ಯುವ ಹಾಕಿ5ಎಸ್ ಏಷ್ಯನ್ ಚಾಂಪಿಯನ್ಶಿಪ್: ಪಾಕಿಸ್ತಾನಕ್ಕೆ 7-3 ಗೋಲುಗಳ ಸೋಲುಣಿಸಿ ಫೈನಲ್ಗೆ ಭಾರತ
ಮಸ್ಕತ್ (ಒಮಾನ್), ಜುಲೈ 25(ಹಿ.ಸ.): ಆ್ಯಂಕರ್:ಎಫ್‌ಐಎಚ್ ಯುವ ಹಾಕಿ5ಎಸ್ ಏಷ್ಯನ್ ಚಾಂಪಿಯನ್‌ಶಿಪ್-2026ರಲ್ಲಿ ಭಾರತೀಯ ಕಿರಿಯ ಪುರುಷರ ಹಾಕಿ ತಂಡ ಪ್ರತಿಸ್ಪರ್ಧಿ ಪಾಕಿಸ್ತಾನವನ್ನು 7-3 ಗೋಲುಗಳಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿದೆ. ಇದಕ್ಕೂ ಮುನ್ನ ಆತಿಥೇಯ ಒಮಾನ್ ವಿರುದ್ಧ 10-1 ಗೋಲುಗಳ ಭರ್ಜರಿ ಜಯ
भारत और पाकिस्तान के बीच मैच का दृश्य (फोटो क्रेडिट: एएचएफ)


ಮಸ್ಕತ್ (ಒಮಾನ್), ಜುಲೈ 25(ಹಿ.ಸ.):

ಆ್ಯಂಕರ್:ಎಫ್‌ಐಎಚ್ ಯುವ ಹಾಕಿ5ಎಸ್ ಏಷ್ಯನ್ ಚಾಂಪಿಯನ್‌ಶಿಪ್-2026ರಲ್ಲಿ ಭಾರತೀಯ ಕಿರಿಯ ಪುರುಷರ ಹಾಕಿ ತಂಡ ಪ್ರತಿಸ್ಪರ್ಧಿ ಪಾಕಿಸ್ತಾನವನ್ನು 7-3 ಗೋಲುಗಳಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿದೆ. ಇದಕ್ಕೂ ಮುನ್ನ ಆತಿಥೇಯ ಒಮಾನ್ ವಿರುದ್ಧ 10-1 ಗೋಲುಗಳ ಭರ್ಜರಿ ಜಯ ಸಾಧಿಸಿ ಭಾರತ ತನ್ನ ಪ್ರಾಬಲ್ಯ ಮೆರೆಯಿತು.

ಪಾಕಿಸ್ತಾನ ವಿರುದ್ಧದ ಸೆಮಿಫೈನಲ್‌ನಲ್ಲಿ ಭಾರತ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿತು. ರೋಮಿತ್ ಪಾಲ್, ಕರಣ್ ಗೌತಮ್ ಮತ್ತು ನಾಯಕ ಕೇತನ ಕುಶ್ವಾಹಾ ಮೊದಲಾರ್ಧದಲ್ಲೇ ಗೋಲು ಗಳಿಸಿ ಭಾರತಕ್ಕೆ 3-0 ಮುನ್ನಡೆ ತಂದುಕೊಟ್ಟರು. ಎರಡನೇಾರ್ಧದಲ್ಲಿ ಪ್ರಹ್ಲಾದ್ ರಾಜಭರ್, ಶಾರುಖ್ ಅಲಿ, ರಾಹುಲ್ ಯಾದವ್ ಹಾಗೂ ಕೇತನ ಕುಶ್ವಾಹಾ ಮತ್ತಷ್ಟು ಗೋಲುಗಳನ್ನು ದಾಖಲಿಸಿ ತಂಡದ ಗೆಲುವು ಖಚಿತಪಡಿಸಿದರು. ಪಾಕಿಸ್ತಾನದ ಪರ ಮೊಹಮ್ಮದ್ ಉಸ್ಮಾನ್ ಎರಡು ಹಾಗೂ ನಾಯಕ ಆದಿಲ್ ಒಂದು ಗೋಲು ಗಳಿಸಿದರು.

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಭಾರತ ಆತಿಥೇಯ ಒಮಾನ್ ತಂಡವನ್ನು 10-1 ಗೋಲುಗಳಿಂದ ಮಣಿಸಿತು. ಕೇತನ ಕುಶ್ವಾಹಾ ನಾಲ್ಕು ಗೋಲುಗಳೊಂದಿಗೆ ಮಿಂಚಿದರೆ, ಶಾರುಖ್ ಅಲಿ ಎರಡು, ಕರಣ್ ಗೌತಮ್ ಮತ್ತು ಪ್ರಹ್ಲಾದ್ ರಾಜಭರ್ ತಲಾ ಎರಡು ಗೋಲುಗಳನ್ನು ದಾಖಲಿಸಿದರು.

ಇದೇ ವೇಳೆ ಮಹಿಳಾ ವಿಭಾಗದಲ್ಲಿ ಮೊದಲ ಪಂದ್ಯದಲ್ಲಿ ಚೀನಾ ವಿರುದ್ಧ 3-6 ಗೋಲುಗಳಿಂದ ಸೋಲು ಕಂಡಿದ್ದ ಭಾರತ, ನಂತರದ ಪಂದ್ಯದಲ್ಲಿ ಉಜ್ಬೇಕಿಸ್ತಾನವನ್ನು 10-0 ಗೋಲುಗಳಿಂದ ಮಣಿಸಿ ಭರ್ಜರಿ ಆಟ ಪ್ರದರ್ಶಿಸಿತು. ನೌಶೀನ್ ನಾಜ್ ಹ್ಯಾಟ್ರಿಕ್ ಸಾಧಿಸಿದರೆ, ಸಂದೀಪಾ ಕುಮಾರಿ ಎರಡು ಗೋಲು ಗಳಿಸಿದರು. ಶ್ರುತಿ ಕುಮಾರಿ, ಕಿರಣ್ ಎಕ್ಕಾ, ಸ್ವೀಟಿ ಕುಜೂರ್, ನೀಲಂ ಟೋಪ್ನೋ ಹಾಗೂ ದಿಯಾ ತಲಾ ಒಂದು ಗೋಲು ದಾಖಲಿಸಿದರು.

ಲೀಗ್ ಹಂತದ ನಂತರ ಭಾರತೀಯ ಪುರುಷರ ತಂಡ ಫೈನಲ್‌ನಲ್ಲಿ ಮತ್ತೊಮ್ಮೆ ಪಾಕಿಸ್ತಾನವನ್ನು ಎದುರಿಸಲಿದ್ದು, ಮಹಿಳಾ ತಂಡ ಸೆಮಿಫೈನಲ್‌ನಲ್ಲಿ ಕಜಕಿಸ್ತಾನ ವಿರುದ್ಧ ಸೆಣಸಾಟ ನಡೆಸಲಿದೆ. ಈ ಟೂರ್ನಿಯು ಉದ್ಘಾಟನಾ ಎಫ್‌ಐಎಚ್ ಯುವ ಹಾಕಿ5ಎಸ್ ವಿಶ್ವಕಪ್‌ಗೆ ಏಷ್ಯಾದ ಅರ್ಹತಾ ಸ್ಪರ್ಧೆಯಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande