ವಿಧಾನಸೌಧದಲ್ಲಿ ಭರದಿಂದ ಸಾಗಿದ ನವೀಕರಣ ಕಾರ್ಯ: ಆಗಸ್ಟ್ 3ಕ್ಕೆ ತಮಿಳುನಾಡು ಸಿಎಂ ವಿಜಯ್ ಬೆಂಗಳೂರು ಭೇಟಿ
ಬೆಂಗಳೂರು, 29 ಜುಲೈ (ಹಿ.ಸ.): ಆ್ಯಂಕರ್: ಆಗಸ್ಟ್ 3ರಂದು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಅಧಿಕೃತವಾಗಿ ಬೆಂಗಳೂರಿಗೆ ಭೇಟಿ ನೀಡಿ ಕಾವೇರಿ ನೀರಿನ ಕುರಿತು ಚರ್ಚೆ ನಡೆಲಿದ್ದಾರೆ. ಈ ಭೇಟಿಯ ಹಿನ್ನೆಲೆಯಲ್ಲಿ, ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧದಲ್ಲಿ ಸಿದ್ಧತೆಗಳು ನವೀಕರಣ ಕಾರ್ಯಗಳು ಜೋರಾಗ
ಸಂದರ್ಭಿಕ ಚಿತ್ರ


ಬೆಂಗಳೂರು, 29 ಜುಲೈ (ಹಿ.ಸ.):

ಆ್ಯಂಕರ್:

ಆಗಸ್ಟ್ 3ರಂದು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಅಧಿಕೃತವಾಗಿ ಬೆಂಗಳೂರಿಗೆ ಭೇಟಿ ನೀಡಿ ಕಾವೇರಿ ನೀರಿನ ಕುರಿತು ಚರ್ಚೆ ನಡೆಲಿದ್ದಾರೆ. ಈ ಭೇಟಿಯ ಹಿನ್ನೆಲೆಯಲ್ಲಿ, ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧದಲ್ಲಿ ಸಿದ್ಧತೆಗಳು ನವೀಕರಣ ಕಾರ್ಯಗಳು ಜೋರಾಗಿ ಸಾಗಿವೆ.

ತಮಿಳುನಾಡು ಸಿಎಂ ಆಗಮನದ ಹಿನ್ನೆಲೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣ, ಗೋಡೆಗಳು, ಕಿಟಕಿಗಳು ಹಾಗೂ ಮುಗುಸಾಲೆಗಳಿಗೆ ಸುಣ್ಣ-ಬಣ್ಣ ಬಳಿಯುವ ಸಿಂಗರಿಸುವ ಕಾರ್ಯಗಳು ಭರದಿಂದ ನಡೆಯುತ್ತಿವೆ.

ವಿಜಯ್ ಅವರು ವಿಧಾನಸೌಧದಲ್ಲಿ ಅವರು ಸಾಗುವ ಮಾರ್ಗಗಳು ಹಾಗೂ ಕಾರಿಡಾರ್ಗಳು ಅತ್ಯಾಕರ್ಷಕವಾಗಿ ಕಾಣುವಂತೆ ಅಧಿಕಾರಿಗಳು ವ್ಯವಸ್ಥೆ ಮಾಡುತ್ತಿದ್ದಾರೆ. ಅಲ್ಲದೆ, ಸಭೆ ನಡೆಯಲಿರುವ ಸಭಾಂಗಣದಲ್ಲಿ ಹೈಟೆಕ್ ಆಸನಗಳ ವ್ಯವಸ್ಥೆ ಹಾಗೂ ಇತರೆ ತುರ್ತು ಸರಿಪಡಿಸಬೇಕಾದ ಕೆಲಸಗಳನ್ನು ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ.

ಯಾವುದೇ ಕಾರಣಕ್ಕೂ ನಮ್ಮ ಪಾಲಿನ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂದು ಆಗ್ರಹಿಸಿ ನಾಡಿನ ಅನ್ನದಾತರು ರಸ್ತೆಗಿಳಿದು ಉಗ್ರ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ತಮಿಳುನಾಡು ಸಿಎಂ ಭೇಟಿಗಾಗಿ ಶಕ್ತಿ ಸೌಧವಾದ ವಿಧಾನಸೌಧದಲ್ಲಿ ಇಷ್ಟೊಂದು ಭರ್ಜರಿ ಸಿದ್ಧತೆಗಳು ಹಾಗೂ ಅದ್ದೂರಿ ಸ್ವಾಗತದ ತಯಾರಿ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಹಾಗೂ ರೈತ ಮುಖಂಡರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande