ಎನ್.ಡಿ.ಎ ಮಂಗಳ ಮಿಲನ ಸಭೆ: ಸಂಸತ್ತಿನ ಕಾರ್ಯತಂತ್ರದ ಕುರಿತು ಚರ್ಚೆ
ನವದೆಹಲಿ, ಜುಲೈ 28(ಹಿ.ಸ.): ಆ್ಯಂಕರ್:ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಸಂಸದೀಯ ಪಕ್ಷದ ಸಾಪ್ತಾಹಿಕ ''ಮಂಗಳ ಮಿಲನ'' ಸಭೆ ಮಂಗಳವಾರ ಸಂಸತ್ ಸಂಕೀರ್ಣದ ಜಿಎಂಸಿ ಬಾಲಯೋಗಿ ಸಭಾಂಗಣದಲ್ಲಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ
राजग की बैठक में प्रधानमंत्री मोदी के साथ कई सांसद


ನವದೆಹಲಿ, ಜುಲೈ 28(ಹಿ.ಸ.):

ಆ್ಯಂಕರ್:ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಸಂಸದೀಯ ಪಕ್ಷದ ಸಾಪ್ತಾಹಿಕ 'ಮಂಗಳ ಮಿಲನ' ಸಭೆ ಮಂಗಳವಾರ ಸಂಸತ್ ಸಂಕೀರ್ಣದ ಜಿಎಂಸಿ ಬಾಲಯೋಗಿ ಸಭಾಂಗಣದಲ್ಲಿ ನಡೆಯಿತು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಎನ್‌ಡಿಎಯ ಹಿರಿಯ ನಾಯಕರು ಸಭೆಯಲ್ಲಿ ಪಾಲ್ಗೊಂಡರು. ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಲಿಲ್ಲ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಭಾರತ ವಿವಿಧ ದೇಶಗಳೊಂದಿಗೆ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದಗಳ (ಎಫ್‌ಟಿಎ) ಕುರಿತು ಪ್ರಾತ್ಯಕ್ಷಿಕೆ ನೀಡಿ, ದೇಶಕ್ಕೆ ಆಗುವ ಆರ್ಥಿಕ ಹಾಗೂ ವಾಣಿಜ್ಯ ಲಾಭಗಳನ್ನು ವಿವರಿಸಿದರು. ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ (ಲಲ್ಲನ್ ಸಿಂಗ್) ಅವರು ಮೀನುಗಾರಿಕೆ ಕ್ಷೇತ್ರದ ಯೋಜನೆಗಳು ಮತ್ತು ಸಾಧನೆಗಳ ಕುರಿತು ಮಾಹಿತಿ ನೀಡಿದರು.

ಸಭೆಯ ಬಳಿಕ ಸಂಸದ ಮನೋಜ್ ತಿವಾರಿ ಮಾತನಾಡಿ, ಸಂಸದರಿಗೆ ಮುಕ್ತ ವ್ಯಾಪಾರ ಒಪ್ಪಂದಗಳ ಮಹತ್ವ ಹಾಗೂ ಸಂಸತ್ತಿನಲ್ಲಿ ಮಂಡನೆಯಾಗಲಿರುವ ಶಿಕ್ಷಣ ಸಂಬಂಧಿತ ಮಸೂದೆ ಕುರಿತು ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

ಈ ಸಭೆಗೆ ಮೊದಲ ಬಾರಿಗೆ 20 ಸಂಸದರನ್ನು ಒಳಗೊಂಡಿರುವ ನೂತನ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ ಪಕ್ಷವನ್ನು ವಿಶೇಷ ಆಹ್ವಾನಿತ ಪಕ್ಷವಾಗಿ ಆಹ್ವಾನಿಸಲಾಗಿತ್ತು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande