪ್ರತಿ 10 ಗ್ರಾಂಗೆ ₹2,770 ರಿಂದ ₹3,020ರವರೆಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ ₹1,500 ರಿಂದ ₹1,630ರವರೆಗೆ ಹೆಚ್ಚಳ ಕಂಡಿದೆ. ಬೆಳ್ಳಿಯ ದರವೂ ಪ್ರತಿ ಕಿಲೋಗ್ರಾಂಗೆ ₹5,000ರವರೆಗೆ ಏರಿಕೆಯಾಗಿದೆ.

ದರ ಏರಿಕೆಯ ಹಿನ್ನೆಲೆಯಲ್ಲಿ ದೇಶದ ಹೆಚ್ಚಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನವು ಪ್ರತಿ 10 ಗ್ರಾಂಗೆ ₹1,43,790 ರಿಂದ ₹1,46,190ರ ನಡುವೆ ವಹಿವಾಟು ನಡೆಸುತ್ತಿದೆ. 22 ಕ್ಯಾರೆಟ್ ಚಿನ್ನದ ದರವು ₹1,31,810 ರಿಂದ ₹1,34,010ರ ನಡುವೆಯಿದೆ.

ದೆಹಲಿಯಲ್ಲಿ ಬೆಳ್ಳಿ ಪ್ರತಿ ಕಿಲೋಗ್ರಾಂಗೆ ₹2,45,100ಕ್ಕೆ ಮಾರಾಟವಾಗುತ್ತಿದೆ.

ಕರ್ನಾಟಕ, ತೆಲಂಗಾಣ ಹಾಗೂ ಒಡಿಶಾದ ರಾಜಧಾನಿಗಳಾದ ಬೆಂಗಳೂರು, ಹೈದರಾಬಾದ್ ಮತ್ತು ಭುವನೇಶ್ವರದಲ್ಲಿಯೂ ಚಿನ್ನದ ದರ ಏರಿಕೆಯಾಗಿದೆ. ಈ ಮೂರು ನಗರಗಳಲ್ಲಿ 24 ಕ್ಯಾರೆಟ್ ಚಿನ್ನ ಪ್ರತಿ 10 ಗ್ರಾಂಗೆ ₹1,43,790 ಹಾಗೂ 22 ಕ್ಯಾರೆಟ್ ಚಿನ್ನ ₹1,31,810ಕ್ಕೆ ವಹಿವಾಟು ನಡೆಸುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande