ಮನ್ ಕಿ ಬಾತ್: ವಿಜ್ಞಾನ, ಕ್ರೀಡೆ ಸಾಧನೆಗಳ ಪ್ರಸ್ತಾಪ; ಕಾರ್ಗಿಲ್ ವೀರರಿಗೆ ಪ್ರಧಾನಿ ಮೋದಿ ನಮನ
ನವದೆಹಲಿ, ಜುಲೈ 26(ಹಿ.ಸ.): ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರು ‘ಮನದ ಮಾತು’ ಕಾರ್ಯಕ್ರಮದ 136ನೇ ಸಂಚಿಕೆಯಲ್ಲಿ ವಿಜ್ಞಾನ, ನವೋದ್ಯಮ, ಕ್ರೀಡೆ ಮತ್ತು ರಾಷ್ಟ್ರೀಯ ಭದ್ರತಾ ಕ್ಷೇತ್ರಗಳಲ್ಲಿ ಭಾರತದ ಸಾಧನೆಗಳನ್ನು ಶ್ಲಾಘಿಸಿ, ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ವೀರ ಯೋಧರ ಶೌರ್ಯ ಮತ್ತು ತ್ಯಾಗಕ್ಕೆ
Man ki baat


ನವದೆಹಲಿ, ಜುಲೈ 26(ಹಿ.ಸ.):

ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರು ‘ಮನದ ಮಾತು’ ಕಾರ್ಯಕ್ರಮದ 136ನೇ ಸಂಚಿಕೆಯಲ್ಲಿ ವಿಜ್ಞಾನ, ನವೋದ್ಯಮ, ಕ್ರೀಡೆ ಮತ್ತು ರಾಷ್ಟ್ರೀಯ ಭದ್ರತಾ ಕ್ಷೇತ್ರಗಳಲ್ಲಿ ಭಾರತದ ಸಾಧನೆಗಳನ್ನು ಶ್ಲಾಘಿಸಿ, ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ವೀರ ಯೋಧರ ಶೌರ್ಯ ಮತ್ತು ತ್ಯಾಗಕ್ಕೆ ನಮನ ಸಲ್ಲಿಸಿದರು.

ವಿಕ್ರಮ್–1 ರಾಕೆಟ್‌ನ ಯಶಸ್ವಿ ಉಡಾವಣೆ ಹಾಗೂ ಅಂತಾರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಯನ್ನು ಪ್ರಧಾನಿ ಅಭಿನಂದಿಸಿದರು. ಕ್ರೀಡೆಯಲ್ಲಿ ಭಾರತೀಯ ಆಟಗಾರರ ಸಾಧನೆ ದೇಶಕ್ಕೆ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.

ಕೇರಳದಲ್ಲಿ ಸಂಸ್ಕೃತ ಶಿಕ್ಷಣವನ್ನು ಫುಟ್‌ಬಾಲ್‌ನೊಂದಿಗೆ ಸಂಯೋಜಿಸಿರುವ ವಿನೂತನ ಪ್ರಯತ್ನವನ್ನು ಅವರು ಮೆಚ್ಚಿದರು. ಭಾರತ ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆಯತ್ತ ಸಾಗುತ್ತಿದ್ದು, ಜಾಗತಿಕ ರಕ್ಷಣಾ ಪಾಲುದಾರ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು.

‘ಕ್ಯಾಚ್ ದ ರೇನ್’ ಅಭಿಯಾನಕ್ಕೆ ಜನರಿಂದ ದೊರೆಯುತ್ತಿರುವ ಉತ್ತಮ ಸ್ಪಂದನವನ್ನು ಪ್ರಶಂಸಿಸಿದ ಪ್ರಧಾನಿ, ಉತ್ತರ ಪ್ರದೇಶದ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸುತ್ತಿರುವ ಔಷಧೀಯ ಚಹಾ ಆತ್ಮನಿರ್ಭರತೆಯ ಸಂಕೇತವಾಗಿದೆ ಎಂದರು. ಪ್ರಕೃತಿ ಸಂರಕ್ಷಣೆ ಮತ್ತು ಜೀವವೈವಿಧ್ಯ ಉಳಿವಿಗೆ ದೇಶದಾದ್ಯಂತ ಜನರು ಕೈಗೊಂಡಿರುವ ಪ್ರೇರಣಾದಾಯಕ ಪ್ರಯತ್ನಗಳನ್ನೂ ಶ್ಲಾಘಿಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande