
ಕೊಪ್ಪಳ, 23 ಜುಲೈ (ಹಿ.ಸ.)
ಆ್ಯಂಕರ್ : 2025-26ನೇ ಶೈಕ್ಷಣಿಕ ಸಾಲಿಗೆ ಕೊಪ್ಪಳ ಜಿಲ್ಲೆಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಕೊಪ್ಪಳ ಇಲ್ಲಿ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಡಿಪ್ಲೋಮಾ ಕೋರ್ಸುಗಳಲ್ಲಿ ಬಾಕಿ ಉಳಿದಿರುವ ಸೀಟುಗಳಿಗೆ ಆನ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್, ಡಿಪ್ಲೋಮಾ ಇನ್ ಮೆಕ್ಯಾಟ್ರಾನಿಕ್ಸ್, ಲ್ಯಾಟರಲ್ ಎಂಟ್ರಿಗೆ ಬಾಕಿ ಉಳಿದಿರುವ ಸೀಟುಗಳಿಗೆ ಆನ್ಲೈನ್ ಮೂಲಕ ಪ್ರವೇಶಾತಿ ಪಡೆಯಲು ಪ್ರಕ್ರಿಯೆಯನ್ನು ಜುಲೈ 23 ರಿಂದ ಜಿಟಿಟಿಸಿ, ದದೇಗಲ್, ಕೊಪ್ಪಳ ಕೇಂದ್ರದಲ್ಲಿ ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಗದಗ ರೋಡ್ ದದೇಗಲ್ ಕೊಪ್ಪಳ ಇಲ್ಲಿ ಖುದ್ದಾಗಿ ಬಂದು ಅಥವಾ ಅಂತರ್ಜಾಲ http://gttc-hrms.karnataka.gov.inadmission ನಲ್ಲಿ ಅರ್ಜಿಗಳನ್ನು ಜುಲೈ 31 ರ ಒಳಗಾಗಿ ಸಲ್ಲಿಸಬಹುದು.
2026-27ನೇ ಶೈಕ್ಷಣಿಕ ಸಾಲಿನಲ್ಲಿ ಎಐಸಿಟಿಯ ಅನುಮೋದಿತ ಜಿಟಿಟಿಸಿ ಕೇಂದ್ರವಾದ ನಮ್ಮ ಕಾಲೇಜಿನಲ್ಲಿ ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಡಿಪ್ಲೋಮಾ ಪ್ರಥಮ ಸೆಮಿಸ್ಟರ್ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯ ಅಥವಾ ಮೌನೇಶ್ ರಾಥೋಡ್, ಪ್ರಾಂಶುಪಾಲರು, ಜಿಟಿಟಿಸಿ ದದೇಗಲ್, ಕೊಪ್ಪಳ ಇವರ ಮೊ.ಸಂ. 7507094445 ಗೆ ಸಂಪರ್ಕಿಸಬಹುದು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್