ಆಗಸ್ಟ್ 8ರಂದು ಸೈನ್ಸ್ ಗ್ಯಾಲರಿ ಬೆಂಗಳೂರಿನಲ್ಲಿ 'ಕ್ವಾಂಟಮ್' ಪ್ರದರ್ಶನ ಉದ್ಘಾಟನೆ
ಬೆಂಗಳೂರು, 23 ಜುಲೈ (ಹಿ.ಸ.): ಆ್ಯಂಕರ್:ವಿಜ್ಞಾನ, ಕಲೆ ಮತ್ತು ಸಾರ್ವಜನಿಕ ಸಂವಾದದ ಸಂಗಮವಾಗಿರುವ ''ಕ್ವಾಂಟಮ್'' ಪ್ರದರ್ಶನವನ್ನು ಆಗಸ್ಟ್ 8ರಂದು ಬಳ್ಳಾರಿ ರಸ್ತೆಯಲ್ಲಿರುವ ಸೈನ್ಸ್ ಗ್ಯಾಲರಿ ಬೆಂಗಳೂರಿನಲ್ಲಿ ಉದ್ಘಾಟಿಸಲಾಗುತ್ತಿದೆ. ಕ್ವಾಂಟಮ್ ವಿಜ್ಞಾನದ ಸಂಕೀರ್ಣ ಪರಿಕಲ್ಪನೆಗಳನ್ನು ಸಮಕಾಲೀನ
ಕ್ವಾಂಟಮ್ ಪ್ರದರ್ಶನ


ಬೆಂಗಳೂರು, 23 ಜುಲೈ (ಹಿ.ಸ.):

ಆ್ಯಂಕರ್:ವಿಜ್ಞಾನ, ಕಲೆ ಮತ್ತು ಸಾರ್ವಜನಿಕ ಸಂವಾದದ ಸಂಗಮವಾಗಿರುವ 'ಕ್ವಾಂಟಮ್' ಪ್ರದರ್ಶನವನ್ನು ಆಗಸ್ಟ್ 8ರಂದು ಬಳ್ಳಾರಿ ರಸ್ತೆಯಲ್ಲಿರುವ ಸೈನ್ಸ್ ಗ್ಯಾಲರಿ ಬೆಂಗಳೂರಿನಲ್ಲಿ ಉದ್ಘಾಟಿಸಲಾಗುತ್ತಿದೆ.

ಕ್ವಾಂಟಮ್ ವಿಜ್ಞಾನದ ಸಂಕೀರ್ಣ ಪರಿಕಲ್ಪನೆಗಳನ್ನು ಸಮಕಾಲೀನ ಕಲೆ, ಸಂಶೋಧನೆ ಮತ್ತು ಸಂವಾದದ ಮೂಲಕ ಸಾರ್ವಜನಿಕರಿಗೆ ಸುಲಭವಾಗಿ ಪರಿಚಯಿಸುವ ಉದ್ದೇಶದಿಂದ ಈ ಪ್ರದರ್ಶನ ಆಯೋಜಿಸಲಾಗಿದೆ. ಆರು ದೇಶಗಳ ಕಲಾವಿದರ ಕಲಾಕೃತಿಗಳು, ಸಂವಾದಾತ್ಮಕ ಪ್ರದರ್ಶನಗಳು, ತಲ್ಲೀನಗೊಳಿಸುವ ಕಲಾ ಸ್ಥಾಪನೆಗಳು, ಆಟಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿವೆ.

ಉದ್ಘಾಟನಾ ದಿನ ಬೆಳಿಗ್ಗೆ 11ರಿಂದ 12.30ರವರೆಗೆ ಮ್ಯಾಥ್ಯೂ ವುಡ್‌ಹ್ಯಾಮ್ ನೇತೃತ್ವದಲ್ಲಿ 'ಬಿಟ್ವೀನ್ ಪಾಥ್ಸ್' ಕಾರ್ಯಾಗಾರ ನಡೆಯಲಿದೆ. ಸಂಜೆ 4ರಿಂದ 5ರವರೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, 4.20ರಿಂದ 5ರವರೆಗೆ ಜಾಹ್ನವಿ ಫಾಲ್ಕೆ, ಅಶ್ರಿತಾ ಸಾಡು ಮತ್ತು ವಿಶ್ವಾಸ್ ಸೋಲಗಿ ಅವರ ಮಾರ್ಗದರ್ಶನದಲ್ಲಿ ಗ್ಯಾಲರಿ ವೀಕ್ಷಣೆ ಏರ್ಪಡಿಸಲಾಗಿದೆ.

ಸಂಜೆ 5ರಿಂದ 6ರವರೆಗೆ ಖ್ಯಾತ ವಿಜ್ಞಾನಿ ಸ್ಪೆಂಟಾ ವಾಡಿಯಾ ಅವರು 'ಕ್ವಾಂಟಮ್ ಮೆಕ್ಯಾನಿಕ್ಸ್ ಅಂಡ್ ದಿ ಯೂನಿವರ್ಸ್' ವಿಷಯದ ಕುರಿತು ಉದ್ಘಾಟನಾ ಉಪನ್ಯಾಸ ನೀಡಲಿದ್ದಾರೆ.

ವಿದ್ಯಾರ್ಥಿಗಳು, ಸಂಶೋಧಕರು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಕ್ವಾಂಟಮ್ ವಿಜ್ಞಾನದ ಹೊಸ ಆಯಾಮಗಳನ್ನು ಪರಿಚಯಿಸುವ ಉದ್ದೇಶದಿಂದ ಈ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande