
ಜೋಧ್ಪುರ, 04 ಜುಲೈ (ಹಿ.ಸ.):
ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಜಸ್ಥಾನದ ಜೋಧ್‌ಪುರಕ್ಕೆ ಭೇಟಿ ನೀಡಿ, ಜೋಧ್‌ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದರು.
ಬೆಳಿಗ್ಗೆ ಜೋಧ್‌ಪುರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು, ವಿಮಾನ ನಿಲ್ದಾಣ ಆವರಣದಲ್ಲಿ ಎಲ್‌ಇಡಿ ಪರದೆಯ ಮೂಲಕ ರಿಮೋಟ್‌ನಿಂದ ಬಟನ್ ಒತ್ತಿ ನೂತನ ಟರ್ಮಿನಲ್ ಅನ್ನು ಲೋಕಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಪ್ರಾದೇಶಿಕ ವಿಮಾನ ಸಂಪರ್ಕ ಯೋಜನೆಯಾದ ಉಡಾನ್–2ಕ್ಕೂ ಚಾಲನೆ ನೀಡಲಾಯಿತು.
ಟರ್ಮಿನಲ್ ಉದ್ಘಾಟನೆಯ ಬಳಿಕ ಪ್ರಧಾನಿ ಮೋದಿ ಅವರು ಜೋಧ್‌ಪುರ ವಾಯುಪಡೆ ನೆಲೆಯಿಂದ ಹೆಲಿಕಾಪ್ಟರ್ ಮೂಲಕ ಬಾಲೋತ್ರಾ ಜಿಲ್ಲೆಯ ಪಚ್‌ಪದ್ರಾಕ್ಕೆ ಪ್ರಯಾಣ ಬೆಳೆಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.