ವಿಶ್ವ ಪ್ರಕೃತಿ ಸಂರಕ್ಷಣಾ ದಿನ: ಪ್ರಕೃತಿ ಉಳಿಸಿ, ಭವಿಷ್ಯ ಕಾಪಾಡಿ;ಗಣ್ಯರ ಕರೆ
ನವದೆಹಲಿ, ಜುಲೈ 28(ಹಿ.ಸ.): ಆ್ಯಂಕರ್:ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಅಂಗವಾಗಿ ಲೋಕಸಭಾಧ್ಯಕ್ಷ ಓಂ ಬಿರ್ಲಾ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್, ಪ್ರಹ್ಲಾದ್ ಜೋಶಿ, ಡಾ. ವೀರೇಂದ್ರ ಕುಮಾರ್ ಹಾಗೂ ಗಿರಿರಾಜ್ ಸಿಂಗ್ ದೇಶದ ಜನತೆಗೆ ಶುಭಾಶಯ ಕೋರಿದ್ದು, ಪರಿಸರ ಸಂರಕ್ಷಣೆಗೆ
प्रतीकात्मक


ನವದೆಹಲಿ, ಜುಲೈ 28(ಹಿ.ಸ.):

ಆ್ಯಂಕರ್:ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಅಂಗವಾಗಿ ಲೋಕಸಭಾಧ್ಯಕ್ಷ ಓಂ ಬಿರ್ಲಾ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್, ಪ್ರಹ್ಲಾದ್ ಜೋಶಿ, ಡಾ. ವೀರೇಂದ್ರ ಕುಮಾರ್ ಹಾಗೂ ಗಿರಿರಾಜ್ ಸಿಂಗ್ ದೇಶದ ಜನತೆಗೆ ಶುಭಾಶಯ ಕೋರಿದ್ದು, ಪರಿಸರ ಸಂರಕ್ಷಣೆಗೆ ಸಂಕಲ್ಪ ಮಾಡಬೇಕೆಂದು ಕರೆ ನೀಡಿದ್ದಾರೆ.

ಓಂ ಬಿರ್ಲಾ ಅವರು ಪ್ರಕೃತಿಯನ್ನು ರಕ್ಷಿಸುವುದು ಎಂದರೆ ನಮ್ಮ ಭವಿಷ್ಯವನ್ನು ರಕ್ಷಿಸುವುದೇ ಆಗಿದೆ. ಮರಗಳನ್ನು ನೆಡುವುದು, ನೀರು ಉಳಿಸುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸುವ ಮೂಲಕ ಹಸಿರು ಮತ್ತು ಸುಸ್ಥಿರ ಭವಿಷ್ಯ ನಿರ್ಮಿಸೋಣ ಎಂದು ಹೇಳಿದರು.

ನಿತಿನ್ ಗಡ್ಕರಿ ಅವರು ಪ್ರಕೃತಿ ನಮ್ಮ ಪರಂಪರೆ ಮಾತ್ರವಲ್ಲ, ಅದು ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ. ಕಾಡು, ನದಿಗಳು, ವನ್ಯಜೀವಿಗಳು ಹಾಗೂ ಜೈವ ವೈವಿಧ್ಯತೆಯನ್ನು ಸಂರಕ್ಷಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಶಿವರಾಜ್ ಸಿಂಗ್ ಚೌಹಾಣ್ ಅವರು ಭೂಮಿ ಉಳಿದಾಗ ಮಾತ್ರ ಮಾನವ ಮತ್ತು ಇತರ ಜೀವಿಗಳ ಭವಿಷ್ಯ ಸುರಕ್ಷಿತವಾಗಿರುತ್ತದೆ. ಮರ ನೆಡುವುದು, ಏಕಬಳಕೆಯ ಪ್ಲಾಸ್ಟಿಕ್ ತ್ಯಜಿಸುವುದು, ನೀರು ಮತ್ತು ವಿದ್ಯುತ್ ಉಳಿತಾಯ ಮಾಡುವುದು ಹಾಗೂ ಸ್ವಚ್ಛತೆಯನ್ನು ಕಾಪಾಡುವ ಸಂಕಲ್ಪ ಮಾಡಬೇಕು ಎಂದರು.

ಪ್ರಹ್ಲಾದ್ ಜೋಶಿ ಅವರು ಪರಿಸರ ಸ್ನೇಹಿ ಇಂಧನ ಬಳಕೆ ಮತ್ತು ಪ್ರಕೃತಿ ಸಂಪತ್ತಿನ ಸಂರಕ್ಷಣೆ ಮೂಲಕ ಸುಸ್ಥಿರ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.

ಡಾ. ವೀರೇಂದ್ರ ಕುಮಾರ್ ಅವರು ಸ್ವಚ್ಛ ನೀರು, ಹಸಿರು ಕಾಡುಗಳು, ಸಮೃದ್ಧ ಜೈವ ವೈವಿಧ್ಯತೆ ಮತ್ತು ಸಮತೋಲಿತ ಪರಿಸರವೇ ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯವಾಗಿದ್ದು, ಪರಿಸರ ಸಂರಕ್ಷಣೆಯನ್ನು ಜನಾಂದೋಲನವಾಗಿಸಬೇಕೆಂದು ಹೇಳಿದರು.

ಗಿರಿರಾಜ್ ಸಿಂಗ್ ಅವರು ಮರಗಳನ್ನು ನೆಟ್ಟು, ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು, ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಹಸಿರು ಮತ್ತು ಸಮೃದ್ಧ ಭವಿಷ್ಯ ನಿರ್ಮಿಸೋಣ ಎಂದು ಕರೆ ನೀಡಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande