ಆಗಸ್ಟ್ 1 ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಮೈಸೂರು, 26 ಜುಲೈ (ಹಿ.ಸ.): ಆ್ಯಂಕರ್: ಐತಿಹಾಸಿಕ ಹಿನ್ನೆಲೆಯುಳ್ಳ ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬರುವ ಆಗಸ್ಟ್ 1ರಂದು ಭೇಟಿ ನೀಡಲಿದ್ದಾರೆ. ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಅತ್ಯಂತ ಭವ್ಯವಾಗಿ ನಿರ್ಮಿಸಲಾಗಿರುವ ಸ್ವಾಮ
ಸಂದರ್ಭಿಕ ಚಿತ್ರ


ಮೈಸೂರು, 26 ಜುಲೈ (ಹಿ.ಸ.):

ಆ್ಯಂಕರ್:

ಐತಿಹಾಸಿಕ ಹಿನ್ನೆಲೆಯುಳ್ಳ ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬರುವ ಆಗಸ್ಟ್ 1ರಂದು ಭೇಟಿ ನೀಡಲಿದ್ದಾರೆ. ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಅತ್ಯಂತ ಭವ್ಯವಾಗಿ ನಿರ್ಮಿಸಲಾಗಿರುವ ಸ್ವಾಮಿ ವಿವೇಕಾನಂದರ ಸ್ಮರಣಾರ್ಥ 'ವಿವೇಕ ಸ್ಮಾರಕ'ವನ್ನು (ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ) ಪ್ರಧಾನಿಯವರು ದೇಶಕ್ಕೆ ಸಮರ್ಪಿಸಲಿದ್ದಾರೆ.

1892ರಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಂಗಿದ್ದ ಐತಿಹಾಸಿಕ ನಿರಂಜನ ಮಠದ ಅದೇ ಜಾಗದಲ್ಲಿ, ಸುಮಾರು 35 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಈ ವಿನೂತನ ಸ್ಮಾರಕವನ್ನು ಮರುನಿರ್ಮಾಣ ಮಾಡಲಾಗಿದೆ. ಯುವಕರಲ್ಲಿ ನೈತಿಕತೆ ಹಾಗೂ ಕೌಶಲಾಭಿವೃದ್ಧಿ ಬೆಳೆಸುವ ಉದ್ದೇಶದಿಂದ ಈ ಕೇಂದ್ರವನ್ನು ರೂಪಿಸಲಾಗಿದೆ.

ಪ್ರಧಾನಿ ಮೋದಿ ಪ್ರವಾಸದ ವೇಳಾಪಟ್ಟಿ:

ಮಧ್ಯಾಹ್ನ 2.55: ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ.

ಮಧ್ಯಾಹ್ನ 3.15: ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ನೇರವಾಗಿ ನಗರದ ಓವಲ್ ಮೈದಾನಕ್ಕೆ ಬಂದಿಳಿಯಲಿರುವ ಪ್ರಧಾನಿ.

ಮಧ್ಯಾಹ್ನ 3.25: ಓವಲ್ ಮೈದಾನದಿಂದ ಬಿಗಿ ಪೊಲೀಸ್ ಭದ್ರತೆಯ ರಸ್ತೆ ಮಾರ್ಗದ (ಕಾನ್ವಾಯ್) ಮೂಲಕ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ವಿವೇಕ ಸ್ಮಾರಕದತ್ತ ಪ್ರಯಾಣ.

ಮಧ್ಯಾಹ್ನ 3.30 ರಿಂದ ಸಂಜೆ 5.15: ರಾಮಕೃಷ್ಣ ಆಶ್ರಮದ ಆವರಣದಲ್ಲಿ ಆಯೋಜಿಸಿರುವ ಮುಖ್ಯ ವೇದಿಕೆ ಕಾರ್ಯಕ್ರಮ ಹಾಗೂ ನೂತನ 'ವಿವೇಕ ಸ್ಮಾರಕ'ದ ಲೋಕಾರ್ಪಣೆ, ಯುವ ಕೌಶಲಾಭಿವೃದ್ಧಿ, ಯೋಗಧ್ಯಾನ ಕೇಂದ್ರ, ಗ್ರಂಥಾಲಯ ಉದ್ಘಾಟನೆ ಮತ್ತು ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಭಾಗಿ.

ಇದೇ ವೇಳೆ ಆಶ್ರಮದ ಮುಕ್ತ ಕ್ರೀಡಾಂಗಣದಲ್ಲಿ ಜರುಗಲಿರುವ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.

ಸಂಜೆ 5.20: ರಾಮಕೃಷ್ಣ ಆಶ್ರಮದ ಶಾಲಾ ಆವರಣಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ.

ಸಂಜೆ 5.30: ರಸ್ತೆ ಮಾರ್ಗದ ಮೂಲಕ ವಾಪಸ್ ಓವಲ್ ಮೈದಾನಕ್ಕೆ ತಲುಪಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮೈಸೂರು ವಿಮಾನ ನಿಲ್ದಾಣದತ್ತ ಪ್ರಯಾಣ.

ಸಂಜೆ 5.55: ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಮರಳಿ ನವದೆಹಲಿಗೆ ನಿರ್ಗಮನ.

ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ಸಿದ್ಧತೆಗಳು:

ಪ್ರಧಾನಮಂತ್ರಿಯವರ ಈ ಮಹತ್ವದ ಭೇಟಿಯ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ವಿಶೇಷ ರಕ್ಷಣಾ ಪಡೆ , ಜಿಲ್ಲಾಡಳಿತ ಹಾಗೂ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಓವಲ್ ಮೈದಾನ, ರಾಮಕೃಷ್ಣ ಆಶ್ರಮ ಮತ್ತು ಪ್ರಧಾನಿ ಸಂಚರಿಸುವ ಎಲ್ಲಾ ಸಂಚಾರ ಮಾರ್ಗಗಳಲ್ಲಿ ಈಗಾಗಲೇ ಅತಿ ಬಿಗಿ ಭದ್ರತೆ ಹಾಗೂ ಕಟ್ಟುನಿಟ್ಟಿನ ಪರಿಶೀಲನೆಯನ್ನು ಕೈಗೊಳ್ಳಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande