ಖಾರಪ್ರಿಯರ ಮೆಚ್ಚಿನ ಆಂಧ್ರ ಗ್ರೀನ್ ಚಿಲ್ಲಿ ಚಿಕನ್
ಬೆಂಗಳೂರು, 19 ಜುಲೈ (ಹಿ.ಸ.): ಆ್ಯಂಕರ್: ಮಸಾಲೆಯುಕ್ತ ಖಾದ್ಯಗಳಲ್ಲಿ ಆಂಧ್ರ ಶೈಲಿಯ ಅಡುಗೆಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಅದರಲ್ಲೂ ಹಸಿರು ಮೆಣಸಿನಕಾಯಿಯ ಘಾಟು, ಕೊತ್ತಂಬರಿ ಹಾಗೂ ಪುದೀನಾದ ಸುವಾಸನೆ ಬೆರೆತ ಆಂಧ್ರ ಗ್ರೀನ್ ಚಿಲ್ಲಿ ಚಿಕನ್ ಖಾರಪ್ರಿಯರ ನೆಚ್ಚಿನ ಖಾದ್ಯವಾಗಿದೆ. ಕೆಂಪು ಮೆಣಸಿನ
Chilli chicken


ಬೆಂಗಳೂರು, 19 ಜುಲೈ (ಹಿ.ಸ.):

ಆ್ಯಂಕರ್:

ಮಸಾಲೆಯುಕ್ತ ಖಾದ್ಯಗಳಲ್ಲಿ ಆಂಧ್ರ ಶೈಲಿಯ ಅಡುಗೆಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಅದರಲ್ಲೂ ಹಸಿರು ಮೆಣಸಿನಕಾಯಿಯ ಘಾಟು, ಕೊತ್ತಂಬರಿ ಹಾಗೂ ಪುದೀನಾದ ಸುವಾಸನೆ ಬೆರೆತ ಆಂಧ್ರ ಗ್ರೀನ್ ಚಿಲ್ಲಿ ಚಿಕನ್ ಖಾರಪ್ರಿಯರ ನೆಚ್ಚಿನ ಖಾದ್ಯವಾಗಿದೆ. ಕೆಂಪು ಮೆಣಸಿನ ಪುಡಿ ಬಳಸದೆ, ತಾಜಾ ಹಸಿರು ಮಸಾಲೆಯಿಂದ ತಯಾರಿಸುವ ಈ ಖಾದ್ಯ ರುಚಿ ಮತ್ತು ಪರಿಮಳದಿಂದ ಎಲ್ಲರ ಮನಸೆಳೆಯುತ್ತದೆ.

ಈ ಖಾದ್ಯ ತಯಾರಿಸಲು ಹಸಿರು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಹಾಗೂ ಪುದೀನಾವನ್ನು ನುಣ್ಣಗೆ ರುಬ್ಬಿ ಮಸಾಲೆ ಸಿದ್ಧಪಡಿಸಲಾಗುತ್ತದೆ. ಚಿಕನ್‌ಗೆ ಮೊಸರು, ಅರಿಶಿನ, ಉಪ್ಪು ಮತ್ತು ಈ ಹಸಿರು ಮಸಾಲೆಯನ್ನು ಸೇರಿಸಿ ಸುಮಾರು 30 ನಿಮಿಷ ಮೆರಿನೇಟ್ ಮಾಡಿದರೆ ಮಸಾಲೆ ಚೆನ್ನಾಗಿ ಹೀರಿಕೊಳ್ಳುತ್ತದೆ.

ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಹಾಗೂ ಕರಿಬೇವಿನ ಒಗ್ಗರಣೆ ನೀಡಿ, ಈರುಳ್ಳಿಯನ್ನು ಬಂಗಾರದ ಬಣ್ಣ ಬರುವವರೆಗೆ ಹುರಿಯಬೇಕು. ಅದಕ್ಕೆ ಮೆರಿನೇಟ್ ಮಾಡಿದ ಚಿಕನ್ ಸೇರಿಸಿ ಚೆನ್ನಾಗಿ ಕಲಸಿ, ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ಮುಚ್ಚಳಿಟ್ಟು ಸಂಪೂರ್ಣವಾಗಿ ಬೇಯಿಸಬೇಕು. ಕೊನೆಯಲ್ಲಿ ಕರಿಮೆಣಸು ಪುಡಿ ಸೇರಿಸಿ ಎರಡು ನಿಮಿಷ ಕಲಸಿದರೆ ಸುವಾಸನೆಯ ಆಂಧ್ರ ಗ್ರೀನ್ ಚಿಲ್ಲಿ ಚಿಕನ್ ಸಿದ್ಧವಾಗುತ್ತದೆ.

ಈ ಖಾದ್ಯವನ್ನು ಬಿಸಿ ಅನ್ನ, ಚಪಾತಿ, ರೊಟ್ಟಿ ಅಥವಾ ಪರೋಟದೊಂದಿಗೆ ಸವಿದರೆ ಅತ್ಯುತ್ತಮ ರುಚಿ ಸಿಗುತ್ತದೆ. ಹೆಚ್ಚು ಖಾರ ಇಷ್ಟಪಡುವವರು ಹೆಚ್ಚುವರಿ ಹಸಿರು ಮೆಣಸಿನಕಾಯಿ ಬಳಸಬಹುದು. ಸರ್ವ್ ಮಾಡುವ ಮೊದಲು ಸ್ವಲ್ಪ ನಿಂಬೆ ರಸ ಹಿಂಡಿದರೆ ರುಚಿ ಮತ್ತಷ್ಟು ಹೆಚ್ಚಾಗುತ್ತದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande