ಕರಾಟೆ ಚಾಂಪಿಯನ್ಶಿಪ್ -2026 - 12 ಟ್ರೋಫಿ, 4 ಮೆಡಲ್
ಗಂಗಾವತಿ, 27 ಜುಲೈ (ಹಿ.ಸ.): ಆ್ಯಂಕರ್: ಗಂಗಾವತಿಯಲ್ಲಿ ನಡೆದ 2 ನೇ ಅಂತಾರಾಷ್ಟಿಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ಶಿಪ್ -2026 ರಲ್ಲಿ ನ್ಯಾಷನಲ್ ಸ್ಪೀರಿಟ್ ಕರಾಟೆ ಅಕಾಡೆಮಿಯ ಗವಿಮಠ ಆವರಣದ ಕೈಲಾಸ ಮಂಟಪ ಶಾಖೆಯ 12 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ 12 ಟ್ರೋಫಿ, 4 ಮೆಡಲ್ ಪ್ರಶಸ್ತಿಗ
ಕರಾಟೆ ಚಾಂಪಿಯನ್ಶಿಪ್ -2026 - 12 ಟ್ರೋಫಿ, 4 ಮೆಡಲ್


ಗಂಗಾವತಿ, 27 ಜುಲೈ (ಹಿ.ಸ.):

ಆ್ಯಂಕರ್:

ಗಂಗಾವತಿಯಲ್ಲಿ ನಡೆದ 2 ನೇ ಅಂತಾರಾಷ್ಟಿಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ಶಿಪ್ -2026 ರಲ್ಲಿ ನ್ಯಾಷನಲ್ ಸ್ಪೀರಿಟ್ ಕರಾಟೆ ಅಕಾಡೆಮಿಯ ಗವಿಮಠ ಆವರಣದ ಕೈಲಾಸ ಮಂಟಪ ಶಾಖೆಯ 12 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ 12 ಟ್ರೋಫಿ, 4 ಮೆಡಲ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಕಟಾ ವಿಭಾಗದಲ್ಲಿ ಅಚ್ಚುತ, ಚಾರ್ವಿ, ಶ್ರೀಲೇಖ ಹಾಗೂ ಅಭಿನಂದನ್ ಪ್ರಥಮ ಸ್ಥಾನ ಪಡೆದರೆ, ಅಮೃತ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸಿದ್ದಾರ್ಥ್ ನಾಗೋಜಿ, ಸಂತೋಷ್, ಮಿವಾನ್ ಹಾಗೂ ನಿಂಗರಾಜ್ ಕುರಿ ತೃತೀಯ ಸ್ಥಾನ ಗಳಿಸಿದ್ದಾರೆ.

ಕುಮಿಟೆ ವಿಭಾಗದಲ್ಲಿ ಪ್ರಣವ್ ನಾಗೋಜಿ ಮತ್ತು ಶಂಕರ್ ತೃತೀಯ ಸ್ಥಾನ ಪಡೆದಿದ್ದು, ಅಭಿನವ ಕಟಾ–ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿ ಗಮನ ಸೆಳೆದಿದ್ದಾರೆ.

ಕ್ರೀಡಾಪಟುಗಳ ಈ ಸಾಧನೆಗೆ ತರಬೇತುದಾರರಾದ ದೇವಪ್ಪ ಕಲ್ಲನವರ ಹಾಗೂ ತಿರುಮಲ ಕಲ್ಲನವರ ಹರ್ಷ ವ್ಯಕ್ತಪಡಿಸಿ, ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande