ಕುಟುಂಬದ ವ್ಯವಹಾರಕ್ಕೆ ಟ್ರಂಪ್ ಸಮರ್ಥನೆ
ಮಕ್ಕಳು ಕಠಿಣ ತನಿಖೆ ಎದುರಿಸಬೇಕಾಗುತ್ತದೆ ಎಂದ ಅಮೆರಿಕ ಅಧ್ಯಕ್ಷ
ಟ್ರಂಪ್


ವಾಷಿಂಗ್ಟನ್, 03 ಜುಲೈ (ಹಿ.ಸ.):

ಆ್ಯಂಕರ್:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಕುಟುಂಬದ ವ್ಯವಹಾರವನ್ನು ಸಮರ್ಥಿಸಿಕೊಂಡಿದ್ದು, ಅಧ್ಯಕ್ಷ ಸ್ಥಾನದಲ್ಲಿರುವ ಕಾರಣ ತಮ್ಮ ಮಕ್ಕಳ ಯಾವುದೇ ವ್ಯವಹಾರವನ್ನೂ ಹಿತಾಸಕ್ತಿ ಸಂಘರ್ಷದ ದೃಷ್ಟಿಯಿಂದಲೇ ನೋಡಲಾಗುತ್ತದೆ ಎಂದು ಹೇಳಿದ್ದಾರೆ. ಅಧ್ಯಕ್ಷರಾಗುವ ಮುನ್ನವೇ ತಮ್ಮ ಮಕ್ಕಳು ವ್ಯಾಪಾರ ಕ್ಷೇತ್ರದಲ್ಲಿದ್ದು, ಈಗ ಅವರು ಕಠಿಣ ತನಿಖೆಗಳನ್ನು ಎದುರಿಸಬೇಕಾಗುತ್ತಿದೆ ಎಂದರು.

ಇತ್ತೀಚೆಗೆ ಪ್ರಕಟವಾದ 2025ನೇ ಸಾಲಿನ ವಾರ್ಷಿಕ ಹಣಕಾಸು ಬಹಿರಂಗಪಡಿಸುವ ವರದಿ ಬಳಿಕ ಟ್ರಂಪ್ ಈ ಪ್ರತಿಕ್ರಿಯೆ ನೀಡಿದ್ದಾರೆ. ವರದಿಯ ಪ್ರಕಾರ, 2025ರಲ್ಲಿ ಶ್ವೇತಭವನಕ್ಕೆ ಮರಳಿದ ಮೊದಲ ವರ್ಷದಲ್ಲೇ ಟ್ರಂಪ್ ಅವರ ಕುಟುಂಬಕ್ಕೆ ಸಂಬಂಧಿಸಿದ ಕ್ರಿಪ್ಟೋಕರೆನ್ಸಿ ಉದ್ಯಮದಿಂದ 580 ಮಿಲಿಯನ್ ಡಾಲರ್‌ಗಿಂತ ಹೆಚ್ಚು ಆದಾಯ ಗಳಿಸಲಾಗಿದೆ ಎಂದು ಬಹಿರಂಗಗೊಂಡಿದೆ.

ಶ್ವೇತಭವನದ ಓವಲ್ ಕಚೇರಿಯಲ್ಲಿ ಸಿಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಅಧ್ಯಕ್ಷರ ನೀತಿಗಳು ದೇಶದ ಆರ್ಥಿಕತೆಯ ಪ್ರತಿಯೊಂದು ಕ್ಷೇತ್ರದ ಮೇಲೂ ಪರಿಣಾಮ ಬೀರುತ್ತವೆ. ನನ್ನ ಮಕ್ಕಳಿಗೆ ಅವರದೇ ಆದ ಜೀವನವಿದೆ. ಕ್ರಿಪ್ಟೋ ವ್ಯವಹಾರದಲ್ಲಿ ಯಾವುದೇ ಕಾನೂನುಬಾಹಿರ ಅಥವಾ ತಪ್ಪಾದ ನಡೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿತಾಸಕ್ತಿ ಸಂಘರ್ಷಕ್ಕೆ ಸಂಬಂಧಿಸಿದ ಫೆಡರಲ್ ಕಾನೂನುಗಳನ್ನು ಉಲ್ಲೇಖಿಸಿದ ಟ್ರಂಪ್, ಅಧ್ಯಕ್ಷ ಮತ್ತು ಉಪಾಧ್ಯಕ್ಷರು ತಮ್ಮ ಹಣಕಾಸಿನ ಹಿತಾಸಕ್ತಿಗೆ ಸಂಬಂಧಿಸಿದ ನಿರ್ಧಾರಗಳಿಂದ ಕಡ್ಡಾಯವಾಗಿ ದೂರ ಉಳಿಯಬೇಕೆಂಬ ನಿಯಮ ಇಲ್ಲ ಎಂದು ಹೇಳಿದರು.

ಸಂದರ್ಶನದಲ್ಲಿ ಟ್ರಂಪ್ ಅವರು ಅಮೆರಿಕದ ಸುಪ್ರೀಂ ಕೋರ್ಟ್, ಆರ್ಥಿಕತೆ, ಷೇರು ಮಾರುಕಟ್ಟೆ, ಇರಾನ್, ಫೆಡರಲ್ ರಿಸರ್ವ್ ಹಾಗೂ 2026ರ ಮಧ್ಯಂತರ ಚುನಾವಣೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

ಅಮೆರಿಕದ ಅತ್ಯುತ್ತಮ ಅಧ್ಯಕ್ಷ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ನಮ್ಮ ದೇಶದಲ್ಲಿ ಕೆಲ ಅತ್ಯಂತ ಕೆಟ್ಟ ಅಧ್ಯಕ್ಷರೂ ಇದ್ದರು ಎಂದು ಹೇಳಿ, ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದರು. ಕಾರ್ಯನಿರ್ವಾಹಕ ವಿಭಾಗದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ವತಂತ್ರ ಫೆಡರಲ್ ಸಂಸ್ಥೆಗಳ ಸದಸ್ಯರನ್ನು ಅಧ್ಯಕ್ಷರು ಪದಚ್ಯುತಗೊಳಿಸಲು ಅವಕಾಶ ನೀಡಿರುವ ಈ ತೀರ್ಪು ಅಧ್ಯಕ್ಷೀಯ ಅಧಿಕಾರವನ್ನು ಮತ್ತಷ್ಟು ಬಲಪಡಿಸಿದೆ ಎಂದು ಹೇಳಿದರು.

ಈ ತೀರ್ಪು ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಿದೆ. ಆದರೆ ಅಧ್ಯಕ್ಷರ ಹುದ್ದೆ ಮೊದಲಿನಿಂದಲೂ ಅತ್ಯಂತ ಪ್ರಬಲವಾಗಿದೆ. ವಿಶ್ವದ ಬೇರೆ ದೇಶಗಳ ರಾಷ್ಟ್ರಾಧ್ಯಕ್ಷರ ಹುದ್ದೆಗಳಿಗಿಂತ ಅಮೆರಿಕ ಅಧ್ಯಕ್ಷರ ಸ್ಥಾನ ಹೆಚ್ಚು ಶಕ್ತಿಶಾಲಿಯಾಗಿದೆ. ಇಂದು ವಿಶ್ವದಲ್ಲಿ ಅಮೆರಿಕಕ್ಕೆ ಮತ್ತೆ ಗೌರವ ದೊರೆಯುತ್ತಿದೆ. ಒಂದೂವರೆ ವರ್ಷದ ಹಿಂದೆ ನಮ್ಮನ್ನು ನೋಡಿ ಜನ ನಗುತ್ತಿದ್ದರು ಎಂದು ಟ್ರಂಪ್ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande